ಹೈದರಾಬಾದ್: ಕೊರೊನಾ ವೈರಸ್ ಕಾರಣ ಜನರ ಚಲನೆಗೆ ನಿರ್ಬಂಧ, ವಿವಿಧ ಸ್ಥಳಗಳಲ್ಲಿ ಲಾಕ್‌ಡೌನ್ ಹಾಗೂ ಇತರ ಸಮಸ್ಯೆಗಳಿಂದಾಗಿ ಕಚ್ಚಾ ವಸ್ತುಗಳ ಪೂರೈಕೆಯ ಮೇಲೆ ಪರಿಣಾಮ ಬೀರಿದೆ.
ಅದರಂತೆ ದೇಶದಲ್ಲಿ ಔಷಧ ಭದ್ರತೆಯ ಸಮಸ್ಯೆಯನ್ನು ಬಗೆಹರಿಸಲು 06.02.2020ರಂದು ಸಚಿವಾಲಯವು ಸಮಿತಿಯೊಂದನ್ನು ರಚಿಸಿತು. ಆ ಸಮಿತಿ 27.02.2020ರಂದು ತನ್ನ ವರದಿ ಸಲ್ಲಿಸಿದೆ. 58 ಎಪಿಐಗಳಿಗಾಗಿ (ಆ್ಯಕ್ಟೀವ್ ಫಾರ್ಮಾಸ್ಯುಟಿಕಲ್ ಇಂಗ್ರೀಡಿಯೆಂಟ್ಸ್) ಭಾರತವು ಚೀನಾದ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಸಮಿತಿ ಗಮನಿಸಿದೆ.
ಇದಲ್ಲದೆ ಉದ್ಯಮಗಳನ್ನು ಪುನರುಜ್ಜೀವಗೊಳಿಸಲು ಶಿಫಾರಸುಗಳು, ಎಪಿಐಗಳನ್ನು ತಯಾರಿಸಲು ಹೊಸ ತಂತ್ರಜ್ಞಾನಗಳು, ಅದರ ಏಕೀಕರಣ, ಯೋಜನೆಗಳ ವೆಚ್ಚ ಮತ್ತು ಕಾರ್ಯತಂತ್ರದ ವ್ಯವಹಾರ ಮಾದರಿಗಳನ್ನು ಗುರುತಿಸಲು 02.03.2020ರಂದು ತಾಂತ್ರಿಕ ಸಮಿತಿಯನ್ನು ರಚಿಸಲಾಯಿತು. ಡ್ರಗ್ ಸೆಕ್ಯುರಿಟಿ ಕಮಿಟಿ ಗುರುತಿಸಿದ 58 ಎಪಿಐಗಳನ್ನು ಸಹ ಸಮಿತಿ ಪರಿಶೀಲಿಸಿ, 53 ಎಪಿಐಗಳಿಗಾಗಿ ಯೋಜನೆಯನ್ನು ಶಿಫಾರಸು ಮಾಡಿದೆ.
ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಬೃಹತ್ ಔಷಧಿಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಇಲಾಖೆ ಉತ್ಪಾದನಾ ಪ್ರೋತ್ಸಾಹಕ (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್, ಪಿಎಲ್ಐ) ಯೋಜನೆ ಮತ್ತು ಬೃಹತ್ ಔಷಧ ಪ್ರಚಾರಕ್ಕಾಗಿ ಯೋಜನೆ ಎಂಬ ಎರಡು ಯೋಜನೆಗಳನ್ನು ಸಿದ್ಧಪಡಿಸಿದ್ದು, ಇವುಗಳನ್ನು 20.03.2020ರಂದು ಕ್ಯಾಬಿನೆಟ್ ಅನುಮೋದಿಸಿದೆ. ಪಿಎಲ್ಐ ಯೋಜನೆಯಡಿ, ಗುರುತಿಸಲಾದ ಎಲ್ಲಾ 53 ಎಪಿಐಗಳನ್ನು ಒಳಗೊಂಡಿರುವ ಆಯ್ದ ತಯಾರಕರಿಗೆ 41 ಉತ್ಪನ್ನಗಳ ಮಾರಾಟದ ಆಧಾರದ ಮೇಲೆ ಹಣಕಾಸಿನ ಪ್ರೋತ್ಸಾಹ ನೀಡಲಾಗುವುದು.
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ನ (ಸಿಡಿಎಸ್ಕೊ) ಮಾಹಿತಿಯ ಪ್ರಕಾರ, ಚೀನಾದಿಂದ ಆಮದು ಮಾಡಿಕೊಳ್ಳುವ ಕಚ್ಚಾ ವಸ್ತುಗಳ ಶೇಕಡಾವಾರು ವಿವರಗಳು ಹೀಗಿವೆ:
ವರ್ಷ | ಶೇಕಡಾವಾರು (ಮೌಲ್ಯ) |
2017-18 | 68.62% |
2018-19 | 66.53% |
2019-20 | 72.40% |
ಮಾರುಕಟ್ಟೆಯಲ್ಲಿ ಔಷಧಿಗಳ ಲಭ್ಯತೆ:
ಎನ್‌ಪಿಪಿಎ ಸಹಾಯವಾಣಿ ಸಂಖ್ಯೆ 1800111255 ಕಂಟ್ರೋಲ್ ರೂಮ್ ಸ್ಥಾಪಿಸಿದ್ದು, ಔಷಧಿಗಳು, ಮಾಸ್ಕ್, ಗ್ಲೌಸ್, ಹ್ಯಾಂಡ್ ಸ್ಯಾನಿಟೈಜರ್ ಇತ್ಯಾದಿಗಳ ಲಭ್ಯತೆ ಮತ್ತು ಬೆಲೆ ಉಲ್ಲಂಘನೆ ಮುಂತಾದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲಾಗಿದೆ. ಅಲ್ಲದೆ, ಎನ್‌ಪಿಪಿಎ ವೆಬ್‌ಸೈಟ್‌ನಲ್ಲಿ (www.nppaindia.nic.in) ಇತ್ತೀಚಿನ ಕಚೇರಿ ಆದೇಶಗಳು, ಸುತ್ತೋಲೆಗಳು, ಸಹಾಯವಾಣಿ ಸಂಖ್ಯೆ, ಕುಂದು ಕೊರತೆಗಳನ್ನು ಕಳುಹಿಸುವ ಇಮೇಲ್ ಇತ್ಯಾದಿಗಳನ್ನು ಹೊಂದಿರುವ ಕೋವಿಡ್-19 ಡ್ಯಾಶ್ ಬೋರ್ಡ್ ರಚಿಸಲಾಗಿದೆ.
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಔಷಧದ ಕೊರತೆಯನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಕುಂದು ಕೊರತೆಗಳನ್ನು ಪರಿಹರಿಸಲು ಎನ್‌ಪಿಪಿಎ ಇ-ಮೇಲ್ ಮಾನಿಟರಿಂಗ್ (nppa@gov.in) ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.
ರೆಮ್ಡೆಸಿವಿರ್:
ಪ್ರಸ್ತುತ ಬೇಡಿಕೆಗೆ ಸರಿಹೊಂದಿಸಲು ಫಾರ್ಮಾ ಕಂಪನಿಗಳಿಗೆ ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ) ಯಾವುದೇ ವರದಿಯನ್ನು ಸ್ವೀಕರಿಸಿಲ್ಲ.
ರೆಮ್ಡೆಸಿವರನ್ನು ಇನ್ವೆಸ್ಟಿಗೇಷನಲ್ ಥೆರಪಿ ವಿಭಾಗದ ಅಡಿಯಲ್ಲಿ ಸೇರಿಸಲಾಗಿದ್ದು, ಇದನ್ನು ಆಫ್-ಲೇಬಲ್ ಮತ್ತು ತುರ್ತು ಬಳಕೆಗಾಗಿ ದೃಢೀಕರಿಸಿದ ಔಷಧಿಯಾಗಿ ಬಳಸಲಾಗುತ್ತಿದೆ. "ನಿರ್ಬಂಧಿತ ತುರ್ತು ಬಳಕೆ"ಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಇದಕ್ಕೆ ಷರತ್ತುಬದ್ಧ ಪರವಾನಗಿಯನ್ನು ನೀಡಿದೆ.
ರೋಗಿಯ ಒಪ್ಪಿಗೆ ಪಡೆದ ನಂತರ ಈ ಔಷಧಿಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಕೋವಿಡ್-19 ಚಿಕಿತ್ಸೆಗಾಗಿ ಈ ಔಷಧಿಗಳಿಗೆ ಪೂರ್ಣ ಔಷಧಿಯ ಸ್ಥಾನವನ್ನು ನೀಡಲಾಗಿಲ್ಲ.
ಔಷಧೀಯ ಕಂಪನಿಗಳು ಇಲ್ಲಿಯವರೆಗೆ ತಯಾರಿಸಿದ ಒಟ್ಟು ಪ್ರಮಾಣದ ರೆಮ್ಡೆಸಿವಿರ್ನ ವಿವರಗಳು:
ಕ್ರ.ಸಂ. | ಔಷಧ ಕಂಪನಿಯ ಹೆಸರು | 08-09-2020ರವರೆಗೆ ಮಾರುಕಟ್ಟೆಗಾಗಿ ತಯಾರಿಸಿದ ರೆಮ್ಡೆಸಿವಿರ್ನ ಒಟ್ಟು ಪ್ರಮಾಣ |
1. | M / s ಮೈಲಾನ್ ಲ್ಯಾಬೊರೇಟರೀಸ್ ಲಿಮಿಟೆಡ್ | 500,000 ಬಾಟಲಿಗಳು |
2. | M/s ಹೆಟ್ರೋ ಹೆಲ್ತ್‌ಕೇರ್ | 14,46,000 ಬಾಟಲಿಗಳು |
3. | M/s ಜುಬಿಲೆಂಟ್ ಜೆನೆರಿಕ್ಸ್ ಲಿಮಿಟೆಡ್ | 150,000 ಬಾಟಲಿಗಳು |
4. | M/s ಸಿಪ್ಲಾ (28-08-2020ರಂತೆ) | 143,329 ಬಾಟಲಿಗಳು |
5. | M/s ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ | 13286 ಬಾಟಲಿಗಳು |
6. | M/s ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ | 1,86,957 ಬಾಟಲಿಗಳು |