ವಾಷಿಂಗ್ಟನ್ (ಯು.ಎಸ್): ವಿಶ್ವಸಂಸ್ಥೆಯ ಮಹಿಳೆಯರ ಸ್ಥಿತಿಗತಿ ಆಯೋಗ ಹಾಗೂ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ (ಇಕೋಸೊಕ್) ಸದಸ್ಯತ್ವವನ್ನು ಭಾರತಕ್ಕೆ ನೀಡಲಾಗಿದೆ ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್.ತಿರುಮುರ್ತಿ ತಿಳಿಸಿದ್ದಾರೆ.
"ಭಾರತವು ಪ್ರತಿಷ್ಠಿತ ಇಕೋಸೊಕ್ನಲ್ಲಿ ಸ್ಥಾನವನ್ನು ಗೆದ್ದಿದೆ! ಮಹಿಳೆಯರ ಸ್ಥಿತಿಗತಿ ಆಯೋಗದ (ಸಿಎಸ್‌ಡಬ್ಲ್ಯು) ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ. ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ನಮ್ಮ ಬದ್ಧತೆ ಹಾಗೂ ಪ್ರಯತ್ನಗಳಿಗೆ ಇದು ಅನುಮೋದನೆಯಾಗಿದೆ. ಸದಸ್ಯ ರಾಷ್ಟ್ರಗಳ ಬೆಂಬಲಕ್ಕಾಗಿ ಧನ್ಯವಾದ" ಎಂದು ಟಿ.ಎಸ್.ತಿರುಮುರ್ತಿ ಟ್ವೀಟ್ ಮಾಡಿದ್ದಾರೆ.
ಭಾರತ, ಅಫ್ಘಾನಿಸ್ತಾನ ಮತ್ತು ಚೀನಾ ಮಹಿಳೆಯರ ಸ್ಥಿತಿಗತಿ ಆಯೋಗದ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. 54 ಸದಸ್ಯರಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ಮತದಾನದಲ್ಲಿ ಗೆದ್ದಿದ್ದು, ಚೀನಾಕ್ಕೆ ಸಾಧ್ಯವಾಗಲಿಲ್ಲ.
ನಾಲ್ಕು ವರ್ಷಗಳ ಕಾಲ ಅಂದರೆ 202ರಿಂದ 2025ರವರೆಗೆ ಭಾರತ ವಿಶ್ವಸಂಸ್ಥೆಯ ಮಹಿಳೆಯರ ಸ್ಥಿತಿಗತಿ ಆಯೋಗದ ಸದಸ್ಯತ್ವ ಹೊಂದಲಿದೆ.