ನವದೆಹಲಿ: ಜೂನ್ 15ರ ರಾತ್ರಿ ಗಾಲ್ವಾನ್ ವ್ಯಾಲಿಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ಬಳಿಕ ಭಾರತ ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಭಾರತೀಯ ಸೇನೆಯ ಕಾರ್ಪ್ಸ್ ಕಮಾಂಡರ್‌ಗಳು ಮತ್ತು ಚೀನಾದ ಪಿಎಲ್‌ಎ ಪೂರ್ವ ಲಡಾಕ್‌ನ ಮೊಲ್ಡೊದಲ್ಲಿ ಸಭೆ ನಡೆಸಿದ್ದಾರೆ.
ಉದ್ವಿಗ್ನತೆ ತಗ್ಗಿಸಲು ಜೂನ್ 6ರಂದು ನಡೆದ ಮೊದಲ ಸಭೆಯ ಬಳಿಕ ಇದು ಎರಡನೆಯ ಸಭೆಯಾಗಿದೆ.
14 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ದಕ್ಷಿಣ ಕ್ಸಿನ್‌ಜಿಯಾಂಗ್ ಮಿಲಿಟರಿ ಜಿಲ್ಲಾ ಮುಖ್ಯಸ್ಥ ಮೇಜರ್ ಜನರಲ್ ಲಿಯು ಲಿನ್ ನಡುವೆ ಸಭೆ ನಡೆದಿದೆ.
ಎರಡೂ ಕಡೆಯ ಅನೇಕ ಸೈನಿಕರು ಹುತಾತ್ಮರಾಗಿರುವ ಹಿನ್ನೆಲೆ ಗಾಲ್ವಾನ್ ವ್ಯಾಲಿ ಘರ್ಷಣೆಯ ಕುರಿತು ಮಹತ್ತರ ವಿಚಾರಗಳ ಚರ್ಚೆ ನಡೆದಿದೆ.