ಆಗ್ರಾ: ಹಾಲಿನ ವಾಹನವೊಂದು ಉತ್ತರಪ್ರದೇಶದ ಆಗ್ರಾದಲ್ಲಿ ಮಗುಚಿ ಬಿದ್ದಿದ್ದು, ಈ ವೇಳೆ ಶ್ವಾನಗಳೊಂದಿಗೆ ವ್ಯಕ್ತಿಯೋರ್ವ ಪಾತ್ರೆಯಲ್ಲಿ ಹಾಲು ತುಂಬಿಕೊಳ್ಳುತ್ತಿದ್ದ ಘಟನೆ ನಡೆದಿದ್ದು, ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ದೇಶದಲ್ಲಿ ಲಾಕ್ಡೌನ್ ಹೇರಿ ಆದೇಶ ಹೊರಡಿಸಿದ್ದರಿಂದ ಅನೇಕರು ತೀವ್ರವಾಗಿ ತೊಂದರೆಗೆ ಸಿಲುಕಿದ್ದಾರೆ. ಕೆಲವರು ನಿತ್ಯದ ಊಟಕ್ಕೂ ಪಡುವ ಪಡಿಪಾಟಲು ಅಷ್ಟಿಷ್ಟಲ್ಲ. ಅಂಥದ್ರಲ್ಲಿ ಆಹಾರ ಸಾಮಾಗ್ರಿಗಳು ಈ ರೀತಿ ಪೋಲಾಗುತ್ತಿರುವುದು ವಿಪರ್ಯಾಸ. ಹಾಲಿನ ಗಾಡಿ ಮಗುಚಿ ಬೀಳುತ್ತಿದ್ದಂತೆ ವ್ಯಕ್ತಿಯೋರ್ವ ಪಾತ್ರೆ ತೆಗೆದುಕೊಂಡು ಬಂದು ಅದರಲ್ಲಿ ತುಂಬಿಸಿಕೊಳ್ಳುತ್ತಿದ್ದು, ಇದರ ಹಿಂದೆ ಅನೇಕ ಶ್ವಾನಗಳು ಹಾಲು ಕುಡಿಯುತ್ತಿವೆ.