ಹೈದರಾಬಾದ್: ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳಿಗೆ ಕೋವಿಡ್ -19 ಸೋಂಕಿನ ಅಪಾಯವೂ ಹೆಚ್ಚಿದೆ ಎಂದ ವಿಶ್ವ ಅಧಿಕ ರಕ್ತದೊತ್ತಡ ದಿನವಾದ ನಿನ್ನೆ ತಿಳಿಸಿದ್ದಾರೆ.
ಅಧಿಕ ರಕ್ತದೊತ್ತಡದ ವ್ಯಕ್ತಿಗಳು ಮತ್ತು ವಯಸ್ಸಾದವರಿಗೆ ಕೋವಿಡ್ -19 ಸೋಂಕಿನ ಅಪಾಯ ಹೆಚ್ಚಿದೆ ಎಂದು ಸಿಕಂದರಾಬಾದ್ನ ಕಿಮ್ಸ್ ಆಸ್ಪತ್ರೆಯ ಹಿರಿಯ ಸಲಹೆಗಾರ, ವೈದ್ಯ ಮತ್ತು ಮಧುಮೇಹ ತಜ್ಞ ಡಾ. ಶಿವ ರಾಜು ಹೇಳಿದರು.
ಅಂತಹ ವ್ಯಕ್ತಿಗಳು ಮನೆಯಲ್ಲಿಯೇ ಇದ್ದು, ರಕ್ತದೊತ್ತಡಕ್ಕೆ ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಲ್ಳಬೇಕು. ಮನೆಯಲ್ಲಿಯೇ ರಕ್ತದೊತ್ತಡದ ಮಟ್ಟವನ್ನು ಗಮನಿಸಬೇಕು ಮತ್ತು ಕಡಿಮೆ ಉಪ್ಪಿರುವ ಆಹಾರವನ್ನು ಸೇವಿಸಬೇಕು ಎಂದರು ಸಲಹೆ ನಿಡಿದರು.
ಕೋವಿಡ್ -19ನಿಂದ ಸಾವನ್ನಪ್ಪಿದವರಲ್ಲಿ 6 ಶೇಕಡಾದಷ್ಟು ಜನರು ಅಧಿಕ ರಕ್ತದೊತ್ತಡ ಹೊಂದಿದ್ದ ರೋಗಿಗಳಾಗಿದ್ದಾರೆ ಎಂದು ಅಧ್ಯಯನವು ತೋರಿಸುತ್ತದೆ. ಸಾಮಾನ್ಯ ರೋಗಿಗಳಿಗೆ ಕೋವಿಡ್ -19ನಿಂದ ಮರಣ ಪ್ರಮಾಣವು 2 ಶೇಕಡಾದಷ್ಟಿದೆ.