ಸೋನಿಪತ್(ಹರಿಯಾಣ): ತಾಂತ್ರಿಕ ದೋಷದಿಂದಾಗಿ ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್ ಸೋನಿಪತ್ ಕೆಜಿಪಿ ಎಕ್ಸ್‌ಪ್ರೆಸ್‌ವೇಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. ಯಮುನಾ ಸೇತುವೆಯ ಪಕ್ಕದ ಲೇನ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ.
ದೋಷದ ಬಗ್ಗೆ ಪೈಲಟ್ ಎಚ್ಚರಿಕೆ ನೀಡಿದ ನಂತರ ಹಿಂಡನ್ ಏರ್ಬೇಸ್ನ ಸಂಬಂಧಪಟ್ಟ ಅಧಿಕಾರಿಗಳು ಮತ್ತು ತಂತ್ರಜ್ಞರು ಸ್ಥಳಕ್ಕೆ ಧಾವಿಸಿದ್ದಾರೆ.
ತಾಂತ್ರಿಕ ದೋಷವನ್ನು ಸರಿಪಡಿಸಲು ಸುಮಾರು 90 ನಿಮಿಷ ಬೇಕಾಯಿತು. ಸಂಪೂರ್ಣವಾಗಿ ಸಿದ್ಧವಾದ ನಂತರ ಹೆಲಿಕಾಪ್ಟರ್ ನಿಗಧಿತ ಸ್ಥಳಕ್ಕೆ ತೆರಳಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.