ನವದೆಹಲಿ: ರೈಲುಗಳಲ್ಲಿ ಭದ್ರತೆ, ಸಮಯ ಪಾಲನೆ, ಸ್ವಚ್ಛತೆಗೆ ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡುತ್ತದೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ ಹೇಳಿದರು.
ಕೇಂದ್ರ ಸರ್ಕಾರದ ಬಜೆಟ್ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಯುವಕರು, ಮಹಿಳೆಯರು ಸೇರಿ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯೋಜನೆಗಳಲ್ಲಿ ರೈಲ್ವೆ ಇಲಾಖೆಯಿಂದ ಜಾರಿಗೆ ತರಲಾಗುವುದು ಎಂದರು.
ಗ್ರಾಮ, ಬಡವರ ಉದ್ಧಾರ, ರೈತರ ಆದಾಯ ದುಪ್ಪಟ್ಟು ಮಾಡುವುದು ಸರ್ಕಾರದ ಉದ್ದೇಶ. ಶಿಕ್ಷಣ. ಆರೋಗ್ಯ, ಉದ್ಯೋಗ ನಮ್ಮ ಆದ್ಯತೆಗಳಾಗಿವೆ. ಉಳ್ಳವರಿಂದ ಹಣ ಪಡೆದು ಇಲ್ಲದವರಿಗೆ ನೀಡುವುದೇ ಸರ್ಕಾರದ ಕೆಲಸ. ಅದನ್ನು ನಾವು ಪ್ರಾಮಾಣಿಕವಾಗಿ ಮಾಡ್ತೇವೆ ಎಂದು ಹೇಳಿದರು.
ಈ ಬಾರಿ ಬಜೆಟ್ನಲ್ಲಿ ಎಲ್ಲ ವರ್ಗಗಳಿಗೂ ಸಮಾನವಾಗಿ ಸಂಪತ್ತಿನ ಹಂಚಿಕೆಯಾಗಲಿದೆ. ಪಂಡಿತ್ ದೀನ್ ದಯಾಳ್ ಅವರ ತತ್ವದಂತೆ, ಸರ್ಕಾರದ ಯೋಜನೆಗಳನ್ನು ಕಟ್ಟಕಡೆಯವರಿಗೆ ತಲುಪಿಸುವ ಕಾರ್ಯ ಮಾಡುತ್ತೇವೆ. ಶ್ರೀಮಂತರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಉದ್ದೇಶವಲ್ಲ ಎಂದು ನುಡಿದರು.