ನವದೆಹಲಿ: ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್‌ಗೆ 2 ಕೋಟಿ ರೂ.ಗಳ ಅತಿಯಾದ ಬೆಲೆಗೆ ಪೇಂಟಿಂಗ್‌ನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾರಾಟ ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಿ ಭ್ರಷ್ಟಾಚಾರ ನಡೆದರೂ ಅಲ್ಲಿ ಕಾಂಗ್ರೆಸ್ ಪಕ್ಷ ಇರಲೇಬೇಕು. ಪ್ರಿಯಾಂಕಾ ಗಾಂಧಿ, ರಾಣಾ ಕಪೂರ್‌ಗೆ ಮಾರಾಟ ಮಾಡಿರುವ ಈ ಪೇಂಟಿಂಗ್‌ನ 1985ರಲ್ಲಿ ಎಂ ಎಫ್ ಹುಸೇನ್ ಅವರು ಅಂದಿನ ಪ್ರಧಾನಿ ರಾಜೀವ್ ಗಾಂಧಿಗೆ ಕಾಂಗ್ರೆಸ್ನ ಶತಮಾನೋತ್ಸವ ದಿನದಂದು ಉಡುಗೊರೆಯಾಗಿ ನೀಡಿದ್ದರು. ಹುಸೇನ್ರ ಪೇಂಟಿಂಗ್‌ನ ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಬಳಸಿಕೊಂಡಿದೆ. ಭ್ರಷ್ಟಾಚಾರ ಒಂದು ಕಲೆಯಾದರೆ, ಕಾಂಗ್ರೆಸ್ ಅದರ ಕಲಾವಿದ ಎಂದು ವ್ಯಂಗ್ಯವಾಡಿದ್ದಾರೆ.
ಅಲ್ಲದೇ ಕ್ರಿಮಿನಲ್ ಮೂಲಗಳಿಂದ ಸಂಗ್ರಹವಾದ ಹಣ ಹೊಂದಿರುವ ಕಪೂರ್ರ ಖಾತೆಯಿಂದ ಪ್ರಿಯಾಂಕಾರಿಗೆ ಹೇಗೆ ತಲುಪಿತು ಎಂಬುದರ ಕುರಿತ ಸಂಪೂರ್ಣ ಪ್ರಸಂಗ ತನಿಖೆಯಾಗಬೇಕೆಂದು ಬಿಜೆಪಿ ಒತ್ತಾಯಿಸುತ್ತೆ ಎಂದರು. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಬಳಿ 2 ಕೋಟಿ ರೂ. ಕೊಟ್ಟು ಖರೀದಿಸಿದ್ದ ರಾಜೀವ್ ಗಾಂಧಿ ಅವರ ಭಾವಚಿತ್ರವಿರುವ ಪೇಂಟಿಂಗ್‌ನ ಇಡಿ ವಶಕ್ಕೆ ಪಡೆದಿತ್ತು. ಇಡಿ ತನಿಖೆಯ ವೇಳೆ ಈ ವಿಚಾರ ಬೆಳಕಿಗೆ ಬಂದಿದ್ದು, 2010ರಲ್ಲಿ ಪೇಂಟಿಂಗ್ ಖರೀದಿ ವಿಚಾರವಾಗಿ ರಾಣಾ, ಪ್ರಿಯಾಂಕಾಗೆ ಪತ್ರ ಬರೆದಿರುವುದು ಕೂಡ ಬೆಳಕಿಗೆ ಬಂದಿದೆ ಅಂತಾ ಸಂಬೀತ್ ಆರೋಪಿಸಿದ್ದಾರೆ.