ಹೈದರಾಬಾದ್: ಬೋರ್ಡ್ ಪರೀಕ್ಷೆಯ ಫಲಿತಾಂಶಕ್ಕಿಂತಲೂ ಜೀವನ ದೊಡ್ಡದು. ನಾನು 12ನೇ ತರಗತಿ ಪರೀಕ್ಷೆಯ ರಸಾಯನಶಾಸ್ತ್ರ ವಿಷಯದಲ್ಲಿ 100ಕ್ಕೆ ಕೇವಲ 24 ಅಂಕ ಗಳಿಸಿದ್ದೆ. ನಾನು ತೆಗೆದುಕೊಂಡಿರುವ ಅಂಕ ಜೀವನದಲ್ಲಿ ಏನು ಮಾಡ್ಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಐಎಎಸ್ ಅಧಿಕಾರಿ ನಿತಿನ್ ಸಾಂಗ್ವಾನ್ ಟ್ವೀಟ್ ಮಾಡಿದ್ದಾರೆ.
ಒಂದೇ ವಾರದಲ್ಲಿ ದ್ವಿತೀಯ ಪಿಯು ಸೇರಿದಂತೆ 10ನೇ ತರಗತಿಯ ಸಿಬಿಎಸ್ಇ ಹಾಗೂ ವಿವಿಧ ರಾಜ್ಯದ ಬೋರ್ಡ್ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಪರೀಕ್ಷೆಯಲ್ಲಿ ಫೇಲ್ ಆಗಿ, ಮನನೊಂದ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿ ಬದುಕು ಮುಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ 12 ನೇ ತರಗತಿಯ ಪರೀಕ್ಷಾ ಅಂಕಗಳಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಧೈರ್ಯ ತುಂಬಿದ್ದಾರೆ.
-
Let's also catch up on this at NDTV India (Hindi) @ndtvindia tonight at 9:15 pm. https://t.co/4XL4kzbVXB
— Nitin Sangwan, IAS (@nitinsangwan) July 16, 2020 " class="align-text-top noRightClick twitterSection" data="
">Let's also catch up on this at NDTV India (Hindi) @ndtvindia tonight at 9:15 pm. https://t.co/4XL4kzbVXB
— Nitin Sangwan, IAS (@nitinsangwan) July 16, 2020Let's also catch up on this at NDTV India (Hindi) @ndtvindia tonight at 9:15 pm. https://t.co/4XL4kzbVXB
— Nitin Sangwan, IAS (@nitinsangwan) July 16, 2020
ಶಿಕ್ಷಣದ ಮುಖ್ಯ ಉದ್ದೇಶ ಕೇವಲ ಅಂಕ ಗಳಿಕೆಯಲ್ಲ. ಜೀವನ ಎಲ್ಲಕ್ಕಿಂತ ದೊಡ್ಡದು. ನಾನು ನನ್ನ 12ನೇ ತರಗತಿ ಮಾರ್ಕ್ಸ್ ಕಾರ್ಡ್ ಟ್ವೀಟ್ ಮಾಡಿರುವ ಮುಖ್ಯ ಉದ್ದೇಶ, ವಿದ್ಯಾರ್ಥಿಗಳು ನನಗಿಂತಲೂ ಹೆಚ್ಚಿನ ಅಂಕ ಪಡೆದುಕೊಂಡು ಚಿಂತೆ ಮಾಡ್ತಿದ್ದಾರೆ. ಇದು ಸರಿಯಲ್ಲ. ಕೇವಲ ಅಂಕಗಳಿಂದ ಜೀವನ ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಿವಿಮಾತು ಹೇಳಿದ್ದಾರೆ.
ರಸಾಯನಶಾಸ್ತ್ರದಲ್ಲಿ ಕೇವಲ 24 ಅಂಕ ಪಡೆದುಕೊಂಡಿರುವ ನಾನು ಕೇವಲ ಒಂದು ಅಂಕದಿಂದ ಪಾಸ್ ಆಗಿರುವೆ. ಆದರೆ ಅದು ನನ್ನ ಜೀವನ ರೂಪಿಸಿಲ್ಲ. ವಿದ್ಯಾರ್ಥಿಗಳ ಜೀವನದಲ್ಲಿ 12ನೇ ತರಗತಿ ಹಾಗೂ 10ನೇ ತರಗತಿಗಳು ಬಹು ಮುಖ್ಯ. ಆದರೆ ನಮ್ಮ ಜೀವನ ಇದರಲ್ಲಿ ಪಡೆದುಕೊಳ್ಳುವ ಅಂಕಗಳಿಂದ ನಿರ್ಧಾರವಾಗುವುದಿಲ್ಲ ಎಂದು ತಿಳಿಸಿದ್ದಾರೆ.