ETV Bharat / bharat

ಮಿಲಿಟರಿ ಸಮವಸ್ತ್ರದಲ್ಲಿ ಮೊದಲ ಬಾರಿಗೆ ಮಿಂಚಿದ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿಗಳು!

author img

By

Published : Feb 12, 2020, 7:04 PM IST

ರಕ್ಷಣಾ ಸಚಿವಾಲಯದ ಆಡಳಿತದಲ್ಲಿ ಹೊಸ ಇಲಾಖೆ ಪ್ರಾರಂಭವಾಗಿದ್ದು, ಇದೆ ಮೊದಲ ಬಾರಿಗೆ ಮಿಲಿಟರಿ ಸಮವಸ್ತ್ರದಲ್ಲಿ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿಗಳು ಮಿಂಚಿದ್ದಾರೆ.

joint secretaries in military uniform, In a first, Defence Ministry to have joint secretaries in military uniform, joint secretaries in military uniform news, ಮಿಲಿಟರಿ ಸಮವಸ್ತ್ರದಲ್ಲಿ ಜಂಟಿ ಕಾರ್ಯದರ್ಶಿಗಳು, ಮಿಲಿಟರಿ ಸಮವಸ್ತ್ರದಲ್ಲಿ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿಗಳು, ಮಿಲಿಟರಿ ಸಮವಸ್ತ್ರದಲ್ಲಿ ಜಂಟಿ ಕಾರ್ಯದರ್ಶಿಗಳು ಸುದ್ದಿ,
ಮಿಲಿಟರಿ ಸಮವಸ್ತ್ರದಲ್ಲಿ ಮೊದಲ ಬಾರಿಗೆ ಮಿಂಚಿದ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿಗಳು!

ನವದೆಹಲಿ: ಭೂ ಸೇನಾ, ನೌಕಾಪಡೆ ಮತ್ತು ವಾಯುಸೇನೆಯ ಮೂವರು ಮೇಜರ್ ಜನರಲ್ ಶ್ರೇಣಿಯ ಅಧಿಕಾರಿಗಳನ್ನು ಆಯಾ ಪಡೆಗಳಿಗೆ ಸಂಬಂಧಿಸಿದ ಅಧಿಕಾರಶಾಹಿ ಕಾರ್ಯಗಳನ್ನು ನೋಡಿಕೊಳ್ಳಲು ನೇಮಕ ಮಾಡುವ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಲಾಗಿದೆ. ರಕ್ಷಣಾ ಸಚಿವಾಲಯವು ಈಗ ಮಿಲಿಟರಿ ಸಮವಸ್ತ್ರ ಧರಿಸಿದ ಜಂಟಿ ಕಾರ್ಯದರ್ಶಿಗಳನ್ನು ಹೊಂದಿರುತ್ತದೆ.

ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ನೇತೃತ್ವದಲ್ಲಿ ಮಿಲಿಟರಿ ವ್ಯವಹಾರಗಳ ಇಲಾಖೆ (ಡಿಎಂಎ) ಫೆಬ್ರವರಿ 17ರಿಂದ ಪ್ರಾರಂಭವಾಗುತ್ತಿದೆ. ಈ ಇಲಾಖೆ ಮೂವರು ಮೇಜರ್​ ರ‍್ಯಾಂಕ್​ ಅಧಿಕಾರಿಗಳನ್ನು ಹೊಂದಿದೆ. ಪ್ರತಿ ಪಡೆಗಳಿಗೆ ಸಂಬಂಧಿಸಿದ ಅಧಿಕಾರಶಾಹಿ ಕಾರ್ಯಗಳನ್ನು ನೋಡಿಕೊಳ್ಳವ ಕಾರ್ಯ ನಡೆದಿದೆ. ಈ ಇಲಾಖೆಯ ಸೇವೆಗಳ ಕಾರ್ಯವೈಖರಿಯ ಕುರಿತು ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಹೇಳಲಿದೆ.

ಡಿಎಂಎಗೆ ಮೂವರು ಜಂಟಿ ಕಾರ್ಯದರ್ಶಿಗಳಾಗಿ ಮೇಜರ್ ಜನರಲ್ ನಾರಾಯಣನ್, ರಿಯರ್ ಅಡ್ಮಿರಲ್ ಆರ್ ಕೆ ಧೀರ್ ಮತ್ತು ಏರ್‌ವೈಸ್ ಮಾರ್ಷಲ್ ಎಸ್ ಕೆ ಜಾ ಅವರ ಹೆಸರುಗಳನ್ನು ಪ್ರಸ್ತಾಪ ಮಾಡಲಾಗಿದೆ. ನೇಮಕದ ಅಂತಿಮ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಹೆಚ್ಚುವರಿ ಕಾರ್ಯದರ್ಶಿಗಳಾಗಿ ಲೆಫ್ಟಿನೆಂಟ್ ಜನರಲ್ ರ‍್ಯಾಂಕ್​ ಅಧಿಕಾರಿಗಳನ್ನು ನೇಮಕ ಮಾಡುವ ಪ್ರಸ್ತಾಪವನ್ನು ಡಿಎಂಎಗೆ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ. ಸಿಡಿಎಸ್‌ (ರಕ್ಷಣಾ ಸಿಬ್ಬಂದಿ ಮುಖ್ಯಸ್ಥ) ಜೊತೆ ಭಾರತೀಯ ಆಡಳಿತ ಸೇವೆಗಳ ಅಧಿಕಾರಿಗಳು ಸೇರಿ ರಾಜೀವ್ ಸಿಂಗ್ ಠಾಕೂರ್ ಮತ್ತು ಶಾಂತನು ಡಿಎಂಎಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಸಶಸ್ತ್ರ ಪಡೆಗಳ ಪ್ರಧಾನ ಕಚೇರಿಯ ಕೇಡರ್‌ನಲ್ಲಿ ಪ್ರಮುಖ ಸ್ಥಾನ ಹೊಂದಿರುವ ‘ಇತರೆ ನಾಗರಿಕ ಸಿಬ್ಬಂದಿ’ ಸಹ ಕೆಲಸ ಮಾಡುತ್ತಿದೆ.

ನಾಗರಿಕ ಮತ್ತು ಮಿಲಿಟರಿ ಜಂಟಿ ಕಾರ್ಯದರ್ಶಿಗಳಾಗಿ ಸಿಡಿಎಸ್​ ಕೆಲಸ ಮಾಡುತ್ತಿದೆ. ಇದರ ಕೆಲಸವನ್ನು ಐಎಎಸ್ ಅಧಿಕಾರಿಗಳು ಇತರೆ ಸಚಿವಾಲಯಗಳು ಮತ್ತು ನಾಗರಿಕ ಇಲಾಖೆಗಳೊಂದಿಗೆ ಜೊತೆಗೂಡಿ ನಿರ್ವಹಿಸುತ್ತಿದ್ದಾರೆ. ಸಂಸತ್ತಿನ ಕಾರ್ಯವನ್ನು ಐಎಎಸ್ ಅಧಿಕಾರಿಗಳು ನಡೆಸುತ್ತಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯ ಪ್ರಶ್ನೆಗಳಿಗೆ ಉತ್ತರಗಳನ್ನು ಹೊಂದಿಸುತ್ತಿದ್ದಾರೆ ಮತ್ತು ಸ್ಥಾಯಿ ಸಮಿತಿ ಸಭೆಗಳಿಗೆ ಸಹ ಸಿದ್ಧರಾಗುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ರಕ್ಷಣಾ ಸಚಿವಾಲಯದ ಮೂರು ಸೇವೆಗಳಿಗೆ ಸಂಬಂಧಿಸಿದ ಹೆಚ್ಚಿನ ಕೆಲಸಗಳು ಡಿಎಂಎಗೆ ಬಂದಿದ್ದು, ಉಳಿದ ಕೆಲಸವನ್ನು ರಕ್ಷಣಾ ಇಲಾಖೆಯ ಜಂಟಿ ಕಾರ್ಯದರ್ಶಿ (ಸಶಸ್ತ್ರ ಪಡೆ)ಗೆ ವಹಿಸಲಾಗಿದೆ. ಜನವರಿ 1 ರಂದು ಸ್ಥಾಪನೆಯಾದ ನಂತರ ಡಿಎಂಎ ಕೆಲಸ ಸಹ ತ್ರೀವವಾಗಿ ಸಾಗುತ್ತಿದೆ. ಆರ್ಮಿ ವೈಸ್ ಚೀಫ್ ಮತ್ತು ಫೀಲ್ಡ್ ಕಮಾಂಡರ್​ಗಳ ನೇಮಕಾತಿ ಸೇರಿ ಅನೇಕ ಫೈಲ್‌ಗಳನ್ನು ತೆರವುಗೊಳಿಸಿದೆ. ಅಧಿಕಾರಿಗಳ ಬಡ್ತಿಗೆ ಸಂಬಂಧಿಸಿದ ಫೈಲ್‌ಗಳನ್ನು ಡಿಎಂಎ ಕೂಡ ಶೀಘ್ರವಾಗಿ ತೆರವುಗೊಳಿಸುತ್ತಿದೆ ಎಂದು ಡಿಎಂಎ ಹೇಳಿದೆ.

ಡಿಎಂಎ ಹೊಸ ಇಲಾಖೆ. ಕೇಂದ್ರ ರಕ್ಷಣಾ ಸಚಿವಾಲಯದಲ್ಲಿ ಅಸ್ತಿತ್ವದಲ್ಲಿರುವ ರಕ್ಷಣಾ, ರಕ್ಷಣಾ ಸಂಶೋಧನೆ, ರಕ್ಷಣಾ ಉತ್ಪಾದನೆ ಮತ್ತು ಅಭಿವೃದ್ಧಿ ಹಾಗೂ ಮಾಜಿ ಸೇವಾ ಕಲ್ಯಾಣ ಇಲಾಖೆಗಳಿಗೆ ಸೇರ್ಪಡೆಯಾಗಿದೆ. ಹೊಸ ಇಲಾಖೆಯು ಸಶಸ್ತ್ರ ಪಡೆಗಳು, ರಕ್ಷಣಾ ಸಚಿವಾಲಯದ ಸಮಗ್ರ ಕೇಂದ್ರ ಕಚೇರಿ, ಪ್ರಾದೇಶಿಕ ಸೇನೆ, ಬಂಡವಾಳ ಸ್ವಾಧೀನಗಳನ್ನು ಹೊರತುಪಡಿಸಿ ಸೇವೆಗಳಿಗೆ ಮೀಸಲಾದ ಸಂಗ್ರಹಣೆ, ಜಂಟಿ ಯೋಜನೆ, ಸೇವೆಗಳ ಜಂಟಿ ಯೋಜನೆ, ಏಕೀಕರಣದ ಮೂಲಕ ಸೇವೆಗಳಿಗೆ ಜಂಟಿ, ತರಬೇತಿ ಮತ್ತು ಸಿಬ್ಬಂದಿ ಸೇರಿ ಇತರೆ ಅವಶ್ಯಕತೆಗಳನ್ನು ನಿರ್ವಹಿಸುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.