ಡುಂಗರಪುರ(ರಾಜಸ್ಥಾನ): ಪ್ರಪಂಚದಾದ್ಯಂತ ಕೊರೊನಾ ಹಾವಳಿ ಜೋರಾಗಿದ್ದು, ಅನೇಕ ಮದುವೆ ಸಮಾರಂಭಗಳು ಇದೇ ಕಾರಣದಿಂದಾಗಿ ಮುಂದೂಡಿಕೆಯಾಗಿವೆ. ಆದರೆ ನಿಗದಿ ಮಾಡಿದ ದಿನಾಂಕದಂದೇ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿರುವ ಜೋಡಿ ವಿಡಿಯೋ ಕಾಲ್ ಮೂಲಕ ಮದುವೆ ಮಾಡಿಕೊಂಡಿದೆ.
ದಕ್ಷಿಣ ಆಫ್ರಿಕಾದಲ್ಲಿರುವ ಯುವಕ ಹಾಗೂ ರಾಜಸ್ಥಾನದ ಡುಂಗರಪುರದಲ್ಲಿರುವ ಯುವತಿ ವಿಡಿಯೋ ಕಾಲ್ನಲ್ಲೇ ಮದುವೆಯಾಗಿದ್ದಾರೆ. ಕೊರೊನಾ ಅಬ್ಬರ ಜೋರಾಗಿರುವ ಕಾರಣ ಆಫ್ರಿಕಾದಲ್ಲಿರುವ ಮಾರ್ಕಂಡೆ ತ್ರಿವೇದಿ ಭಾರತಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಆನ್ಲೈನ್ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ರುಚಿ ಪಾಂಡೆ-ಮಾರ್ಕಂಡೆ ತ್ರಿವೇದಿ ಮೂಲತ ರಾಜಸ್ಥಾನದ ಡುಂಗರಪುರದವರಾಗಿದ್ದು, ಇವರ ಮದುವೆ ಜೂನ್ 29ರಂದು ನಿಶ್ಚಯವಾಗಿತ್ತು. ಆದರೆ ಕೊರೊನಾ ಹಾವಳಿ ಜೋರಾಗಿರುವ ಕಾರಣ ಬೇರೆ ದಾರಿ ಕಾಣದೆ ಆನ್ಲೈನ್ ಮೂಲಕ ಮದುವೆ ಮಾಡಿಸಲಾಗಿದ್ದು, ವಧು-ವರನ ಕುಟುಂಬಸ್ಥರು ಈ ವೇಳೆ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.
ದಕ್ಷಿಣ ಆಫ್ರಿಕಾದಲ್ಲಿ ಕಳೆದ ಮೂರು ವರ್ಷದಿಂದ ಮಾರ್ಕಂಡೆ ವಾಸವಾಗಿದ್ದು, ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ರುಚಿ ಪಾಂಡೆ ಡುಂಗರಪುರದಲ್ಲಿ ವಾಸವಾಗಿದ್ದು, ಆರು ತಿಂಗಳ ಹಿಂದೆ ಇವರ ನಿಶ್ಚಿತಾರ್ಥವಾಗಿತ್ತು.