ಹೈದರಾಬಾದ್: ಆರೋಗ್ಯ ವಿಮಾ ಕಂಪನಿಗಳು ತಮ್ಮ ಪಾಲಿಸಿಗಳಲ್ಲಿ COVID-19ನನ್ನು ಸೇರಿಸಿಕೊಳ್ಳಬೇಕೆಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎ) ನಿರ್ದೇಶಿಸಿದೆ.
ಕೊರೊನಾ ವೈರಸ್ ಸೋಂಕಿತರು ಅನುಭವಿಸುವ ತೊಂದರೆಗಳನ್ನು ನಿವಾರಿಸುವ ದೃಷ್ಟಿಯಿಂದ ಈ ಆದೇಶ ಮಾಡಲಾಗಿದೆ. ಕೊರೊನಾ ವೈರಸ್ಗೆ ಪಾಲಿಸಿದಾರರು ತುತ್ತಾದರೆ ಈ ಕೆಳಗಿನ ಮಾನದಂಡಗಳ ಪ್ರಕಾರ ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ.
i) ಕೊರೊನಾ ವೈರಸ್ ಇದೆ ಎಂದು ಖಚಿತವಾದ ತಕ್ಷಣ ಪಾಲಿಸಿದಾರರು ವಿಮೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ii) ಈ ವೇಳೆ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಕಂಪನಿಯೇ ಭರಿಸಲಿದ್ದು. ಅದನ್ನು ಕೆಲವು ನಿಯಮ ಮತ್ತು ಷರತ್ತುಗಳ ಚೌಕಟ್ಟಿನಲ್ಲಿ ನೀಡಲಾಗುವುದು.
iii) COVID19 ರ ಅಡಿಯಲ್ಲಿ ಬಂದಂತಹ ಎಲ್ಲ ಪಾಲಿಸಿದಾರರ ಅರ್ಜಿಗಳನ್ನು ತಿರಸ್ಕರಿಸುವ ಮೊದಲು, ಹಕ್ಕುಗಳ ಪರಿಶೀಲನಾ ಸಮಿತಿ ಸಂಪೂರ್ಣವಾಗಿ ಅರ್ಜಿಗಳನ್ನು ಪರಿಶೀಲಿಸುತ್ತದೆ.
2. ಅಗತ್ಯವಿದ್ದಾಗ ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸುವ ಸಲುವಾಗಿ, ನಿರ್ದಿಷ್ಟ ಕಾಯಿಲೆಗಳಿಗೆ ವಿಮೆಯನ್ನು ಪರಿಚಯಿಸುತ್ತಿದ್ದಾರೆ. ವಿವಿಧ ವಿಭಾಗಗಳ ಆರೋಗ್ಯ ವಿಮೆಯ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶಕ್ಕಾಗಿ, ಕೊರೊನಾ ವೈರಸ್‌ನ ಚಿಕಿತ್ಸೆಯ ವೆಚ್ಚವನ್ನು ಬರಿಸಲು ಹೊಸ ನೀತಿಗಳನ್ನು ತಯಾರಿಸಲು ಐಆರ್ಡಿಎ ವಿಮಾ ಕಂಪನಿಗಳಿಗೆ ಸೂಚಿಸಿದೆ.
3. ಐಆರ್ಡಿಎ ಕಾಯ್ದೆ 1999 ರ ಸೆಕ್ಷನ್ 14 (2) (ಇ) ನ ನಿಬಂಧನೆಗಳ ಅಡಿಯಲ್ಲಿ ಪಾಲಿಸಿದಾರರಿಗೆ ವಿಮೆಯನ್ನು ನೀಡಲಾಗುತ್ತದೆ.
ಒಂದು ವೇಳೆ ಈ ಯೋಜನೆ ಜಾರಿಗೆ ಬಂದರೆ ಕೊರೊನಾಗೆ ವಿಮೆ ಸೌಲಭ್ಯ ನೀಡಿದ ಮೊದಲ ರಾಷ್ಟ್ರ ಭಾರತವಾಗಲಿದೆ. ಈಗಾಗಲೆ ಮಾರಣಾಂತಿಕ ಕೊರೊನಾಕ್ಕೆ ವಿಶ್ವದಾದ್ಯಂತ ಮೂರು ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದರೆ, 90 ಸಾವಿರಕ್ಕೂ ಹೆಚ್ಚು ಜನರು ಇದರ ಸೋಕಿಗೆ ತುತ್ತಾಗಿದ್ದಾರೆ. ಭಾರತದಲ್ಲೂ ಕೂಡ 69 ಮಂದಿಗೆ ಸೋಕು ತಗುಲಿದೆ.