ದೆಹಲಿ: ಜೂನ್ 10 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಸಭೆ ನಡೆಯಲಿದ್ದು, ಟಿ-20 ವಿಶ್ವಕಪ್‌ನ ಭವಿಷ್ಯದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಟಿ-20 ವಿಶ್ವಕಪ್ ಈ ವರ್ಷ ಅಕ್ಟೋಬರ್ 18 ರಿಂದ ನವೆಂಬರ್ 15 ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಆದಾಗ್ಯೂ, ಕೊರೊನಾ ವೈರಸ್ ಹಾವಳಿಯಿಂದಾಗಿ ಪಂದ್ಯಾವಳಿಯ ಭವಿಷ್ಯವು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತಾಗಿದೆ.
ಸಭೆಯಲ್ಲಿ ಪ್ರಮುಖವಾಗಿ ಐದು ವಿಷಯಗಳು ಚರ್ಚೆಗೆ ಬರುವ ಸಾಧ್ಯತೆ ಇದೆ. ಅವುಗಳೆಂದರೆ - ಟಿ20 ವಿಶ್ವಕಪ್‌ನ ಭವಿಷ್ಯದ ನಿರ್ಧಾರ, ಐಸಿಸಿ ಅಧ್ಯಕ್ಷರ ಚುನಾವಣೆ, ಭವಿಷ್ಯದ ಪ್ರವಾಸಗಳ ಕಾರ್ಯಕ್ರಮದ ವೇಳಾಪಟ್ಟಿ, ಬಿಸಿಸಿಐನೊಂದಿಗಿನ ತೆರಿಗೆ ಸಮಸ್ಯೆಗಳು ಮತ್ತು ಐಸಿಸಿ ಸಿಇಒ ಗೌಪ್ಯತೆ ವಿಷಯದ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಮೇ 28 ರಂದು ನಡೆದಿದ್ದ ಸಭೆಯಲ್ಲಿ, ಐಸಿಸಿ ಎಲ್ಲಾ ಕಾರ್ಯಸೂಚಿ ವಿಷಯಗಳ ನಿರ್ಧಾರವನ್ನು ಜೂನ್ 10 ಕ್ಕೆ ಮುಂದೂಡಿತ್ತು.