ETV Bharat / bharat

ಶತಮಾನಗಳಷ್ಟು ಹಳೆಯ ದೇವಾಲಯದ ಅಡಿಪಾಯಲ್ಲಿ ಅಪಾರ ಪ್ರಮಾಣದ ಚಿನ್ನ ಪತ್ತೆ - Uttaramari in Kanchipuram district of Tamil Nadu

ಕಂದಾಯ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಳ್ಳಲು ಸ್ಥಳಕ್ಕೆ ಹೋದಾಗ ಈ ವಿಚಾರವಾಗಿ ಜನರು ಅವರೊಂದಿಗೆ ವಾದಿಸಿದರು. ಸುಮಾರು 800 ಗ್ರಾಂ ಚಿನ್ನದ ಆಭರಣಗಳು ಪತ್ತೆಯಾಗಿವೆ. ಕೆಲವರು ಚಿನ್ನವನ್ನು ತಮ್ಮ ಮನೆಗಳಿಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತದೆ..

Huge amount of gold found under Centuries old temple
ಶತಮಾನಗಳಷ್ಟು ಹಳೆಯ ದೇವಾಲಯದ ಅಡಿಪಾಯಲ್ಲಿ ಅಪಾರ ಪ್ರಮಾಣದ ಚಿನ್ನ ಪತ್ತೆ
author img

By

Published : Dec 13, 2020, 12:38 PM IST

ಕಾಂಚೀಪುರಂ : ಶಿಥಿಲಗೊಂಡಿದ್ದ ಶತಮಾನಗಳಷ್ಟು ಹಳೆಯದಾದ ದೇವಾಲಯದ ನವೀಕರಣ ಕಾರ್ಯದ ಸಂದರ್ಭದಲ್ಲಿ ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿದೆ. ಕುಲಂಬೇಶ್ವರರ್​ ದೇವಸ್ಥಾನವನ್ನು ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಉತ್ತರಾಮೇರಿನಲ್ಲಿ 2ನೇ ಕುಲೋತುಂಗ ಚೋಳರ ಅವಧಿಯಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿದೆ.

ಶಿಥಿಲಗೊಂಡ ದೇವಾಲಯವನ್ನು ನವೀಕರಿಸಲು ದೇವಾಲಯ ಉತ್ಸವ ಸಮಿತಿ ಮತ್ತು ಗ್ರಾಮದ ಜನರು ನಿರ್ಧರಿಸಿದರು. ಟಾಸ್ಕ್‌ಫೋರ್ಸ್ ಪುರುಷರು ಪ್ರವೇಶ ದ್ವಾರದ ಮುಂಭಾಗದಲ್ಲಿ ಕಪ್ಪು ಕಲ್ಲುಗಳಿಂದ ಮಾಡಿದ ಮೆಟ್ಟಿಲುಗಳನ್ನು ತೆಗೆದಾಗ ಬಟ್ಟೆಯಿಂದ ಮುಚ್ಚಿದ ಬಂಡಲ್ ಕಂಡು ಬಂದಿದೆ. ಆ ಬಂಡಲ್‌ನ ತೆರೆದು ನೋಡಿದಾಗ ಅದರಲ್ಲಿ ಚಿನ್ನದ ಆಭರಣಗಳಿರುವುದು ಕಂಡು ಬಂದಿದೆ.

ಕಂದಾಯ ಇಲಾಖೆಯಿಂದ ಸರಿಯಾಗಿ ಅನುಮತಿ ಪಡೆಯದೆ ಜನರು 500 ವರ್ಷಗಳಷ್ಟು ಹಳೆಯದಾದ ದೇವಾಲಯವನ್ನು ನೆಲಸಮ ಮಾಡಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದ ಮಾಹಿತಿಯನ್ನು ಕಂದಾಯ ಅಧಿಕಾರಿಗಳಿಗೆ ನೀಡಲಾಗಿದೆ.

ಕಂದಾಯ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಳ್ಳಲು ಸ್ಥಳಕ್ಕೆ ಹೋದಾಗ ಈ ವಿಚಾರವಾಗಿ ಜನರು ಅವರೊಂದಿಗೆ ವಾದಿಸಿದರು. ಸುಮಾರು 800 ಗ್ರಾಂ ಚಿನ್ನದ ಆಭರಣಗಳು ಪತ್ತೆಯಾಗಿವೆ. ಕೆಲವರು ಚಿನ್ನವನ್ನು ತಮ್ಮ ಮನೆಗಳಿಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.

ನಾಯಕರ ಆಳ್ವಿಕೆಯ ಕಾಲವಾದ 16ನೇ ಶತಮಾನದಲ್ಲಿ ಜನರು ಈ ಚಿನ್ನವನ್ನು ವಿಗ್ರಹಗಳನ್ನು ಅಲಂಕರಿಸಲು ಬಳಸುತ್ತಿದ್ದರು. ಆಕ್ರಮಣಕಾರರಿಂದ ಅವುಗಳನ್ನು ರಕ್ಷಿಸಲು ದೇವಾಲಯದ ಕೆಳಗೆ ಹೂಳಿದ್ದಾರೆ ಎಂದು ತಿಳಿದು ಬಂದಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.