ETV Bharat / bharat

ಸೌರಶಕ್ತಿ ಮೂಲಕ ನೀರಿನಿಂದ ಆಮ್ಲಜನಕ - ಜಲಜನಕ​ ವಿಭಜನೆ: ಹೊಸ ಸಾಧನ ಸಂಶೋಧಿಸಿದ ಐಐಟಿ - Solar Power

ಸೌರಶಕ್ತಿಯನ್ನು ಬಳಸಿಕೊಂಡು ನೀರಿನಲ್ಲಿರುವ ಹೈಡ್ರೋಜನ್ ಮತ್ತು ಆಮ್ಲಜನಕಗಳನ್ನ ವಿಭಜಿಸುವ ಹೊಸ ಸಾಧನವನ್ನು ಮದ್ರಾಸ್​ನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು ಕಂಡು ಹಿಡಿದಿದ್ದಾರೆ. ಕೆಮಿಕಲ್​ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಅರವಿಂದ್ ಕುಮಾರ್ ಚಂದಿರನ್ ನೇತೃತ್ವದ ಸೌರಶಕ್ತಿ ಸಂಶೋಧನ ತಂಡ ಈ ಸಾಧನವನ್ನು ಅಭಿವೃದ್ಧಿಪಡಿಸಿದೆ.

ಆಮ್ಲಜನಕ-ಹೈಡ್ರೋಜನ್​ಗಳಾಗಿ​ ವಿಭಜನೆ
ಆಮ್ಲಜನಕ-ಹೈಡ್ರೋಜನ್​ಗಳಾಗಿ​ ವಿಭಜನೆ
author img

By

Published : Aug 21, 2020, 1:31 PM IST

ಚೆನ್ನೈ (ತಮಿಳುನಾಡು): ಸೌರಶಕ್ತಿ ಬಳಸಿಕೊಂಡು ನೀರನ್ನು ಹೈಡ್ರೋಜನ್ ಮತ್ತು ಆಮ್ಲಜನಕಗಳಾಗಿ ವಿಭಜಿಸುವ ಹೊಸ ಸಾಧನವನ್ನು ಮದ್ರಾಸ್​ನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು ಕಂಡು ಹಿಡಿದಿದ್ದಾರೆ.

ಇದು ಪರಿವರ್ತನೆ ಮತ್ತು ಶೇಖರಣಾ ಭಾಗವನ್ನು ಒಂದೇ ವ್ಯವಸ್ಥೆಯಲ್ಲಿ ತರುವ ಸಾಧ್ಯತೆಯಿದ್ದು, ಪ್ರತಿ ಕಿಲೋವ್ಯಾಟ್ ಸೌರಶಕ್ತಿ ವೆಚ್ಚವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಸೌರ ಇಂಧನಗಳ ವಿಷಯಗಳ ಮೇಲೆ ಹೊಸ ಆಸಕ್ತಿ ಸೃಷ್ಟಿಸುವ ನಿರೀಕ್ಷೆಯಿದೆ.

ಸೌರ ಇಂಧನ ಉತ್ಪಾದನೆಯಲ್ಲಿ ಬಳಸಬೇಕಾದ ವಸ್ತುವು ಉತ್ತಮ ದ್ಯುತಿ ವಿದ್ಯುಜ್ಜನಕ ವಸ್ತುವಾಗಿರಬೇಕು. ಮತ್ತು ಅದೇ ಸಮಯದಲ್ಲಿ ನೀರಿನ ಮಾಧ್ಯಮದಲ್ಲಿ ಸ್ಥಿರವಾಗಿರಬೇಕು. ಇನ್ನು ಈ ಎರಡು ಮಾನದಂಡಗಳು ಐಐಟಿ ಮದ್ರಾಸ್ ಸಂಶೋಧಕರು ಕಂಡು ಹಿಡಿದ ವಿಷಯಗಳಲ್ಲಿದೆ ಎನ್ನುವುದು ವಿಶೇಷ.

ಕೆಮಿಕಲ್​ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಅರವಿಂದ್ ಕುಮಾರ್ ಚಂದಿರನ್ ನೇತೃತ್ವದ ಸೌರಶಕ್ತಿ ಸಂಶೋಧನ ತಂಡ ಈ ಸಾಧನವನ್ನು ಅಭಿವೃದ್ಧಿಪಡಿಸಿದೆ. ಅವುಗಳಲ್ಲಿ ಸೌರಕೋಶಗಳಿಗೆ ವಸ್ತುಗಳು ಮತ್ತು ಸಾಧನಗಳ ವಾಸ್ತುಶಿಲ್ಪಗಳ ಅಭಿವೃದ್ಧಿ, ಸೌರ ನೀರು ಹೈಡ್ರೋಜನ್ ಇಂಧನಗಳಿಗೆ ವಿಭಜನೆ, ಇಂಗಾಲದ ಡೈ - ಆಕ್ಸೈಡ್ ಮರು ಬಳಕೆ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಲೋಹದ - ಗಾಳಿಯ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸಿದೆ.

ಇನ್ನು ಈ ಸಂಶೋಧನಾ ಪ್ರಬಂಧವನ್ನು ಹೆಸರಾಂತ ಪೀರ್-ರಿವ್ಯೂಡ್ ಕೆಮಿಸ್ಟ್ರಿ ಜರ್ನಲ್ ಏಂಜೆವಾಂಡೆ ಕೆಮಿ ಇಂಟರ್​ನ್ಯಾಷನಲ್ ಆವೃತ್ತಿಯಲ್ಲಿ ಪ್ರಕಟಿಸಲಾಗಿದೆ. ಇದರ ಸಹ ಲೇಖಕರಾಗಿ ಡಾ.ಅರವಿಂದ್ ಕುಮಾರ್ ಚಂದಿರನ್ ಮತ್ತು ಎಸ್ಇಆರ್​ಜಿಯ ಸಂಶೋಧನಾ ವಿದ್ವಾಂಸ ಮುಹಮ್ಮದ್ ಹಮ್ದಾನ್ ಕೆಲಸ ಮಾಡಿದ್ದಾರೆ.

ಈ ಕ್ಷೇತ್ರದಲ್ಲಿ ಸಂಶೋಧನೆಯ ಪ್ರಾಯೋಗಿಕ ಅನ್ವಯಿಕೆಗಳ ಕುರಿತು ಮಾತನಾಡಿದ ಡಾ.ಅರವಿಂದ್ ಕುಮಾರ್ ಚಂದಿರನ್, “ಬ್ಯಾಟರಿಗಳಲ್ಲಿ ಸೌರಶಕ್ತಿಯನ್ನು ಸಂಗ್ರಹಿಸುವುದು ದೊಡ್ಡ ಪ್ರಮಾಣದ ಅನುಷ್ಠಾನಕ್ಕೆ ದುಬಾರಿ ವ್ಯವಹಾರವಾಗಿದೆ. ರಾಸಾಯನಿಕ ಇಂಧನಗಳ ರೂಪದಲ್ಲಿ ಸೌರ ಶಕ್ತಿ ಬಳಸಿಕೊಳ್ಳುವ ಮತ್ತು ಸಂಗ್ರಹಿಸಬಲ್ಲ ಏಕ ದ್ಯುತಿ ವಿದ್ಯುಜ್ಜನಕ (ಪಿಇಸಿ) ವ್ಯವಸ್ಥೆಯು ಪ್ರತಿ ಕಿಲೋವ್ಯಾಟ್ ಶಕ್ತಿಯ ವೆಚ್ಚವನ್ನು ಕಡಿಮೆ ಮಾಡುತ್ತದೆ. ತಾತ್ವಿಕಕವಾಗಿ, ಶುದ್ಧ ಹೈಡ್ರೋಜನ್ ಉತ್ಪಾದಿಸಲು ಪಿಇಸಿಯನ್ನು ಬಳಸಿಕೊಂಡು ಸಮುದ್ರದ ನೀರಿನ ವಿಭಜನೆಯು ಗಂಭೀರ ಸಂಶೋಧನೆಯಾಗಿರಬೇಕು. ಭಾರತವು ಹಸಿರು ಶಕ್ತಿಗೆ ಬದ್ಧವಾಗಿರಬೇಕು ಮತ್ತು ಇಂಗಾಲದ ಹೊರ ಸೂಸುವಿಕೆಯಿಂದ ಉಂಟಾಗುವ ಪರಿಣಾಮಗಳನ್ನು ತಪ್ಪಿಸಬೇಕು. ನಮ್ಮ ಇತ್ತೀಚಿನ ಕೆಲಸದಲ್ಲಿ, ಅತ್ಯುತ್ತಮ ದ್ಯುತಿವಿದ್ಯುಜ್ಜನಕ ವಸ್ತುಗಳನ್ನು ಬಳಸಿಕೊಂಡು ನೀರಿನ ವಿಭಜನೆಯ ಮೊದಲ ಯಶಸ್ವಿ ಪ್ರದರ್ಶನವನ್ನು ಮಾಡಲು ನಾವು ಪ್ರಯತ್ನಿಸಿದ್ದೇವೆ” ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.