ನವದೆಹಲಿ: ಪ್ರಧಾನಿ ಮೋದಿ ಇಂದಿನಿಂದ ಎರಡು ದಿನಗಳ ಕಾಲ ಸೌದಿ ಅರೇಬಿಯಾ ಪ್ರವಾಸ ಕೈಗೊಳ್ಳುತ್ತಿದ್ದು, ಉಭಯ ದೇಶಗಳ ಸಂಬಂಧ ವೃದ್ಧಿ ನಿಟ್ಟಿನಲ್ಲಿ ಭಾರಿ ಮಹತ್ವ ಪಡೆದಿದೆ.
ಇಂಧನ, ರಕ್ಷಣೆ, ನಾಗರಿಕ ವಿಮಾನಯಾನ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಮೋದಿ ಪ್ರವಾಸದಲ್ಲಿ ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕಲಿವೆ.
"ಪ್ರಧಾನಿ ಮೋದಿಯವರ ಸೌದಿ ಅರೇಬಿಯಾ ಪ್ರವಾಸದಲ್ಲಿ ಒಟ್ಟು 12 ವಿವಿಧ ಒಪ್ಪಂದಗಳಿಗೆ ಸಹಿ ಬೀಳಲಿವೆ. ರಕ್ಷಣೆ, ನವೀಕರಿಸಬಹುದಾದ ಇಂಧನ ಹಾಗೂ ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದ ಒಪ್ಪಂದ ಎಲ್ಲಕ್ಕಿಂತ ಹೆಚ್ಚಿನ ಮಹತ್ವ ಪಡೆದಿದೆ. 2016ರ ಬಳಿಕ ಮೊದಲ ಬಾರಿಗೆ ಮೋದಿ ಸೌದಿ ಪ್ರವಾಸ ಕೈಗೊಳ್ಳುತ್ತಿದ್ದು, ಈ ಪ್ರವಾಸ ಐತಿಹಾಸಿಕವಾಗಿರಲಿದೆ" ಎಂದು ರಿಯಾದ್ನಲ್ಲಿರುವ ಭಾರತೀಯ ರಾಯಭಾರಿ ಔಸಫ್ ಸಯೀದ್ ಹೇಳಿದ್ದಾರೆ.
-
Prime Minister Narendra Modi to embark on a two-day visit to Saudi Arabia today. (file pic) pic.twitter.com/UpJmWAl1LU
— ANI (@ANI) October 28, 2019 " class="align-text-top noRightClick twitterSection" data="
">Prime Minister Narendra Modi to embark on a two-day visit to Saudi Arabia today. (file pic) pic.twitter.com/UpJmWAl1LU
— ANI (@ANI) October 28, 2019Prime Minister Narendra Modi to embark on a two-day visit to Saudi Arabia today. (file pic) pic.twitter.com/UpJmWAl1LU
— ANI (@ANI) October 28, 2019
ಇಂದು ಸೌದಿ ತಲುಪಲಿರುವ ಮೋದಿ, ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. 29ರಂದು ಭವಿಷ್ಯದ ಹೂಡಿಕೆ ಉಪಕ್ರಮ ವೇದಿಕೆಯನ್ನು(Future Investment Initiative Forum) ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.
ಸೌದಿ ಅರೇಬಿಯಾದ ವಿಷನ್-2030 ಅಡಿಯಲ್ಲಿ ಕಾರ್ಯತಂತ್ರದ ಸಹಭಾಗಿತ್ವಕ್ಕಾಗಿ ಎಂಟು ದೇಶಗಳನ್ನು ಆಯ್ಕೆ ಮಾಡಿಕೊಂಡಿದೆ. ಈ ಎಂಟರಲ್ಲಿ ಭಾರತ ಸೇರಿದಂತೆ ಚೀನಾ, ಯುಕೆ, ಅಮೆರಿಕ, ಫ್ರಾನ್ಸ್, ಜರ್ಮನಿ, ದಕ್ಷಿಣ ಕೊರಿಯಾ ಹಾಗೂ ಜಪಾನ್ ದೇಶಗಳಿವೆ.
ಮುಸ್ಲಿಂ ರಾಷ್ಟ್ರಗಳಲ್ಲೇ ಅತ್ಯಂತ ಬಲಿಷ್ಠವಾಗಿರುವ ಸೌದಿ ಅರೇಬಿಯಾ ಜೊತೆಗಿನ ಭಾರತ ಸಂಬಂಧ ವರ್ಧನೆ ಪಾಕಿಸ್ತಾನವನ್ನು ಹತ್ತಿಕ್ಕಲು ಅತ್ಯಂತ ಸಹಕಾರಿಯಾಗಲಿದೆ. ರಾಜತಾಂತ್ರಿಕ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸೌದಿ ಅರೇಬಿಯಾ ಪ್ರವಾಸ ಒಪ್ಪಂದಗಳಾಚೆ ಮಹತ್ವ ಪಡೆದಿದೆ.