ನವದೆಹಲಿ: ಬಾಲಾಕೋಟ್ ಏರ್‌ಸ್ಟ್ರೈಕ್ ಬಳಿಕ ಪಾಕ್ ಪ್ರತೀಕಾರಕ್ಕಾಗಿ ಹವಣಿಸಿತ್ತು. 2 ಡಜನ್ F-16 ಫೈಟರ್ ಜೆಟ್‌ಗಳನ್ನ ಭಾರತದ ವಾಯು ಪ್ರದೇಶದತ್ತ ನುಗ್ಗಲು ಯತ್ನಿಸಿದ್ದವು. ಈ ದಾಳಿಯ ಸುಳಿವು ಅರಿತು ಅದನ್ನ ಹಿಮ್ಮೆಟ್ಟಿಸಲು ಫೈಟರ್ ಕಂಟ್ರೋಲರಾಗಿರುವ ಮಹಿಳಾ ಸ್ಕ್ವಾರ್ಡನ್ ಲೀಡರ್ ಮಹತ್ವದ ಪಾತ್ರವಹಿಸಿರೋದು. ಅದೇ ವೀರ ನಾರಿಗೆ ಈಗ ಭಾರತೀಯ ಸೇನೆ ವಿಶಿಷ್ಟ ಸೇವಾ ಪದಕ ನೀಡಲು ಮುಂದಾಗಿದೆ.
ಆವತ್ತು ಫೆ. 27ರಂದು ಬೆಳಗ್ಗೆ ಏನಾಯ್ತು ಗೊತ್ತಾ?:

ಫೆಬ್ರವರಿ 26ರಂದು, ಮಿರಾಜ್-2000 ಫೈಟರ್ ವಿಮಾನಗಳು ಪಾಕ್‌ನ ಬಾಲಾಕೋಟ್‌ನಲ್ಲಿದ್ದ ಜೈಷ್-ಇ- ಮೊಹ್ಮದ್ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿದ್ದವು. ಇದರಿಂದಾಗಿ ಉಗ್ರರ ತರಬೇತಿ ಶಿಬಿರಗಳು ಧ್ವಂಸಗೊಂಡಿದ್ದವು. ಈ ದಾಳಿ ವಿರುದ್ಧ ಪಾಕ್ ಪ್ರತೀಕಾರಕ್ಕೆ ಹವಣಿಸುತ್ತಲಿತ್ತು. ಅಷ್ಟೇ ಅಲ್ಲ, ಭಾರತೀಯ ವಾಯುಪ್ರದೇಶದೊಳಗೆ ಪಾಕ್‌ನ ವಿಮಾನಗಳು ಪ್ರವೇಶಿಸಿದ್ದವು. ಈ ಬಗ್ಗೆ ಖಚಿತ ಸುಳಿವು ನೀಡಿ ಭಾರತೀಯ ವಾಯುಸೇನೆ ಸಮರ್ಥವಾಗಿ ಪಾಕ್ ಫೈಟರ್ ವಿಮಾನಗಳನ್ನ ಹಿಮ್ಮೆಟ್ಟಿಸಿತ್ತು. ಅದಕ್ಕೆ ಕಾರಣ ಐಎಎಫ್‌ನ ವುಮನ್ ಸ್ಕ್ವಾಡ್ರನ್ ಲೀಡರ್. ಫೆಬ್ರವರಿ 27ರಂದು ಜಮ್ಮು-ಕಾಶ್ಮೀರದ ಗಡಿಯಲ್ಲಿ ಭಾರತ ಮತ್ತು ಪಾಕ್ ನಡುವಿನ ಡಾಗ್‌ಫೈಟ್ ವೇಳೆ ಮಹತ್ತರ ಪಾತ್ರವಹಿಸಿದ್ದ ಐಎಎಫ್‌ನ ಮಹಿಳಾ ಫೈಟರ್ ಕಂಟ್ರೋಲರ್. ಈಗ ಅದೇ ವೀರ ಮಹಿಳೆಗೆ ಸೇನೆ 'ವಿಶೇಷ ಸೇವಾ ಪದಕ' ನೀಡಲಿದೆ.
ತಾಳ್ಮೆ, ಸಮಯಪ್ರಜ್ಞೆಯಿಂದ ಒತ್ತಡ ಸ್ಥಿತಿ ನಿರ್ವಹಣೆ :

ಪಂಜಾಬ್ ರಾಡಾರ್ ಕಂಟ್ರೋಲ್ ಸ್ಟೇಷನ್‌ನಲ್ಲಿ ಮಹಿಳಾ ಫೈಟರ್ ಕಂಟ್ರೋಲರ್ ಆಗಿರುವ ಅವರು, ಪಾಕ್ 24 ವಿಮಾನಗಳು ಭಾರತೀಯ ವಾಯುಪ್ರದೇಶದೊಳಗೆ ನುಗ್ಗಲೆತ್ನಿಸಿದ್ದವು. ಇಂಥ ಒತ್ತಡದ ಸ್ಥಿತಿಯನ್ನೂ ತುಂಬಾ ತಾಳ್ಮೆ, ಸಮಯಪ್ರಜ್ಞೆಯ ಜತೆಗೆ ಸಹನೆಯಿಂದಲೇ ಮಹಿಳಾ ಅಧಿಕಾರಿ ನಿಭಾಯಿಸಿದ್ದರು. ಅವತ್ತು ಬೆಳಗ್ಗೆ 8 : 45 ರಿಂದ 9 :30 ಮಧ್ಯೆ ವಾಯುಪ್ರದೇಶದೊಳಗೆ ನುಗ್ಗಿರುವ ಸುಳಿವು ಸಿಕ್ಕಿತ್ತು. ಬೆಳಗ್ಗೆ 9.30ರ ವೇಳೆಗೆ 15 ನಿಮಿಷದ ವಾಯುಗಾಮಿಯನ್ನ ಐಎಎಫ್ ಫೈಟರ್ ಕಂಟ್ರೋಲರ್‌ಗಳು ಗುರುತಿಸಿದ್ದರು.
ಪಾಕ್ ತೀವ್ರತರ ದಾಳಿ ನಡೆಸುವ ಮುನ್ಸೂಚನೆ ಅರಿತ ಫೈಟರ್ ಕಂಟ್ರೋಲ್ ತಕ್ಷಣ ಎಚ್ಚೆತ್ತಿಗೊಂಡಿತ್ತು. ನಾಲ್ಕು ಸುಖೊಯ್-30 ಫೈಟರ್ಸ್ ಹಾಗೂ 2 ಮಿರಾಜ್-2000 ವಿಮಾನಗಳು ದಕ್ಷಿಣ ಪಿರ್ ಪಂಜಾಲ್‌ನ ವಾಯುಪ್ರದೇಶದಲ್ಲಿ ಕಂಬ್ಯಾಟ್ ಏರ್ ಪ್ಯಾಟ್ರೋಲ್ ನಡೆಸಿದ್ದವು. ಅಷ್ಟೇ ಅಲ್ಲ, ಎರಡು ಮಿಗ್-21 ಬೈಸನ್ ಶ್ರೀನಗರದಿಂದ ಪಿರ್ ಪಂಜಾಲ್ ಪ್ರದೇಶದಲ್ಲಿ ಹಾರಾಟ ನಡೆಸಿದ್ದವು. ಪಾಕ್‌ನ F-16 ಹಿಮ್ಮೆಟ್ಟಿಸಲು ಭಾರತೀಯ ಫೈಟರ್ಸ್ ವಿಮಾನಗಳನ್ನ ಎಚ್ಚರಿಸಿ ಸನ್ನದ್ಧಗೊಳ್ಳುವಂತೆ ಮಾಡಿದ್ದೇ ಮಹಿಳಾ ಫೈಟರ್ ಕಂಟ್ರೋಲರ್.
ಸೇನಾ ಕಾರ್ಯಾಚರಣೆಗಳಲ್ಲಿ ಮಹಿಳೆಯರ ಪಾತ್ರ ದೊಡ್ಡದು:

ಅತ್ಯಾಧುನಿಕ ಮಧ್ಯಮ ಶ್ರೇಣಿಯ AIM-120C ಮಿಸೈಲ್‌ಗಳನ್ನ ಹೊಂದಿರುವ ಫೈಟರ್ಸ್‌ಗಳಿಗೆ ಎಚ್ಚರಾಗುವಂತೆ ಮಾಡಿ ಪಾಕ್‌ನ ದಾಳಿ ಹಿಮ್ಮೆಟ್ಟಿಸಲು ಕಾರಣವಾಗಿದ್ದರು. ಪಾಕ್ ಏರ್‌ಫೋರ್ಸ್ F-16 ವಿಮಾನಗಳು ಭಾರತೀಯ ವಾಯುಪ್ರದೇಶ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ. ಅವುಗಳನ್ನ ಹಿಮ್ಮೆಟ್ಟಿಸಲು ಸರ್ವಸನ್ನದ್ಧಗೊಳ್ಳಲು ಪೈಲಟ್‌ಗಳಿಗೆ ಸೂಚನೆ ನೀಡಿದ್ದೇ ಮಹಿಳಾ ಅಧಿಕಾರಿ. ಡಾಗ್ ಫೈಟ್ ವೇಳೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್, ಗಡಿರೇಖೆಯಲ್ಲಿ ಮಿಗ್-21 ಬೇಸನ್‌ನ R-73 ಮಿಸೈಲ್‌ನಿಂದ ಪಾಕ್‌ನ F-16 ಬೆನ್ನತ್ತಿ ಅದನ್ನ ಹೊಡೆದುರುಳಿಸಿದ್ದರು.

ಮಿಗ್-21ಗಿಂತಲೂ ಪಾಕ್‌ನ F-16 ಫೈಟರ್ ವಿಮಾನ ಅತ್ಯಾಧುನಿಕ ತಂತ್ರಜ್ಞಾನ ಹೊಂದಿತ್ತು. ಆದರೆ, Mig-21 ಬೇಸನ್‌ನಿಂದಲೇ F-16 ಫೈಟರ್ ಜೆಟ್ ಹೊಡೆದುರುಳಿಸಿ ಅಭಿನಂದನ್ ಜಗತ್ತೇ ಬೆರಗುಗೊಳ್ಳುವಂತೆ ಮಾಡಿದ್ದರು. ಆ ಬಳಿಕ Mig-21ನಿಂದ ಪ್ಯಾರಾಚುಟ್ ಬಳಿಸಿ ಪಾಕ್ ಗಡಿ ಪ್ರದೇಶದೊಳಗೆ ಇಳಿದಿದ್ದರು. ಭಾರತೀಯ ಸೇನೆಯಲ್ಲಿ ಈಗ ಸಾಕಷ್ಟು ವೀರ ನಾರಿಯರೂ ಮಹತ್ವದ ಕಾರ್ಯಾಚರಣೆಗಳಲ್ಲಿ ತಮ್ಮ ಸಾಮರ್ಥ್ಯದಿಂದ ದೇಶ ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ.