ETV Bharat / bharat

ಅಗಳಪ್ಪ... ಈ ಟಿ-ಶರ್ಟ್​ ಧರಿಸಿದ್ರೆ ಕೊರೊನಾ ಸೋಂಕೇ ತಗಲಲ್ವಂತೆ!! - ಐಐಟಿ ದೆಹಲಿ ಇಂಜಿನಿಯರಿಂಗ್

ಟಿಐಟಿಯ ಸ್ಟಾರ್ಟ್​​​​ಅಪ್​ ಸಂಸ್ಥೆಗಳು ಸೋಂಕು ತಡೆ​ ಟಿ-ಶರ್ಟ್​ ಹಾಗೂ ಲೋಷನ್ ವಿನ್ಯಾಸಗೊಳಿಸಿದ್ದು, ಇದು ವ್ಯಕ್ತಿಯ ಸಂಪರ್ಕಕ್ಕೆ ಬರುವ ಸೂಕ್ಷ್ಮ ಜೀವಿಗಳನ್ನು ನಾಶಮಾಡುವ ಮೂಲಕ ಸೋಂಕು ಹರಡುವ ಸಾಧ್ಯತೆಯನ್ನು ಕಡಿಮೆ ಮಾಡಲಿದೆ. ಅಲ್ಲದೆ ಕಿಟ್​​​ನಲ್ಲಿ ಹಲವು ಸಂರಕ್ಷಣಾ ಉತ್ಪನ್ನಗಳನ್ನು ನೀಡಲಾಗುತ್ತಿದೆ.

iit-delhi-startups-launch-covid-19-protection-lotion-antiviral-t-shirts
ಐಐಟಿಯಿಂದ ​​ಸೋಂಕು ತಡೆ ಟಿ-ಶರ್ಟ್, ಕೋವಿಡ್​ ಲೋಷನ್​ ಬಿಡುಗಡೆ
author img

By

Published : Oct 3, 2020, 2:17 PM IST

ನವದೆಹಲಿ: ಕೊರೊನಾ ಸಂಕಷ್ಟದ ವಿರುದ್ಧ ಲಸಿಕೆ ಹುಡುಕಾಟ ತೀವ್ರವಾಗಿರುವ ಸಂದರ್ಭದಲ್ಲಿಯೇ ಇಂಡಿಯನ್ ಇನ್ಸ್​​​​​ಸ್ಟಿಟ್ಯೂಟ್​​​​ ಆಫ್​ ಟೆಕ್ನಾಲಜಿ ಅಡಿ ಆರಂಭವಾಗಿದ್ದ ಎರಡು ಸ್ಟಾರ್ಟ್​​​ಅಪ್​ಗಳು ಜಂಟಿಯಾಗಿ ಆ್ಯಂಟಿ ವೈರಲ್ (ಸೋಂಕು ತಡೆ) ಟಿ-ಶರ್ಟ್​​​ಗಳು ಮತ್ತು ಕೋವಿಡ್​ ಪ್ರೊಟೆಕ್ಷನ್ ಲೋಷನ್ ಅನ್ನು ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಿವೆ.

ಇ-ಟೆಕ್ಸ್​ ಮತ್ತು ಕ್ಲೆನ್ಸ್​​​ಟಾ ಎಂಬ ಎರಡು ಸ್ಟಾರ್ಟ್​​ಅಪ್​​ಗಳು ಈ ಆ್ಯಂಟಿ ವೈರಲ್ ಕಿಟ್ ಅಭಿವೃದ್ಧಿ ಪಡಿಸಿದ್ದು, ಇನ್ಸ್​​ಸ್ಟಿಟ್ಯೂಟ್​ನ ನಿರ್ದೇಶಕ ವಿ.ರಾಮಗೋಪಾಲ್​ ರಾವ್​​ ಲೋಕಾರ್ಪಣೆ ಮಾಡಿದರು.

ಈ ಕಿಟ್​​​​ನೊಳಗೆ ಕ್ಲೆನ್ಸ್​​ಟಾ ಪ್ರೊಟೆಕ್ಷನ್​​ ಲೋಷನ್, ಹ್ಯಾಂಡ್​​ ಸ್ಯಾನಿಟೈಸರ್​​, ಇ-ಟೆಕ್ಸ್​ ಕವಚ, ಆ್ಯಂಟಿ ವೈರಲ್ ಟಿ-ಶರ್ಟ್​ ಮತ್ತು ಮಾಸ್ಕ್​​​ ಸಹ ಒಳಗೊಂಡಿದೆ. ಈ ಉತ್ಪನ್ನಕ್ಕೆ ಐಐಟಿಯ ರಾಸಾಯನಿಕ ಮತ್ತು ಟೆಕ್ಸ್​ಟೈಲ್​​ ವಿಭಾಗದ ತಜ್ಞರು ಸಹಮತ ವ್ಯಕ್ತಪಡಿಸಿದ್ದಾರೆ.

COVID-19 Protection Lotion
ಕೋವಿಡ್​ ಲೋಷನ್

ಅಧಿಕಾರಿಗಳ ಪ್ರಕಾರ, ಇ-ಟೆಕ್ಸ್​ ಸ್ಟಾರ್ಟ್​ಅಪ್​​​​ನಿಂದ ಸೋಂಕು ತಡೆ​ ಬಟ್ಟೆಯನ್ನು ಸುಧಾರಿತ ತಂತ್ರಜ್ಞಾನವನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ. ಇದು ವ್ಯಕ್ತಿಯ ಸಂಪರ್ಕಕ್ಕೆ ಬರುವ ಸೂಕ್ಷ್ಮ ಜೀವಿಗಳನ್ನು ನಾಶಮಾಡುವ ಮೂಲಕ ಸೋಂಕು ಹರಡುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಆ್ಯಂಟಿ ಮೈಕ್ರೊಬಿಯಲ್ ಬಟ್ಟೆಯು 30 ಬಾರಿ ನೀರಿನಿಂದ ತೊಳೆದರೂ ಸಹ ಬಳಕೆಗೆ ಯೋಗ್ಯವಾಗಿರಲಿದೆ. ಅಲ್ಲದೆ ಇದು ಸ್ಥಳಿಯ ಗಾರ್ಮೆಂಟ್​ ಹಾಗೂ ಒಟ್ಟೆ ಉದ್ಯಮದ ಆರ್ಥಿಕತೆಯನ್ನು ಮೇಲೆತ್ತಲೂ ಸಹಾಯ ಮಾಡುತ್ತದೆ ಎಂದು ಐಐಟಿ ದೆಹಲಿ ಇಂಜಿನಿಯರಿಂಗ್ ಹಾಗೂ ಜವಳಿ ಮತ್ತು ಫೈಬರ್​​​ ವಿಭಾಗದ ಮುಖ್ಯಸ್ಥ ಬಿಪಿನ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

antiviral-t-shirts
ಸೋಂಕು ತಡೆ ಟಿ-ಶರ್ಟ್

ಅಲ್ಲದೆ ಕ್ಲೆನ್ಸ್​​​ಟಾ ಹೆಸರಿನ ಕೋವಿಡ್ ಲೋಷನ್ 24 ಗಂಟೆಗಳ ಸುರಕ್ಷತೆ ನೀಡುವುದಲ್ಲದೆ ಶೇ. 99.9ರಷ್ಟು ವೈರಸ್​ಗಳಿಂದಲೂ ರಕ್ಷಣೆ ನೀಡಲಿದೆ ಎಂದಿದ್ದಾರೆ.

ಇದು ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿ ಮಾಡದೆ ಬ್ಯಾಕ್ಟೀರಿಯಾ, ವೈರಸ್​​​ಗಳನ್ನು ತಡೆಗಟ್ಟಲು ತಯಾರಾದ ಮೊದಲ ದೀರ್ಘಕಾಲದ ಆ್ಯಂಟಿವೈರಲ್ ತಂತ್ರಜ್ಞಾನ (ಪಿಎಪಿ-ಪ್ರೊಲಾಂಗ್ ಆ್ಯಂಟಿ ವೈರಲ್ ಟೆಕ್ನಾಲಜಿ) ಇದಾಗಿದೆ. ಇದರಿಂದಾಗಿ ಪರಿಣಾಮಕಾರಿಯಾಗಿ ಸೋಂಕು ತಡೆಗಟ್ಟಬಹುದು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.