ETV Bharat / bharat

ಜೀವರಕ್ಷಕ ವೆಂಟಿಲೇಟರ್‌ಗಳನ್ನು ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿದೆ IIT ಕಾನ್ಪುರ - ನಾರಾಯಣ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸ್​

ಐಐಟಿ ಕಾನ್ಪುರ ಅತ್ಯಾಧುನಿಕ ಪೋರ್ಟೇಬಲ್ ವೆಂಟಿಲೇಟರ್‌ಗಳನ್ನು ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಒಂದು ತಿಂಗಳೊಳಗೆ 1,000 ವೆಂಟಿಲೇಟರ್​ಗಳು ತಯಾರಾಗಲಿವೆ.

portable ventilators
portable ventilators
author img

By

Published : Mar 27, 2020, 8:21 AM IST

ನವದೆಹಲಿ: ದೇಶದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಯು ಪೋರ್ಟೇಬಲ್ ವೆಂಟಿಲೇಟರ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಮಾರುಕಟ್ಟೆಯಲ್ಲಿರುವ ವೆಂಟಿಲೇಟರ್‌ಗಳಿಗಿಂತ ಕಡಿಮೆ ಬೆಲೆಗೆ ಲಭ್ಯವಾಗಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ವೆಂಟಿಲೇಟರ್‌ನ ಪ್ರತಿ ಯೂನಿಟ್​ಗೆ 4 ಲಕ್ಷ ರೂಪಾಯಿಗೆ ಲಭ್ಯವಿದೆ. ಆದರೆ ಈ ಹೊಸ ವೆಂಟಿಲೇಟರ್​ಗಳನ್ನು ಪ್ರತಿ ಯೂನಿಟ್​ಗೆ 70 ಸಾವಿರ ರೂಪಾಯಿ ವೆಚ್ಚದಲ್ಲಿ ತಯಾರಿಸಲಾಗುತ್ತದೆ.

ಈಗಾಗಲೇ 9 ಜನರ ತಂಡ ರಚಿಸಲಾಗಿದ್ದು, ಬೆಂಗಳೂರಿನ ನಾರಾಯಣ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸ್​ನ ವೈದ್ಯರು ಕೂಡಾ ಈ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ವೆಂಟಿಲೋಟರ್‌ ಮಾದರಿಯನ್ನು ಪರಿಶೀಲಿಸಿದ್ದು, ಪ್ರಾರಂಭದಲ್ಲಿ ಒಂದು ತಿಂಗಳೊಳಗೆ 1,000 ವೆಂಟಿಲೇಟರ್​ಗಳು ತಯಾರಾಗಲಿವೆ ಎಂಬ ಮಾಹಿತಿ ಇದೆ.

ಈ ವೆಂಟಿಲೇಟರ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?

ವೆಂಟಿಲೇಟರ್ ಅನ್ನು ಮೊಬೈಲ್ ಫೋನ್‌ಗೆ ಸಂಪರ್ಕಿಸಲಾಗುತ್ತದೆ. ಬಳಿಕ ಮೊಬೈಲ್ ಮೂಲಕವೇ ಇವು ​ಗಳನ್ನು ನಿಯಂತ್ರಿಸಲಾಗುತ್ತದೆ. ನಿರ್ಣಾಯಕ ಮಾಹಿತಿಗಳು ಮೊಬೈಲ್ ಸ್ಕ್ರೀನ್​ನಲ್ಲೇ ಡಿಸ್ಪ್ಲೇ ಆಗಲಿವೆ. ಆಕ್ಸಿಜನ್ ಸಿಲಿಂಡರ್​ಗಳನ್ನು ಈ ವೆಂಟಿಲೇಟರ್​ಗಳಿಗೆ ಜೋಡಿಸುವ ಅವಕಾಶವೂ ಇರಲಿದೆ.

"COVID-19 ಮಾನವಕುಲವನ್ನೇ ಬಾಧಿಸುತ್ತಿದೆ. ಉತ್ತಮ ವೈದ್ಯಕೀಯ ಮೂಲಸೌಕರ್ಯಗಳನ್ನು ಹೊಂದಿರುವ ಅಮೆರಿಕ ಮತ್ತು ಇಟಲಿಯಂತಹ ಅತ್ಯಾಧುನಿಕ ದೇಶಗಳು ಕೂಡಾ ಈ ವೈರಸ್ ದಾಳಿಯನ್ನು ಎದುರಿಸುತ್ತಿರುವಾಗ, ಭಾರತದಲ್ಲಿ ನಾವು ವೈದ್ಯಕೀಯವಾಗಿ ಹೆಚ್ಚು ಸುಧಾರಣೆಗೊಂಡಿಲ್ಲ" ಎಂದು ಐಐಟಿ ಕಾನ್‌ಪುರದ ಪ್ರಾಧ್ಯಾಪಕ ಹಾಗೂ ಉಸ್ತುವಾರಿ ಅಮಿತಾಭ್ ಬಂಧೋಪಾಧ್ಯಾಯ ಕಳವಳ ವ್ಯಕ್ತಪಡಿಸಿದ್ದಾರೆ.

"ರೋಗಿಗಳಿಗೆ ಅದ್ರಲ್ಲೂ ವಿಶೇಷವಾಗಿ ವಯಸ್ಸಾದವರಿಗೆ ವೆಂಟಿಲೇಟರ್‌ಗಳ ಅಗತ್ಯವಿರುತ್ತದೆ. ಆದರೆ ಭಾರತದಲ್ಲಿ ಕೆಲವೇ ವೆಂಟಿಲೇಟರ್‌ಗಳಿವೆ. ನಾವು ಸಾಧ್ಯವಾದಷ್ಟು ವೇಗವಾಗಿ ಇವುಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಅದಕ್ಕಾಗಿ ತಂತ್ರಜ್ಞರು ಮತ್ತು ವೈದ್ಯಕೀಯ ತಜ್ಞರನ್ನು ಹೊಂದಿರುವ ತಂಡವನ್ನು ರಚಿಸಿದ್ದೇವೆ "ಎಂದು ಅವರು ತಿಳಿಸಿದರು.

ನಮ್ಮ ಪ್ರಯತ್ನದಿಂದಾಗಿ ಹಲವಾರು ಭಾರತೀಯರ ಜೀವ ಉಳಿಸಬಹುದು ಎಂದು ಅಮಿತಾಭ್ ಅಭಿಪ್ರಾಯಪಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.