ಹೈದರಾಬಾದ್: ಉದ್ಯೋಗ ನೀಡುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಮಹಿಳೆಯನ್ನು ಅಪಹರಿಸಿದ ಪ್ರಕರಣ ಇಲ್ಲಿನ ಎಲ್ಬಿ ನಗರದಲ್ಲಿ ನಡೆದಿದೆ.
ಎಲ್ಬಿ ನಗರದ ಡಿಸಿಪಿ ಸುಪ್ರೀತ್ಸಿಂಗ್ ಮಾಧ್ಯಮದವರೊಂದಿಗೆ ಮಾತನಾಡಿ, ಅಪಹರಣವಾದ ಮಹಿಳೆಯ ತಂದೆ ಯಾದಯಿ, ಹಯಾತ್ನಗರದಲ್ಲಿ ಹೋಟೆಲ್ ಇಟ್ಟುಕೊಂಡಿದ್ದು ಸಿದ್ದಾರ್ಥ್ ರೆಡ್ಡಿ ಎಂಬ ಗ್ರಾಹಕ ಹೋಟೆಲ್ಗೆ ಆಗಮಿಸಿದ್ದಾನೆ. ಇಬ್ಬರ ನಡುವೆ ಕೆಲಕಾಲ ಸಂಭಾಷಣೆ ನಡೆದಿದ್ದು, ಯಾದಯಿ ಪುತ್ರಿ ಸೋನಿಗೆ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿ, ಯಾದಾಯಿ ಮತ್ತು ಆತನ ಇಬ್ಬರು ಮಕ್ಕಳನ್ನು ಕರೆದು ಜುಲೈ 23ರಂದು ನಗರವಿಡೇ ತಿರುಗಿ ಅವರ ವಿಶ್ವಾಸ ಗಳಿಸಿದ್ದಾನೆ.
ಉದ್ಯೋಗಕ್ಕಾಗಿ ಕೆಲವು ದಾಖಲೆಗಳ ಅವಶ್ಯಕತೆಯಿದೆ, ಸಿದ್ಧಪಡಿಸಿಕೊಳ್ಳಿ ಎಂದು ನನ್ನನ್ನು ಮತ್ತು ಮಗನನ್ನು ಕಾರ್ನಿಂದ ಇಳಿಸಿ, ಸೋನಿಯನ್ನು ಮಾತ್ರ ಕರೆದೊಯ್ದಿದ್ದಾನೆಂದು ತಂದೆ ಯಾದಯಿ ತಿಳಿಸಿದ್ದಾರೆ.
ಸದ್ಯ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ಮತ್ತು ಮಹಿಳೆಯನ್ನು ರಕ್ಷಿಸಲು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ನಾವು ಸುತ್ತಮುತ್ತಲಿನ ಎಲ್ಲಾ ಸಿಸಿ ಟಿವಿಗಳನ್ನು ಪರಿಶೀಲಿಸುತ್ತಿದ್ದೇವೆ, ಮಹಿಳೆಯ ಹುಡುಕಾಟ ನಡೆಸುತ್ತಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆಯೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.