ETV Bharat / bharat

'ಲೋಕಲ್ ಟು ಗ್ಲೋಬಲ್': ಸೆಪ್ಟೆಂಬರ್​ಗೆ ಹುನಾರ್ ಹಾತ್​ ಪುನಾರಂಭ

author img

By

Published : May 23, 2020, 3:21 PM IST

ಸುಮಾರು ಐದು ತಿಂಗಳ ನಂತರ 'ಹುನಾರ್ ಹಾತ್' ಪುನಾರಂಭಗೊಳ್ಳಲಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

Hunar Haat to reopen from Sept
ಸೆಪ್ಟಂಬರ್​ಗೆ ಹುನಾರ್ ಹಾತ್​ ಪುನಾರಂಭ

ನವದೆಹಲಿ: ಕುಶಲಕರ್ಮಿಗಳಿಗೆ ಉದ್ಯೋಗ ಸೃಷ್ಟಿಸಲು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಪ್ರಮುಖ ಹೆಜ್ಜೆಯಾದ 'ಹುನಾರ್ ಹಾತ್' ಸೆಪ್ಟೆಂಬರ್‌ನಲ್ಲಿ 'ಲೋಕಲ್ ಟು ಗ್ಲೋಬಲ್' ಥೀಮ್‌ನೊಂದಿಗೆ ಪುನಾರಂಭಗೊಳ್ಳಲಿದೆ.

'ಹುನಾರ್ ಹಾತ್' ಕಳೆದ ಐದು ವರ್ಷಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಭಾರತೀಯ ಕುಶಲಕರ್ಮಿಗಳು, ಪಾಕ ಪ್ರವೀಣರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದ್ದು, ತುಂಬಾ ಜನಪ್ರಿಯವಾಗಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಸುಮಾರು ಐದು ತಿಂಗಳ ಅಂತರದ ನಂತರ 'ಹುನಾರ್ ಹಾತ್' ಪುನರಾರಂಭಗೊಳ್ಳಲಿದೆ. ದೇಶದ ದೂರದ ಪ್ರದೇಶಗಳ ಕುಶಲಕರ್ಮಿಗಳು ಮತ್ತು ಅವರು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಅವಕಾಶವನ್ನು ಒದಗಿಸುತ್ತಿದೆ. 'ಹುನಾರ್ ಹಾತ್' ಸ್ಥಳೀಯರ ಕೈಯಿಂದ ತಯಾರಿಸಿದ ಉತ್ಪನ್ನಗಳ ವಿಶ್ವಾಸಾರ್ಹ ಬ್ರಾಂಡ್ ಆಗಿ ಮಾರ್ಪಟ್ಟಿದೆ ಎಂದು ನಖ್ವಿ ತಿಳಿಸಿದ್ದಾರೆ.

'ಹುನಾರ್ ಹಾತ್' ನಲ್ಲಿ ಸಾಮಾಜಿಕ ಅಂತರ, ನೈರ್ಮಲ್ಯೀಕರಣ ಮತ್ತು ಮಾಸ್ಕ್​ ಬಳಕೆಯನ್ನು ಕಡ್ಡಾಯಗೊಳಿಸಲಾಗುವುದು. ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ವಿಶೇಷ 'ಜಾನ್ ಭಿ, ಜಹಾನ್ ಭಿ' ಎಂಬ ಪೆವಿಲಿಯನ್ ಇರುತ್ತದೆ ಎಂದು ನಖ್ವಿ ಹೇಳಿದ್ದಾರೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ದೇಶಾದ್ಯಂತ ಈವರೆಗೆ ಎರಡು ಡಜನ್‌ಗೂ ಹೆಚ್ಚು 'ಹುನಾರ್ ಹಾತ್' ಆಯೋಜಿಸಿದೆ.

Hunar Haat to reopen from Sept
ಇಂಡಿಯಾ ಗೇಟ್‌ನಲ್ಲಿ ಆಯೋಜಿಸಿದ್ದ 'ಹುನಾರ್ ಹಾತ್'ಗೆ ಭೇಟಿ ನೀಡಿದ್ದ ಮೋದಿ

ಮುಂದಿನ ದಿನಗಳಲ್ಲಿ ಚಂಡೀಗಢ, ದೆಹಲಿ, ಅಲಹಾಬಾದ್, ಭೋಪಾಲ್, ಜೈಪುರ, ಹೈದರಾಬಾದ್, ಮುಂಬೈ, ಗುರುಗಾಂವ್, ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಡೆಹ್ರಾಡೂನ್, ಪಾಟ್ನಾ, ನಾಗ್ಪುರ, ರಾಯ್‌ಪುರ, ಪುದುಚೇರಿ, ಅಮೃತಸರದಲ್ಲಿ 'ಹುನಾರ್ ಹಾತ್' ಆಯೋಜಿಸಲಾಗುವುದು. ಆನ್​ಲೈನ್​ ಮೂಲಕವೂ ವಸ್ತುಗಳನ್ನು ಖರೀದಿಸಲು ಅವಕಾಶವಿರುತ್ತದೆ ಎಂದು ನಖ್ವಿ ಹೇಳಿದ್ದಾರೆ

ಕೊನೆಯ ಬಾರಿ ಹುನಾರ್ ಹಾತ್ ಫೆಬ್ರವರಿ ಅಂತ್ಯದಿಂದ ಮಾರ್ಚ್ 8 ರವರೆಗೆ ರಾಂಚಿಯಲ್ಲಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿಯಲ್ಲಿ ನವದೆಹಲಿಯ ಇಂಡಿಯಾ ಗೇಟ್‌ನಲ್ಲಿ ಆಯೋಜಿಸಿದ್ದ 'ಹುನಾರ್ ಹಾತ್'ಗೆ ಭೇಟಿ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.