ETV Bharat / bharat

ಕೋವಿಡ್​ ಭೀತಿ: ಹುಸೇನ್​ ಸಾಗರ್​ಗೆ ಹಾರಿ ಪ್ರಾಣ ಬಿಟ್ಟ ವ್ಯಕ್ತಿ - ಹುಸೇನ್​ ಸಾಗರ್

ಉಸಿರಾಟದ ಸಮಸ್ಯೆ ಎದುರಾಗಿ, ಕೋವಿಡ್​ ಭೀತಿಗೆ ಒಳಗಾದ ವ್ಯಕ್ತಿಯೊಬ್ಬ ಹೈದರಾಬಾದ್​ನ ಹುಸೇನ್​ ಸಾಗರ್ ಸರೋವರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Hussain Sagar Lake
ಹುಸೇನ್​ ಸಾಗರ್
author img

By

Published : Jul 6, 2020, 10:49 AM IST

ಹೈದರಾಬಾದ್​: ಕೊರೊನಾ ಭೀತಿಯಿಂದ 34 ವರ್ಷದ ವ್ಯಕ್ತಿಯೊಬ್ಬ ತೆಲಂಗಾಣದ ಹೈದರಾಬಾದ್​ನ ಹುಸೇನ್​ ಸಾಗರ್ ಸರೋವರಕ್ಕೆ ಹಾರಿ ಸುಸೈಡ್​​ ಮಾಡಿಕೊಂಡಿದ್ದಾನೆ.

ಈತ ಮೂಲತಃ ಪಶ್ಚಿಮ ಬಂಗಾಳ ನಿವಾಸಿಯಾಗಿದ್ದು, ಹೈದರಾಬಾದ್​ನಲ್ಲಿ ವಾಸವಿದ್ದನು. ಕೆಲ ದಿನಗಳ ಹಿಂದೆ ಆನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಬಳಿಕ ಆತನಲ್ಲಿ ಕೋವಿಡ್​ ಲಕ್ಷಣಗಳು ಕಂಡುಬಂದಿದ್ದು, ಬೇರೆ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಆದರೆ, ಬೆಡ್​ಗಳ ಕೊರತೆ ಇದೆ ಎಂದು ಹೇಳಿ ಯಾವ ಖಾಸಗಿ ಆಸ್ಪತ್ರೆಗಳೂ ಆತನನ್ನು ದಾಖಲಿಸಿಕೊಳ್ಳಲು ನಿರಾಕರಿಸಿವೆ. ಜುಲೈ 3ರ ಶುಕ್ರವಾರ ಸಂಜೆ ತೀವ್ರ ಉಸಿರಾಟದ ಸಮಸ್ಯೆ ಎದುರಾಗಿದ್ದು, ಭಯ ಭೀತನಾದ ವ್ಯಕ್ತಿ ಆಟೋದಲ್ಲಿ ಹುಸೇನ್​ ಸಾಗರ್ ಸರೋವರದ ಬಳಿ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸರೋವರದಿಂದ ಮೃತದೇಹವನ್ನು ಭಾನುವಾರ ಮಧ್ಯಾಹ್ನ ಹೊರ ತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.