ನವದೆಹಲಿ: ಮಾನವ ಸಂಪನ್ಮೂಲ ಸಚಿವಾಲಯ ಶಾಲೆಗಳ ಆನ್‌ಲೈನ್ ತರಗತಿಗಳಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ವಿದ್ಯಾರ್ಥಿಗಳಿಗೆ ಒಂದು ದಿನದಲ್ಲಿ ಅವಧಿ ಮತ್ತು ಅಧಿವೇಶನಗಳ ಸಂಖ್ಯೆಯನ್ನು ತಿಳಿಸಲು ಶಿಫಾರಸು ಮಾಡಿದೆ.
ಕಳೆದ ನಾಲ್ಕು ತಿಂಗಳುಗಳಿಂದ ಶಾಲೆಗಳು ಆನ್‌ಲೈನ್ ತರಗತಿಗಳನ್ನು ನಡೆಸಲು ಪ್ರಾರಂಭಿಸಿದ ಬಳಿಕ ಮಕ್ಕಳು ಡಿಜಿಟಲ್ ಸ್ಕ್ರೀನ್ ಮುಂದೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಈ ಬಗ್ಗೆ ಪೋಷಕರ ಕಾಳಜಿ ಅನುಸರಿಸಿ, ಮಾರ್ಗಸೂಚಿಗಳನ್ನು ಸಚಿವಾಲಯ ರೂಪಿಸಿದೆ.
'ಪ್ರಗ್ಯತಾ' ಎಂಬ ಮಾರ್ಗಸೂಚಿಯಲ್ಲಿ, ಪೂರ್ವ - ಪ್ರಾಥಮಿಕ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳ ಅವಧಿ 30 ನಿಮಿಷಗಳಿಗಿಂತ ಹೆಚ್ಚು ಇರಬಾರದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಶಿಫಾರಸು ಮಾಡಿದೆ.
1 ರಿಂದ 8ನೇ ತರಗತಿಗಳಿಗೆ ಮಾನವ ಸಂಪನ್ಮೂಲ ಸಚಿವಾಲಯವು ತಲಾ 45 ನಿಮಿಷಗಳವರೆಗೆ ಎರಡು ಆನ್‌ಲೈನ್ ಸೆಷನ್‌ಗಳನ್ನು ಶಿಫಾರಸು ಮಾಡಿದ್ದರೆ, 9 ರಿಂದ 12ನೇ ತರಗತಿಗಳಿಗೆ 30 - 45 ನಿಮಿಷಗಳ ಅವಧಿಯ ನಾಲ್ಕು ಸೆಷನ್‌ಗಳನ್ನು ಶಿಫಾರಸು ಮಾಡಲಾಗಿದೆ.
ಮಾರ್ಗಸೂಚಿಗಳು ಆನ್‌ಲೈನ್ ಅಥವಾ ಡಿಜಿಟಲ್ ಕಲಿಕೆಯ ಎಂಟು ಹಂತಗಳನ್ನು ಒಳಗೊಂಡಿವೆ - ಯೋಜನೆ, ವಿಮರ್ಶೆ, ವ್ಯವಸ್ಥೆ, ಮಾರ್ಗದರ್ಶನ, ಮಾತುಕತೆ, ನಿಯೋಜನೆ, ಟ್ರ್ಯಾಕ್ ಮತ್ತು ಮೆಚ್ಚುಗೆ. ಇದು ಹಂತ ಹಂತವಾಗಿ ಡಿಜಿಟಲ್ ಶಿಕ್ಷಣದ ಯೋಜನೆ ಮತ್ತು ಅನುಷ್ಠಾನಕ್ಕೆ ಉದಾಹರಣೆಗಳೊಂದಿಗೆ ಮಾರ್ಗದರ್ಶನ ನೀಡುತ್ತದೆ.