ಮುಂಬೈ: ಕಳೆದ ಜುಲೈ ತಿಂಗಳಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ ಕ್ರಿಕೆಟ್ ಸಿಕ್ಕಾಪಟ್ಟೆ ರೋಚಕತೆಯಿಂದ ಕೂಡಿತ್ತು. ಈ ಪಂದ್ಯದಲ್ಲಿ ನಿಗದಿತ 50 ಓವರ್ಗಳಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ಸಮಬಲದ ಪ್ರದರ್ಶನ ನೀಡಿದ್ದರಿಂದ ಪಂದ್ಯ ಡ್ರಾ ಆಗಿತ್ತು. ನಂತರದ ಸೂಪರ್ ಓವರ್ನಲ್ಲೂ ಇದೇ ಘಟನೆ ನಡೆದಿತ್ತು. ಆದರೆ ಬೌಂಡರಿ ಆಧಾರದ ಮೇಲೆ ಇಂಗ್ಲೆಂಡ್ ತಂಡವನ್ನ ಚಾಂಪಿಯನ್ ಎಂದು ಘೋಷಣೆ ಮಾಡಲಾಗಿತ್ತು.
ಐಸಿಸಿ ಈ ನಿಯಮ ಸಿಕ್ಕಾಪಟ್ಟೆ ಆಕ್ರೋಶಕ್ಕೆ ಕಾರಣವಾಗಿತ್ತು. ಹಾಗೂ ಬೌಂಡರಿ ನಿಯಮದ ವಿರುದ್ಧ ಅನೇಕ ಕ್ರೀಡಾಪಟುಗಳು ಸಿಡಿಮಿಡಿಗೊಂಡು ಜಂಟಿಯಾಗಿ ವಿಶ್ವಕಪ್ ವಿಜೇತ ತಂಡ ಎಂದು ಘೋಷಣೆ ಮಾಡಬೇಕಿತ್ತು ಎಂದಿತ್ತು. ಸದ್ಯ ಈ ನಿಯಮವನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಬದಲಾವಣೆ ಮಾಡಿದೆ.
-
ICC: In group stages,if Super Over is tied, match will be tied. In Semi Finals/Finals, there's one change to Super Over regulation in keeping with basic principle of scoring more runs than the opponent to win,Super Over will be repeated until one team has more runs than the other https://t.co/5fpM9ayHzW
— ANI (@ANI) October 14, 2019 " class="align-text-top noRightClick twitterSection" data="
">ICC: In group stages,if Super Over is tied, match will be tied. In Semi Finals/Finals, there's one change to Super Over regulation in keeping with basic principle of scoring more runs than the opponent to win,Super Over will be repeated until one team has more runs than the other https://t.co/5fpM9ayHzW
— ANI (@ANI) October 14, 2019ICC: In group stages,if Super Over is tied, match will be tied. In Semi Finals/Finals, there's one change to Super Over regulation in keeping with basic principle of scoring more runs than the opponent to win,Super Over will be repeated until one team has more runs than the other https://t.co/5fpM9ayHzW
— ANI (@ANI) October 14, 2019
ಐಸಿಸಿ ಪ್ರಯೋಜಕತ್ವದಲ್ಲಿ ನಡೆಯುವ ಟೂರ್ನಿಯಲ್ಲಿ ಗ್ರೂಪ್ ಹಂತದ ಪಂದ್ಯಗಳಲ್ಲಿ ಈಗಾಗಲೇ ಚಲಾವಣೆಯಲ್ಲಿರುವ ನಿಯಮ ಜಾರಿಯಾಗಲಿದ್ದು, ಪಂದ್ಯ ಟೈ ಆದರೆ ಅಂಕ ಹಂಚಿಕೆ ಹಾಗೂ ಸೆಮಿಫೈನಲ್ ಹಾಗೂ ಫೈನಲ್ನಲ್ಲಿ ಒಂದು ತಂಡ ಗೆಲುವವರೆಗೂ ಸೂಪರ್ ಓವರ್ ನಡೆಯಲಿದೆ. ಇಂದು ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಈ ನಿಯಮ ಜಾರಿಗೊಳ್ಳಲಿದೆ.
ಈಗಾಗಲೇ ಆಸ್ಟ್ರೇಲಿಯಾ ಕ್ರಿಕೆಟ್ ಈ ನಿಯಮ ಜಾರಿಗೊಳಿಸಿದ್ದು, ಪುರುಷರು ಹಾಗೂ ಮಹಿಳೆಯರ ಬಿಗ್ಬ್ಯಾಶ್ ಟಿ-20 ಟೂರ್ನಿಗಳಲ್ಲಿ ಚಲಾವಣೆಯಲ್ಲಿದೆ.