ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉನ್ನತ ಹುದ್ದೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದ್ದು, ಐಜಿಪಿ (ಶಸಸ್ತ್ರ) ಸ್ವಾಮಿ ಪ್ರಕಾಶ್ ಪಾನಿಯವರನ್ನು ನಾಲ್ಕು ವರ್ಷಗಳ ಅವಧಿಗೆ ಡೆಪ್ಯುಟೇಷನ್ ಆಧಾರದ ಮೇಲೆ ಸಚಿವ ಸಂಪುಟದ ನಿರ್ದೇಶಕರಾಗಿ ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.
ಜಮ್ಮು ಕಾಶ್ಮೀರ ಗೃಹ ಇಲಾಖೆಯ ಪ್ರಿನ್ಸಿಪಲ್ ಸೆಕ್ರೇಟರಿ ಶಲೀನ್ ಕಬ್ರಾ ಅವರ ಆದೇಶದ ಪ್ರಕಾರ, 2000ನೇ ಬ್ಯಾಚ್ನ ಜಮ್ಮು ಕಾಶ್ಮೀರ ಕೇಡರ್ ಐಎಎಸ್ ಅಧಿಕಾರಿ ಪಾನಿ ಅವರನ್ನ ನೂತನ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ.
ಪ್ರಸ್ತುತ ಐಜಿಪಿ( ಶಸಸ್ತ್ರ) ವಿಜಯ್ ಕುಮಾರ್ ಅವರು ಈ ಹುದ್ದೆಯನ್ನು ನಿರ್ವಹಿಸುತ್ತಿದ್ದು, ಮುಂದಿನ ಆದೇಶದವರೆಗೆ ಅವರೇ ಮುಂದುವರೆಯಲಿದ್ದಾರೆ.