ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ಮತ್ತೊಂದು ಮೈಲಿಗಲ್ಲು ಎಂಬಂತೆ ಕೇವಲ 11 ದಿನಗಳಲ್ಲಿ 2 ಮಿಲಿಯನ್ ಕೊರೊನಾ ವ್ಯಾಕ್ಸಿನ್ ಡೋಸ್ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ದೇಶದಲ್ಲಿ ಇಲ್ಲಿಯವರೆಗೆ 29,28,053 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿದೆ. ಎರಡು ಮಿಲಿಯನ್ ಡೋಸ್ಗಳನ್ನು ನೀಡಲು ಅಮೆರಿಕ 15 ದಿನಗಳನ್ನು ತೆಗೆದುಕೊಂಡಿದ್ದರೆ, ಇಸ್ರೇಲ್ 27, ಇಂಗ್ಲೆಂಡ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) 37 ದಿನಗಳನ್ನು ತೆಗೆದುಕೊಂಡಿದೆ. ಆದರೆ, ಭಾರತ ಅತಿ ವೇಗವಾಗಿ ಅಂದರೆ ಕೇವಲ 11 ದಿನಗಳಲ್ಲಿ ಈ ಸಾಧನೆ ಮಾಡಿದೆ.
-
Under the leadership of Hon’ble PM Shri @narendramodi, India has achieved yet another milestone! We have become the fastest country to administer 2 million doses of #COVID19 Vaccine in just 11 days. #LargestVaccineDrive #IndiaFightsCorona pic.twitter.com/pAClr11acE
— MyGovIndia (@mygovindia) January 28, 2021 " class="align-text-top noRightClick twitterSection" data="
">Under the leadership of Hon’ble PM Shri @narendramodi, India has achieved yet another milestone! We have become the fastest country to administer 2 million doses of #COVID19 Vaccine in just 11 days. #LargestVaccineDrive #IndiaFightsCorona pic.twitter.com/pAClr11acE
— MyGovIndia (@mygovindia) January 28, 2021Under the leadership of Hon’ble PM Shri @narendramodi, India has achieved yet another milestone! We have become the fastest country to administer 2 million doses of #COVID19 Vaccine in just 11 days. #LargestVaccineDrive #IndiaFightsCorona pic.twitter.com/pAClr11acE
— MyGovIndia (@mygovindia) January 28, 2021
ಲಸಿಕೆ ಹಾಕಿಸಿಕೊಂಡವರಿಗೆ ಸೌಮ್ಯ ಜ್ವರ, ತಲೆಸುತ್ತುವಿಕೆ, ಅಲರ್ಜಿ, ತಲೆನೋವಿನಂತಹ ಸಣ್ಣಪುಟ್ಟ ವ್ಯತ್ಯಾಸಗಳು ಕಂಡುಬರುವುದು ಸಹಜ. ಯಾವುದೇ ಲಸಿಕೆ ಪಡೆದರೂ ಅಡ್ಡ ಪರಿಣಾಮಗಳು ಇದ್ದೇ ಇರುತ್ತದೆ. ನಮ್ಮ ಲಸಿಕೆಗಳು ಸುರಕ್ಷಕ ಹಾಗೂ ಪರಿಣಾಮಕಾರಿ. ಲಸಿಕೆ ಪಡೆದ ಕೆಲ ಆರೋಗ್ಯ ಕಾರ್ಯಕರ್ತರು ಮೃತಪಟ್ಟಿದ್ದಾರೆ. ಆದರೆ ಈ ಸಾವುಗಳು ಕೊರೊನಾ ವ್ಯಾಕ್ಸಿನೇಷನ್‌ಗೆ ಸಂಬಂಧಿಸಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯವು 'ವಿಶ್ವದ ಬಹುದೊಡ್ಡ ಆಸ್ತಿ': ವಿಶ್ವಸಂಸ್ಥೆ ಬಣ್ಣನೆ
ಜನವರಿ 16ರಿಂದ ಭಾರತದಲ್ಲಿ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನ ಆರಂಭಗೊಂಡಿದೆ. ಎರಡು ದೇಶೀಯ ಕೊರೊನಾ ಲಸಿಕೆಗಳಾದ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಅನ್ನು ವಿತರಣೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾರ್ಮಿಕರು ಸೇರಿ ಒಟ್ಟು ಮೂರು ಕೋಟಿ ಮಂದಿಗೆ ಲಸಿಕೆ ಹಾಕಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇನ್ನು ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯವು 'ವಿಶ್ವದ ಅತ್ಯುತ್ತಮ ಆಸ್ತಿ' ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.