ETV Bharat / bharat

ಮಹಿಳೆಯರಿಗೆ ಗೌರವಾರ್ಥವಾಗಿ ಸಾಮಾಜಿಕ ಜಾಲತಾಣದಿಂದ ದೂರ ಇರುವೆ: ನಮೋ ಟ್ವೀಟ್​ - ಮಹಿಳಾ ದಿನಾಚರಣೆ

ಮಹಿಳಾ ದಿನಾಚರಣೆ ಅಂಗವಾಗಿ ಅವರಿಗೆ ಗೌರವ ನೀಡಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ತಾವು ಬಳಸುತ್ತಿರುವ ಸಾಮಾಜಿಕ ಜಾಲತಾಣಗಳಿಂದ ಒಂದು ದಿನ ದೂರ ಇರಲು ನಿರ್ಧರಿಸಿದ್ದಾರೆ. ಈ ಸಮಯವನ್ನು ಮಹಿಳೆಯರ ಜೀವನ ಮತ್ತು ಅವರ ಕೆಲಸದ ಸ್ಫೂರ್ತಿಗಾಗಿ ತ್ಯಾಗ ಮಾಡುವುದಾಗಿ ಹೇಳಿದ್ದಾರೆ.

PM Modi
ಪ್ರಧಾನಿ ನರೇಂದ್ರ ಮೋದಿ
author img

By

Published : Mar 3, 2020, 2:24 PM IST

ನವದೆಹಲಿ: ಸಾಮಾಜಿಕ ಜಾಲತಾಣಗಳಿಂದ ಹೊರಬರಲು ಚಿಂತನೆ ನಡೆಸುತ್ತಿರುವುದಾಗಿ ಸೋಮವಾರ ಟ್ವೀಟ್​ ಮಾಡಿ ಎಲ್ಲರ ತಲೆಯಲ್ಲಿ ಹುಳು ಬಿಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಅದಕ್ಕೆ ಸ್ಪಷ್ಟನೆ ನೀಡಿ, ಮತ್ತೊಂದು ಟ್ವೀಟ್​ ಮಾಡಿದ್ದಾರೆ.

ಜಾಲತಾಣಗಳ ಜಾಲದಿಂದ ಹೊರ ಬರಲು 'ಯೋಚಿಸ್ತಿದ್ದಾರಂತೆ' ಮೋದಿ, ಕುತೂಹಲ ಸೃಷ್ಟಿಸಿದ ಪಿಎಂ ಟ್ವೀಟ್​!

ಮಹಿಳಾ ದಿನಾಚರಣೆಯಂದು ಮಹಿಳೆಯರಿಗೆ ಗೌರವಾರ್ಥವಾಗಿ ಒಂದು ದಿನ ಸಾಮಾಜಿಕ ಜಾಲತಾಣಗಳಿಂದ ದೂರ ಇರುವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಸ್ಪಷ್ಟನೆ ನೀಡಿದ್ದು, "ಈ ಮಹಿಳಾ ದಿನಾಚರಣೆಯಂದು, ನನ್ನ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಅವರ ಜೀವನ ಮತ್ತು ಕೆಲಸದ ಸ್ಫೂರ್ತಿಗಾಗಿ ತ್ಯಾಗ ಮಾಡಲು ನಿರ್ಧರಿಸಿದ್ದು, ಪ್ರೇರಣೆ ನೀಡುವ ಅಥವಾ ಸ್ಫೂರ್ತಿದಾಯಕ ಮಹಿಳೆಯರ ಸ್ಟೋರಿಯನ್ನು ನೀವೂ ಇಲ್ಲಿ ಶೇರ್​ ಮಾಡಬಹುದು ಎಂದು ಹೇಳಿದ್ದಾರೆ.

ಮಾರ್ಚ್​​ 8 ಭಾನುವಾರ ಮಹಿಳಾ ದಿನಾಚರಣೆಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫೇಸ್​ಬುಕ್, ಟ್ವಿಟ್ಟರ್, ಇನ್​ಸ್ಟಾಗ್ರಾಮ್ ಮತ್ತು ಯೂಟ್ಯೂಬ್​ನಲ್ಲಿರುವ ತಮ್ಮ ಖಾತೆಗಳಿಂದ ಹೊರಬರುವುದಾಗಿ ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.