ಹೈದರಾಬಾದ್: ಕರಾವಳಿ ಭದ್ರತೆ ಹೆಚ್ಚಿಸಲು ಸಾಗರ ಪೊಲೀಸ್ ಸಿಬ್ಬಂದಿಗೆ ಭಾರತೀಯ ಕರಾವಳಿ ಕಾವಲು ಪಡೆ (ಐಸಿಜೆ) ಸಮುದ್ರ ತರಬೇತಿ ನೀಡಲು ಪ್ರಾರಂಭಿಸಿದೆ.
ಕರಾವಳಿ ಭದ್ರತಾ ರಚನೆಯಲ್ಲಿ ಸಾಗರ ಪೊಲೀಸರ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಕರಾವಳಿ ಭದ್ರತಾ ಯೋಜನೆ (ಸಿಎಸ್‌ಎಸ್) ಅನುಷ್ಠಾನಕ್ಕೆ ಅನುವು ಮಾಡಿಕೊಡಲು ಜೆಸಿಪಿಯನ್ನು ಸ್ಥಾಪಿಸಲಾಗುತ್ತಿದೆ.
![ಸಾಗರ ಪೊಲೀಸ್ ಸಿಬ್ಬಂದಿಗೆ ಐಸಿಜಿ ತರಬೇತಿ](https://etvbharatimages.akamaized.net/etvbharat/prod-images/8430561_p.jpg)
ಇದರ ಜೊತೆಗೆ ಸಾಗರ ಪೊಲೀಸರ ಸಂವಹನ, ಪರಸ್ಪರ ಕಾರ್ಯಸಾಧ್ಯತೆ, ಜಂಟಿ ತನಿಖಾ ಕಾರ್ಯವಿಧಾನಗಳ ಸಮಸ್ಯೆಗಳನ್ನು ಪರಿಹರಿಸಲು ಜೆಸಿಪಿ ಸಶಕ್ತಗೊಳಿಸುತ್ತದೆ.
ಆಯಾ ರಾಜ್ಯಗಳ ವ್ಯಾಪ್ತಿಗೆ ಬರುವ ಪ್ರಾದೇಶಿಕ ಸಮುದ್ರದಲ್ಲಿ ಸುರಕ್ಷತೆ, ಸಂಚರಣೆ, ನಿರ್ವಹಣೆ, ಕಾನೂನು ಜಾರಿ, ಕಣ್ಗಾವಲು ಮತ್ತು ತನಿಖೆಯ ವಿವಿಧ ಅಂಶಗಳ ಬಗ್ಗೆ ಐಸಿಜಿ ಸಾಗರ ಪೊಲೀಸ್ ಸಿಬ್ಬಂದಿಗೆ ಅನುಭವವನ್ನು ನೀಡುತ್ತದೆ.
![ಸಾಗರ ಪೊಲೀಸ್ ಸಿಬ್ಬಂದಿಗೆ ಐಸಿಜಿ ತರಬೇತಿ](https://etvbharatimages.akamaized.net/etvbharat/prod-images/8430561_f.jpg)
ಜಂಟಿ ಗಸ್ತು ಅನುಷ್ಠಾನದೊಂದಿಗೆ, ಸಾಗರ ಪೊಲೀಸ್ ಸಿಬ್ಬಂದಿ ಸಮರ್ಪಕ ತರಬೇತಿ ಪಡೆದ ಸಿಬ್ಬಂದಿಯನ್ನು ಒಟ್ಟುಗೂಡಿಸಿ ಅವರ ಒಟ್ಟಾರೆ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುತ್ತಾರೆ.
ಕರಾವಳಿ ಭದ್ರತೆಯತ್ತ ಸಾಗರ ಪೊಲೀಸರ ಅಸ್ತಿತ್ವದಲ್ಲಿರುವ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಈ ಪ್ರಯತ್ನ ಹೊಂದಿದೆ.