ನವದೆಹಲಿ: ದೇಶದಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಶೇ 10 ರಷ್ಟು ಜನರು ಕೋವಿಡ್ -19 ಸೋಂಕಿಗೆ ತುತ್ತಾಗಿದ್ದಾರೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ತಿಳಿಸಿದೆ. ಜೊತೆಗೆ ಇಲ್ಲಿಯವರೆಗೆ ಈ ರೋಗಾಣು ಸಮುದಾಯದ ಹಂತದಲ್ಲಿ ಹರಡೋಕೆ ಶುರುವಾಗಿಲ್ಲ ಎಂದು ಸದ್ಯದ ಪರಿಸ್ಥಿತಿ ಅವಲೋಕಿಸಿ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಐಸಿಎಂಆರ್ ವಿಜ್ಞಾನಿ ಆರ್.ಗಂಗಖೇಡ್ಕರ್, ಉಸಿರಾಟದ ತೊಂದರೆಯಿಂದ ಆಸ್ಪತ್ರೆ ಸೇರಿದ್ದ 110 ಜನರಲ್ಲಿ 11 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಚೆನ್ನೈ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ಸೇರಿದ ಮೂವರು ರೋಗಿಗಳಿಗೆ ಯಾವುದೇ ವಿದೇಶಿ ಪ್ರಯಾಣದ ಇತಿಹಾಸವಿಲ್ಲ ಅಥವಾ ಸೋಂಕಿತ ರೋಗಿಯೊಂದಿಗೆ ಯಾವುದೇ ಸಂಪರ್ಕವಿಲ್ಲ. ಆದರೆ ಉಸಿರಾಟದ ತೊಂದರೆಯಿಂದ ಕೊರೊನಾ ಸೋಂಕು ಬಾಧಿಸಿದೆ ಎಂದು ಅವರು ತಿಳಿಸಿದರು.
-
ICMR finds 10% SARI patients positive for COVID-19, no community transmission yet
— ANI Digital (@ani_digital) March 28, 2020 " class="align-text-top noRightClick twitterSection" data="
Read @ANI Story | https://t.co/nPGxqTBe5M pic.twitter.com/76oOZ6hiL8
">ICMR finds 10% SARI patients positive for COVID-19, no community transmission yet
— ANI Digital (@ani_digital) March 28, 2020
Read @ANI Story | https://t.co/nPGxqTBe5M pic.twitter.com/76oOZ6hiL8ICMR finds 10% SARI patients positive for COVID-19, no community transmission yet
— ANI Digital (@ani_digital) March 28, 2020
Read @ANI Story | https://t.co/nPGxqTBe5M pic.twitter.com/76oOZ6hiL8
ಭಾರತದಾದ್ಯಂತ ಕೊರೊನಾ ಪ್ರಕರಣಗಳನ್ನು ಪರೀಕ್ಷಿಸುವ ಮತ್ತು ಪತ್ತೆಹಚ್ಚುವ ಸಾಮರ್ಥ್ಯವನ್ನು ನಾವು ಬಲಪಡಿಸಿದ್ದೇವೆ. ಇಲ್ಲಿಯವರೆಗೆ 150 ಕ್ಕೂ ಹೆಚ್ಚು (ಸರ್ಕಾರಿ ಮತ್ತು ಖಾಸಗಿ) ಪ್ರಯೋಗಾಲಯಗಳು ಕೋವಿಡ್-19 ರೋಗನಿರ್ಣಯ ಪರೀಕ್ಷೆಗಳನ್ನು ನಡೆಸುತ್ತಿವೆ ಎಂದು ಆರ್.ಗಂಗಖೇಡ್ಕರ್ ಹೇಳಿದ್ದಾರೆ.