ಹೈದರಾಬಾದ್ : ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ ಆರೋಪದಡಿ ವ್ಯಕ್ತಿಯೋರ್ವನ ಬಂಧನ ಮಾಡುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಹೋಳಿ ಹಬ್ಬದ ಸಂಭ್ರಮಾಚರಣೆ ದಿನ ಈ ಘಟನೆ ನಡೆದಿತ್ತು.
ನಿನ್ನೆ ಸಹೋದರನೊಂದಿಗೆ ಆರು ವರ್ಷದ ಬಾಲಕಿ ಮನೆ ಮುಂದೆ ಬಣ್ಣ ಆಡುತ್ತಿದ್ದಳು. ಈ ವೇಳೆ 20 ವರ್ಷದ ಕಾಮುಕ ಆಕೆಯನ್ನ ರೈಲ್ವೆ ಹಳಿ ಬಳಿಗೆ ಕರೆದ್ಯೊಯ್ದು ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದನು. ಸಂಜೆಯಾದರೂ ಮಗು ಮನೆಗೆ ಬಾರದ ಕಾರಣ ಪೋಷಕರು ಅಲ್ವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ವೇಳೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾಗ, ಸ್ಥಳೀಯರು ಬಾಲಕಿ ಮೃತದೇಹ ನೋಡಿರುವ ಮಾಹಿತಿ ನೀಡಿದ್ದಾರೆ. ಪೊಲೀಸರು ಪೋಷಕರೊಂದಿಗೆ ಸೇರಿ ಸ್ಥಳಕ್ಕೆ ಹೋಗಿ ಮೃತದೇಹ ವಶಕ್ಕೆ ಪಡೆದುಕೊಂಡಿದ್ದಾರೆ.
ಕಾಮುಕ ವ್ಯಕ್ತಿ ವೈರ್ನಿಂದ ಬಾಲಕಿಯ ಕುತ್ತಿಗೆಗೆ ಕಟ್ಟಿದ್ದಾನೆ. ತದನಂತರ ಆಕೆಯ ಮೇಲೆ ಅತ್ಯಾಚಾರಗೈದಿದ್ದಾನೆ. ಆಕೆ ಸಾವನ್ನಪ್ಪಿದ್ದರೂ ತನ್ನ ಕೃತ್ಯ ನಿಲ್ಲಿಸಿಲ್ಲ ಎಂದು ಡಿಸಿಪಿ ಪಿವಿ ಪದ್ಮಜ್ ತಿಳಿಸಿದ್ದಾರೆ. ಈತನ ಅರೆಸ್ಟ್ ಮಾಡಿದಾಗ ಕೂಡ ದ್ವಂದ್ವ ಹೇಳಿಕೆ ನೀಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ಪೊಲೀಸರು ಕಂಬಿ ಹಿಂದೆ ತಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.