ಶ್ರೀನಗರ: ರಾತ್ರೋರಾತ್ರಿ ಹೈಡ್ರಾಮಾ, ಮಾಜಿ ಮುಖ್ಯಮಂತ್ರಿಗಳಿಗೆ ಗೃಹ ಬಂಧನ, ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿ, ಮಹತ್ವದ ವಿಧಿ ರದ್ದು. ಸದ್ಯ ಈ ಎಲ್ಲಾ ಘಟನಾವಳಿ ನಡೆದು 12 ದಿನ ಕಳೆದಿದ್ದು ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಕಾಶ್ಮೀರ ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿದೆ.
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ಹಿಂದಿನ ರಾತ್ರಿ ಮುನ್ನೆಚ್ಚರಿಕಾ ಕ್ರಮವಾಗಿ ಮಾಜಿ ಸಿಎಂಗಳಾದ ಒಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿಯನ್ನು ಹರಿ ನಿವಾಸ್ ಪ್ಯಾಲೇಸ್ನಲ್ಲಿ ಗೃಹ ಬಂಧನದಲ್ಲಿಡಲಾಗಿತ್ತು. ನಂತರದಲ್ಲಿ ಇಬ್ಬರನ್ನೂ ಪ್ರತ್ಯೇಕ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು.
ಜಮ್ಮುಕಾಶ್ಮೀರದ 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಪುನಾರಂಭ: ನಿಟ್ಟುಸಿರು ಬಿಟ್ಟ ಯುವ ಜನತೆ
ಒಮರ್ ಅಬ್ದುಲ್ಲಾ ವಿಡಿಯೋ ಗೇಮ್ ಆಡುತ್ತಾ ಸಮಯ ಕಳೆದರೆ, ಮೆಹಬೂಬಾ ಮುಫ್ತಿ ಪುಸ್ತಕ ಓದುತ್ತಾ, ದೇವರ ಧ್ಯಾನದಲ್ಲಿ ದಿನ ಕಳೆದಿದ್ದಾರೆ. ವಿಡಿಯೋ ಗೇಮ್ ಆಡಲು ಇಂಟರ್ನೆಟ್ ಸೇವೆ ಅಗತ್ಯವಿರುವ ಕಾರಣ ಅಧಿಕಾರಿಗಳು ಒಮರ್ ಅಬ್ದುಲ್ಲಾರ ಮನವಿಯನ್ನು ತಳ್ಳಿ ಹಾಕಿದ್ದರು. ಹೀಗಾಗಿ ಒಮರ್ ಅಬ್ದುಲ್ಲಾ ಹಳೆಯ ವರ್ಷನ್ನಲ್ಲಿ ವಿಡಿಯೋ ಗೇಮ್ ಆಡಿ ಸಮಯ ಕಳೆದಿದ್ದಾರೆ. ಜೊತೆಗೆ ಹಾಲಿವುಡ್ ಸಿನಿಮಾ ಸಹ ಗೃಹ ಬಂಧನದ ವೇಳೆ ವೀಕ್ಷಿಸಿದ್ದಾರೆ.