ಹೈದರಾಬಾದ್(ತೆಲಂಗಾಣ): ಹೈದರಾಬಾದ್‌ನಲ್ಲಿ ಸುರಿದ ಧಾರಾಕಾರ ಮಳೆ ಮತ್ತು ಭೀಕರ ಪ್ರವಾಹವು 37,000ಕ್ಕೂ ಹೆಚ್ಚು ಕುಟುಂಬಗಳ ಮೇಲೆ ಪರಿಣಾಮ ಬೀರಿದೆ ಎಂದು ಸರ್ಕಾರ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ಟೋಬರ್ 13-14ರಂದು ಮತ್ತು ಅಕ್ಟೋಬರ್ 17 ರಂದು ಸುರಿದ ಭಾರಿ ಮಳೆ ಮತ್ತು ಪ್ರವಾಹವು ಅನೇಕ ಪ್ರದೇಶಗಳನ್ನು ಮುಳುಗಿಸಿದ್ದು, 37,400 ಕುಟುಂಬಗಳ ಮೇಲೆ ಪರಿಣಾಮ ಬೀರಿದೆ ಎಂದಿದ್ದಾರೆ.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಆಯುಕ್ತ ಲೋಕೇಶ್ ಕುಮಾರ್ ಮಾತನಾಡಿ, ಅಕ್ಟೋಬರ್ 13 ರಂದು ಭಾರಿ ಮಳೆಯಿಂದಾಗಿ, ವಿವಿಧ ಪ್ರದೇಶಗಳು ಮುಳುಗಿವೆ ಮತ್ತು ಸುಮಾರು 35,309 ಕುಟುಂಬಗಳು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿವೆ ಎಂದು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 17 ರಂದು ಇನ್ನೂ 2,100 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಜಿಎಚ್‌ಎಂಸಿ ಪರಿಹಾರ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ ಮತ್ತು ಮುಳುಗಡೆಯಾಗಿರುವ ಪ್ರದೇಶಗಳನ್ನು ಸಾಮಾನ್ಯ ಸ್ಥಿತಿಗೆ ತರಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹವಾಮಾನ ಇಲಾಖೆ ಮುಂದಿನ ಒಂದೆರಡು ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ತಗ್ಗು ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಮೂರು ಬ್ಲಾಂಕೆಟ್ ಜೊತೆ ಪಡಿತರ ಹೊಂದಿರುವ ಸಮಾರು 2,800 ರೂಪಾಯಿ ಮೌಲ್ಯದ ಸಿಎಂ ಪರಿಹಾರ ಪಡಿತರ ಕಿಟ್‌ಗಳನ್ನು ಸಂತ್ರಸ್ತ ಕುಟುಂಬಗಳಿಗೆ ವಿತರಿಸಲಾಗುತ್ತಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.
ಇಲ್ಲಿಯವರೆಗೆ 20,000 ಪಡಿತರ ಕಿಟ್‌ಗಳು ಮತ್ತು ಬ್ಲಾಂಕೆಟ್ಗಳನ್ನು ವಿತರಿಸಲಾಗಿದ್ದು, ಉಳಿದ ಕಿಟ್‌ಗಳು ಮತ್ತು ಬ್ಲಾಂಕೆಟ್ಗಳನ್ನು ಶೀಘ್ರದಲ್ಲೇ ವಿತರಿಸಲಾಗುವುದು. ಅದೇ ರೀತಿ ಹಾಲು, ಬ್ರೆಡ್ ಮತ್ತು ಬಿಸ್ಕತ್ ಅನ್ನು ಸಹ ಸಂತ್ರಸ್ತರಿಗೆ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.