ETV Bharat / bharat

'ಡ್ರ್ಯಾಗನ್'‌ ಸಾಮ್ರಾಜ್ಯ ವಿಸ್ತರಣಾ ದಾಹವನ್ನು 'ಆನೆ' ಪಳಗಿಸಬಲ್ಲುದೇ? ಹದಗೆಟ್ಟ ಸಂಬಂಧಕ್ಕೆ ಸಂಘರ್ಷದ ತಿರುವು

1950 ರ ದಶಕದ ಅಂತ್ಯದಲ್ಲಿ ಚೀನಾ ಪಶ್ಚಿಮಾಭಿಮುಖವಾಗಿ ಭಾರತದೊಳಕ್ಕೆ ಬಂದಿದ್ದರಿಂದಲೇ 1962 ರ ಇಂಡೊ-ಚೀನಾ ಯುದ್ಧಕ್ಕೆ ಕಾರಣವಾಯಿತು. 2002 ರಲ್ಲಿ ಎರಡೂ ದೇಶಗಳ ತಜ್ಞರ ಸಮಿತಿಯ ಸಭೆಯಲ್ಲಿ ನಕ್ಷೆಗಳನ್ನು ಹಸ್ತಾಂತರ ಮಾಡಲಾಗಿತ್ತು. ಆದರೆ ಚೀನಾ ನೀಡಿದ ನಕ್ಷೆಯಲ್ಲಿನ ಗಡಿ ರೇಖೆಯು 1962 ರ ಒಪ್ಪಂದ ಯಥಾಸ್ಥಿತಿಗಿಂತ ಬೇರೆಯಾಗಿತ್ತು. 2007 ರಲ್ಲಿ ಲಡಾಖ್ ವಲಯದ ಡೆಪ್ಸಾಂಗ್ ಹಾಗೂ ಸಿಕ್ಕಿಂ ಸೇರಿದಂತೆ ಇನ್ನೂ ಕೆಲ ಪ್ರದೇಶಗಳು ತನಗೆ ಸೇರಿವೆ ಎಂದು ಕ್ಯಾತೆ ತೆಗೆದಿತ್ತು.

INDIA-CHINA BORDER CONFLICTS
INDIA-CHINA BORDER CONFLICTS
author img

By

Published : Jun 16, 2020, 5:02 PM IST

ಭಾರತ ಹಾಗೂ ಚೀನಾಗಳ ಮಧ್ಯೆ ಕಳೆದ ಹಲವಾರು ದಶಕಗಳಿಂದ ಗಡಿಯಲ್ಲಿ ಒಂದಿಲ್ಲೊಂದು ರೀತಿಯ ಸಂಘರ್ಷ ನಡೆಯುತ್ತಲೇ ಬಂದಿದೆ. ಪ್ರಸ್ತುತ ಗಾಲ್ವನ್ ವ್ಯಾಲಿಯಲ್ಲಿ ನಡೆದ ಘರ್ಷಣೆಯಲ್ಲಿ ಎರಡೂ ಕಡೆ ಸಾವು-ನೋವು ಉಂಟಾಗಿರುವ ವರದಿಗಳು ಬರುತ್ತಿವೆ. 1950 ರಿಂದ ಇಲ್ಲಿಯವರೆಗೆ ಚೀನಾ-ಭಾರತ ಗಡಿ ಸಂಘರ್ಷದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ.

ಇತ್ತೀಚಿನ ಘರ್ಷಣೆಗಳು:

ವಾಸ್ತವ ನಿಯಂತ್ರಣ ರೇಖೆಯ ಬಳಿಯ ಯಥಾಸ್ಥಿತಿಯನ್ನು ಭಾರತ ಉಲ್ಲಂಘಿಸುತ್ತಿದೆ ಎಂದು ಚೀನಾ ಆರೋಪಿಸಿದೆ. ಗಾಲ್ವನ್ ವ್ಯಾಲಿ ಬಳಿಯಲ್ಲಿ ಭಾರತ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿಯನ್ನು ತಡೆಯಲು ಚೀನಾ ಭಾರತದೊಳಕ್ಕೆ ಸೈನಿಕರು ಹಾಗೂ ಯುದ್ಧವಾಹಕಗಳನ್ನು ನುಗ್ಗಿಸಿದ್ದೇ ಈಗಿನ ಸಂಘರ್ಷಕ್ಕೆ ಪ್ರಮುಖ ಕಾರಣವೆನ್ನಲಾಗಿದೆ.

ಗಡಿ ರೇಖೆಯನ್ನು ಬದಲಿಸುವುದು ಚೀನಾದ ಹಳೆಯ ಚಾಳಿ!

1950 ರ ದಶಕದ ಅಂತ್ಯದಲ್ಲಿ ಚೀನಾ ಪಶ್ಚಿಮಾಭಿಮುಖವಾಗಿ ಭಾರತದೊಳಕ್ಕೆ ಬಂದಿದ್ದರಿಂದಲೇ 1962 ರ ಇಂಡೊ-ಚೀನಾ ಯುದ್ಧಕ್ಕೆ ಕಾರಣವಾಯಿತು. 2002 ರಲ್ಲಿ ಎರಡೂ ದೇಶಗಳ ತಜ್ಞರ ಸಮಿತಿಯ ಸಭೆಯಲ್ಲಿ ನಕ್ಷೆಗಳನ್ನು ಹಸ್ತಾಂತರ ಮಾಡಲಾಗಿತ್ತು. ಆದರೆ ಚೀನಾ ನೀಡಿದ ನಕ್ಷೆಯಲ್ಲಿನ ಗಡಿ ರೇಖೆಯು 1962 ರ ಒಪ್ಪಂದ ಯಥಾಸ್ಥಿತಿಗಿಂತ ಬೇರೆಯಾಗಿತ್ತು. 2007 ರಲ್ಲಿ ಲಡಾಖ್ ವಲಯದ ಡೆಪ್ಸಾಂಗ್ ಹಾಗೂ ಸಿಕ್ಕಿಂ ಸೇರಿದಂತೆ ಇನ್ನೂ ಕೆಲ ಪ್ರದೇಶಗಳು ತನಗೆ ಸೇರಿವೆ ಎಂದು ಕ್ಯಾತೆ ತೆಗೆದಿತ್ತು. 2017 ರಲ್ಲಿ ಚೀನಾ ತನ್ನಷ್ಟಕ್ಕೆ ತಾನೇ ಗಡಿ ನಿಯಂತ್ರಣ ರೇಖೆಯನ್ನು ಬದಲಾಯಿಸಲು ಯತ್ನಿಸಿತು. ಚೀನಾ, ಭಾರತ ಮತ್ತು ಭೂತಾನ್ ದೇಶಗಳ ಟ್ರೈಜಂಕ್ಷನ್ ಬದಲಾಯಿಸಲು ಯತ್ನಿಸಿದಾಗ ಡೋಕ್ಲಾಮ್ ಸಂಘರ್ಷ ಏರ್ಪಟ್ಟಿತ್ತು. 2006 ರವರೆಗೆ ಚೀನಾ ಪಡೆಗಳು ವಾಸ್ತವ ಗಡಿ ನಿಯಂತ್ರಣ ರೇಖೆಗಿಂತ ಹಲವಾರು ಕಿಮೀ ದೂರದಲ್ಲಿ ಬೀಡು ಬಿಟ್ಟಿರುತ್ತಿದ್ದವು.

ವಿವಾದ ಪರಿಹಾರದ ಯತ್ನಗಳು:

2018 ರಲ್ಲಿ ವುಹಾನ್​ನಲ್ಲಿ ಹಾಗೂ 2019 ರಲ್ಲಿ ಚೆನ್ನೈನಲ್ಲಿ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಧ್ಯೆ ಶೃಂಗ ಮಟ್ಟದ ಮಾತುಕತೆಗಳು ನಡೆದವು. ಎರಡೂ ಕಡೆಯಿಂದ ನುಸುಳುವಿಕೆ ತಡೆಯಲು 1980 ರಿಂದಲೇ ಎರಡೂ ದೇಶಗಳು ಹಲವಾರು ಶಿಷ್ಟಾಚಾರಗಳನ್ನು ರೂಪಿಸುತ್ತಿವೆ.

ಲಡಾಖ್​ ಮೇಲೆ ನಿಯಂತ್ರಣಕ್ಕೆ ಚೀನಾ ಯತ್ನ!

ಲಡಾಖ್ ವಲಯದಲ್ಲಿ ಈಗ ನಡೆಯುತ್ತಿರುವ ಸಂಘರ್ಷಗಳು ಚೀನಾದ ಹತಾಶೆ ಮನಸ್ಥಿತಿಯ ಪರಿಣಾಮ ಎನ್ನಲಾಗಿದೆ. ಚೀನಾದಲ್ಲಿ ಸರ್ವಾಧಿಕಾರ ಆಡಳಿತದ ಸರ್ಕಾರವಿದ್ದು, ಸದ್ಯ ಕುಸಿಯುತ್ತಿರುವ ಆಂತರಿಕ ಆರ್ಥಿಕ ವ್ಯವಸ್ಥೆಯಿಂದ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಚೀನಾ ಭಾರತದೊಂದಿಗೆ ಗಡಿಯಲ್ಲಿ ಜಗಳಕ್ಕೆ ಮುಂದಾಗುತ್ತಿದೆ. ಹಾಗೆಯೇ ಕೊರೊನಾ ವೈರಸ್​ ಅನ್ನು ಹರಡಿದ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಚೀನಾ, ಅದರಿಂದ ಗಮನ ಬೇರೆಡೆ ಸೆಳೆಯಲು ಯುದ್ಧ ರೀತಿಯ ವಾತಾವರಣ ಸೃಷ್ಟಿಸುತ್ತಿದೆ.

ಹದಗೆಟ್ಟ ಚೀನಾ-ಅಮೆರಿಕ ಸಂಬಂಧ

ಚೀನಾದಲ್ಲಿ ಆಡಳಿತ ನಡೆಸುತ್ತಿರುವ ಕಮ್ಯುನಿಸ್ಟ್ ಪಾರ್ಟಿ ಆಫ್​ ಚೀನಾ ಆಂತರಿಕ ಹಾಗೂ ಬಾಹ್ಯ ರೂಪದಲ್ಲಿ ಅಸ್ತಿತ್ವದ ಬೆದರಿಕೆಯನ್ನು ಎದುರಿಸುವಂತಾಗಿದೆ. ಅಮೆರಿಕ ಸತತವಾಗಿ ಚೀನಾ ವಸ್ತುಗಳ ಮೇಲೆ ನಿರ್ಬಂಧ ಹೇರುತ್ತಿದ್ದು, ಚೀನಾ ಕೂಡ ಅಷ್ಟೇ ಪ್ರಬಲವಾಗಿ ಪ್ರತಿಕ್ರಿಯೆ ನೀಡುತ್ತಿದೆ. ಹಾಂಗ್​ಕಾಂಗ್​ನ ಸಾರ್ವಭೌಮತ್ವವನ್ನು ರದ್ದು ಮಾಡಿ ಅಲ್ಲಿನ ಪ್ರಜಾಪ್ರಭುತ್ವ ಪರ ಹೋರಾಟವನ್ನು ಹತ್ತಿಕ್ಕಿದ ಬೀಜಿಂಗ್ ವಿರುದ್ಧ ಅಮೆರಿಕ ಕೆಂಡ ಕಾರುತ್ತಿದೆ. ತೈವಾನ್ ಅನ್ನು ತನ್ನ ದೇಶದೊಳಕ್ಕೆ ಸೇರಿಸಿಕೊಳ್ಳುವ ಚೀನಾದ ಕುತಂತ್ರಗಳಿಗೆ ಅಮೆರಿಕ ಪ್ರಮುಖ ಅಡ್ಡಗಾಲಾಗಿದೆ. ಚೀನಾ ತನ್ನ ದುಸ್ಸಾಹಸಗಳನ್ನು ಮುಂದುವರಿಸಿದ್ದೇ ಆದಲ್ಲಿ ಸೌತ್​ ಚೀನಾ ಸಮುದ್ರದಲ್ಲಿ ಚೀನಾ - ಅಮೆರಿಕ ಮಧ್ಯೆ ಯುದ್ಧ ಸ್ಥಿತಿ ನಿರ್ಮಾಣವಾಗಬಹುದಾಗಿದೆ. ಇಂಥ ಪರಿಸ್ಥಿತಿ ನಿರ್ಮಾಣವಾದಲ್ಲಿ ಲಡಾಖ್​ನಲ್ಲಿ ನಡೆಯುತ್ತಿರುವ ಸಂಘರ್ಷವು ದೊಡ್ಡ ಮಟ್ಟದ ಯುದ್ಧ ಸ್ಥಿತಿಯ ಭಾಗವಾಗಬಹುದಾಗಿದೆ.

ಭಾರತ-ಚೀನಾ ಗಡಿ ಸಂಘರ್ಷದ ಇತಿಹಾಸ

ಟಿಬೆಟ್​ ಸಂಘರ್ಷ (1950): ಟಿಬೆಟ್​ ಅನ್ನು ಚೀನಾ ಆಕ್ರಮಿಸಿಕೊಂಡ ನಂತರ ಅಲ್ಲಿನ ಧರ್ಮಗುರು ದಲಾಯಿ ಲಾಮಾ ಅವರಿಗೆ ಭಾರತ ಆಶ್ರಯ ನೀಡಿತು. ದಲಾಯಿ ಲಾಮಾ ಓರ್ವ ಅಪಾಯಕಾರಿ ಧರ್ಮಗುರು ಎಂದು ಚೀನಾ ನಂಬಿದ್ದು, ಅದೇ ಕಾರಣಕ್ಕಾಗಿ ಭಾರತದೊಂದಿಗೆ ಜಟಾಪಟಿ ನಡೆಸುತ್ತಿದೆ.

ಇಂಡೊ-ಚೀನಾ ಯುದ್ಧ (1962): ಗಡಿ ವಿವಾದದ ಹಿನ್ನೆಲೆಯಲ್ಲಿ 1962 ರಲ್ಲಿ ಭಾರತ ಹಾಗೂ ಚೀನಾಗಳ ಮಧ್ಯೆ ಭೀಕರ ಯುದ್ಧ ನಡೆಯಿತು. ಈ ಸಮಯದಲ್ಲಿ ಚೀನಾ ಪಡೆಗಳು ಭಾರತದ ಅಕ್ಸಾಯ್ ಚಿನ್ ಹಾಗೂ ಲಡಾಖ್​ನ ಡೆಮ್ಚೋಕ್ ಪ್ರದೇಶಗಳನ್ನು ಆಕ್ರಮಿಸಿಕೊಂಡವು.

ಎರಡು ಗಡಿ ಸಂಘರ್ಷಗಳು (1967): ನಾಥು ಲಾ ಹಾಗೂ ಚೋ ಲಾ ಪಾಸ್​ ಬಳಿ ಎರಡೂ ಕಡೆಯಿಂದ ಭಾರಿ ಪ್ರಮಾಣದ ಗುಂಡಿನ ದಾಳಿ ನಡೆದಿತ್ತು. ಈ ದಾಳಿ ಸತತವಾಗಿ 4 ದಿನ ಮುಂದುವರೆದಿತ್ತು.

ಅರುಣಾಚಲ ಪ್ರದೇಶ ವಿವಾದ (1986): ಅರುಣಾಚಲ ಪ್ರದೇಶ ವಿಷಯವಾಗಿ 1986 ರಲ್ಲಿ ಸಮದೋರೊಂಗ್ ಚು ವ್ಯಾಲಿ ಪ್ರದೇಶದಲ್ಲಿ ಸಂಘರ್ಷ ಏರ್ಪಟ್ಟಿತ್ತು.

ಡೋಕ್ಲಾಮ್ ವಿವಾದ (2017): ಡೋಕ್ಲಾಮ್ ಬಳಿ ಚೀನಾ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಭಾರತ ಹಾಗೂ ಭೂತಾನ್​ಗಳು ಇದನ್ನು ತಡೆಯಲು ಯತ್ನಿಸಿದ್ದರಿಂದ ಭಾರಿ ಘರ್ಷಣೆ ನಡೆದಿತ್ತು. ಡೋಕ್ಲಾಮ್ ಪ್ರದೇಶವು ಸಿಲಿಗುರಿ ಕಾರಿಡಾರ್ ಬಳಿಯಿದೆ. ಅತಿ ಚಿಕ್ಕ ಕಡಿದಾದ ಈ ಮಾರ್ಗವು ಈಶಾನ್ಯ ರಾಜ್ಯಗಳೊಂದಿಗೆ ಭಾರತದ ಸಂಪರ್ಕಕ್ಕೆ ಏಕೈಕ ರಸ್ತೆ ಮಾರ್ಗವಾಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.