ನವದೆಹಲಿ: ಲಿಪುಲೆಖ್, ಕಲಾಪಣಿ ಮತ್ತು ಲಿಂಪಿಯಾಧುರಾವನ್ನು ತನ್ನ ದೇಶದ ಭಾಗವಾಗಿ ಚಿತ್ರಿಸಿದ ಹೊಸ ನಕ್ಷೆಯನ್ನು ನವೀಕರಿಸಲು ಸಾಂವಿಧಾನಿಕ ತಿದ್ದುಪಡಿ ತರುವ ಯೋಜನೆಯನ್ನು ನೇಪಾಳ ಸರ್ಕಾರ ಮುಂದೂಡಿದೆ.
ಈ ನಡೆಯ ಹಿಂದೆ ಭಾರತವು ನೇಪಾಳದ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ವಿಷಯ ಗಂಭೀರವಾಗಿದ್ದು, ಭಾರತ ಮತ್ತು ನೇಪಾಳದ ನಡುವಿನ ಸಂಬಂಧದಿಂದಾಗಿ, ಹೆಚ್ಚು ಸಮಸ್ಯೆ ಉದ್ಭವಿಸಿಲ್ಲವೆಂದು ಮೂಲಗಳು ಹೇಳಿವೆ.
ಭಾರತದೊಂದಿಗಿನ ಗಡಿ ವಿವಾದದ ನಡುವೆಯೂ ನೇಪಾಳ ಕಳೆದ ವಾರ ದೇಶದ ಪರಿಷ್ಕೃತ ರಾಜಕೀಯ ಮತ್ತು ಆಡಳಿತಾತ್ಮಕ ನಕ್ಷೆಯನ್ನು ಬಿಡುಗಡೆ ಮಾಡಿ, ಭಾರತದ ಪ್ರದೇಶಗಳಾದ ಲಿಪುಲೆಖ್, ಕಲಾಪಣಿ ಮತ್ತು ಲಿಂಪಿಯಾಧುರಾಗಳ ಮೇಲೆ ತನ್ನ ಹಕ್ಕು ಸಾಧಿಸಿತ್ತು. ಇದು ಸ್ವೀಕಾರಾರ್ಹವಲ್ಲ ಎಂದು ಭಾರತ ಪ್ರತಿಕ್ರಿಯಿಸಿತು. ಹೀಗಾಗಿ ನೇಪಾಳ ಸರ್ಕಾರ ನಕ್ಷೆ ಬದಲಿಸುವ ಕಾರ್ಯವನ್ನು ಮುಂದೂಡಿದೆ.