ನವದೆಹಲಿ: ರಾಮ ಮಂದಿರ ನಿರ್ಮಾಣ ವಿಚಾರ ಐತಿಹಾಸಿಕ ಮಾತ್ರವಲ್ಲ, ಭಾವನಾತ್ಮಕವೂ ಹೌದು. ನನ್ನ ಹೃದಯಕ್ಕೆ ಹತ್ತಿರವಿರುವ ಕನಸು ನನಸಾಗುವ ಕ್ಷಣವೆಂದು ಎಂದು ಮಾಜಿ ಉಪ ಪ್ರಧಾನಿ ಹಾಗು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಬಣ್ಣಿಸಿದರು.
ರಾಮ ಜನ್ಮ ಭೂಮಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಡ್ವಾಣಿ ತಮ್ಮ ಹೋರಾಟದ ದಿನಗಳ ಬಗ್ಗೆ ಮಾತನಾಡಿದರು. ಕೆಲವು ಸಮಯದಲ್ಲಿ ನಾವು ಕಂಡಿರುವ ಪ್ರಮುಖ ಕನಸು ನನಸಾಗಲು ಬಹಳಷ್ಟು ಸಮಯವಕಾಶ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಸೋಮನಾಥದಿಂದ ಅಯೋಧ್ಯೆವರೆಗೆ 1990ರಲ್ಲಿ ನಡೆದ ಯಾತ್ರೆಯಲ್ಲಿ ಸಾವಿರಾರು ಹೋರಾಟಗಾರರು ಭಾಗಿಯಾಗಿದ್ದರು. ಅವರ ಆಸೆ, ಶಕ್ತಿ ಹಾಗೂ ಭಾವನೆ ವೃದ್ಧಿಸಲು ಆ ಯಾತ್ರೆ ಪ್ರೇರಣೆಯಾಗಿತ್ತು ಎಂದಿದ್ದಾರೆ.
ರಾಮ ಮಂದಿರ ನಿರ್ಮಾಣ ಭಾರತವನ್ನು ಸದೃಢ ಹಾಗೂ ಸಮೃದ್ಧ ರಾಷ್ಟ್ರವನ್ನಾಗಿ ಪ್ರತಿನಿಧಿಸಲಿದ್ದು, ಭಾರತೀಯರ ಸದ್ಗುಣ ಹೆಚ್ಚಿಸಲು ಪ್ರೇರಕವಾಗಲಿದೆ ಎಂದಿದ್ದಾರೆ.
92 ವರ್ಷದ ಅಡ್ವಾಣಿ ನಾಳೆ ನಡೆಯಲಿರುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿದ್ದಾರೆ.