ETV Bharat / bharat

ವಾಶ್​ರೂಂನಲ್ಲಿದ್ದಾಗ ವಿಡಿಯೋ ಚಿತ್ರೀಕರಣ ಆರೋಪ... ಐಐಟಿ ಮದ್ರಾಸ್​ ಪ್ರಾಜೆಕ್ಟ್​​ ಉದ್ಯೋಗಿ ಬಂಧನ! - ಐಐಟಿ-ಮದ್ರಾಸ್​ ಪ್ರಾಜೆಕ್ಟ್​​ ಉದ್ಯೋಗಿ ಬಂಧನ

ವಿದ್ಯಾರ್ಥಿನಿಯ ಖಾಸಗಿ ದೃಶ್ಯ ಸೆರೆ ಹಿಡಿಯಲು ವಾಶ್​ರೂಂನಲ್ಲಿ ಮೊಬೈಲ್​ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

IIT-Madras Project employee was arrested

author img

By

Published : Feb 20, 2020, 7:51 PM IST

ಚೆನ್ನೈ: ಐಐಟಿ ಮದ್ರಾಸ್​ ವಿಶ್ವವಿದ್ಯಾಲಯದಲ್ಲಿ ಪಿಹೆಚ್​ಡಿ ವ್ಯಾಸಂಗ ಮಾಡುತ್ತಿದ್ದ ಮಹಿಳಾ ವಿದ್ಯಾರ್ಥಿನಿ ಖಾಸಗಿ ಚಿತ್ರ ಸೆರೆ ಹಿಡಿದಿರುವ ಆರೋಪದ ಮೇಲೆ ಉದ್ಯೋಗಿಯೊಬ್ಬನ ಬಂಧನ ಮಾಡಲಾಗಿದೆ.

ಮಹಿಳಾ ವಿದ್ಯಾರ್ಥಿನಿ ವಾಸ್​​ ರೂಂನಲ್ಲಿದ್ದಾಗ ಅದೇ ವಿಶ್ವವಿದ್ಯಾಲಯದಲ್ಲಿ ಪ್ರಾಜೆಕ್ಟ್​ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶುಭಂ ಬ್ಯಾನರ್ಜಿ ಈ ಕೃತ್ಯ ನಡೆಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮಹಿಳಾ ವಾಶ್​ರೂಂ ಒಳಗಿನ ದೃಶ್ಯ ಸೆರೆ ಹಿಡಿಯುವ ಉದ್ದೇಶದಿಂದ ಗೋಡೆಗೆ ಹೋಲ್​ ಮಾಡಲಾಗಿದ್ದು, ಅದರಲ್ಲಿ ಮೊಬೈಲ್​​ ಇಟ್ಟು ದೃಶ್ಯ ಸೆರೆಹಿಡಿಯುವ ಯತ್ನ ನಡೆಸಿದ್ದಾಗಿ ತಿಳಿಸಿದ್ದಾರೆ.

ಇದನ್ನ ನೋಡಿರುವ ವಿದ್ಯಾರ್ಥಿನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತದನಂತರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಈಗಾಗಲೇ ವ್ಯಕ್ತಿಯ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಮೊಬೈಲ್​​ನಲ್ಲಿ ಯಾವುದೇ ದೃಶ್ಯಾವಳಿ ಸೆರೆಯಾಗಿಲ್ಲ. ಹೆಚ್ಚಿನ ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.