ನವದೆಹಲಿ: ಕೊರೊನಾ ಅಬ್ಬರ ಜೋರಾಗಿರುವ ಕಾರಣ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಆನ್ಲೈನ್ ಶಿಕ್ಷಣಕ್ಕಾಗಿ ಹೊಸ ಮಾರ್ಗಸೂಚಿ ರಿಲೀಸ್ ಮಾಡಿದ್ದು, 1ನೇ ತರಗತಿಯಿಂದ 12ನೇ ಕ್ಲಾಸ್ವರೆಗೆ ಇದು ಅನ್ವಯವಾಗಲಿದೆ.
1ರಿಂದ 8ನೇ ತರಗತಿವರೆಗೆ 30ರಿಂದ 45 ನಿಮಿಷದ ಎರಡು ಆನ್ಲೈಸ್ ಕ್ಲಾಸ್ ತೆಗೆದುಕೊಳ್ಳಲು ಹೇಳಲಾಗಿದ್ದು, 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ 45 ನಿಮಿಷದ 4 ಕ್ಲಾಸ್ ತೆಗೆದುಕೊಳ್ಳಬಹುದಾಗಿದೆ ಎಂದು ತಿಳಿಸಿದೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಈ ಮಾಹಿತಿ ನೀಡಿದ್ದು, ಈ ನಿಯಮಗಳನ್ನು ಶಾಲೆ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚಿಸಿದ್ದಾರೆ.
ವೇಳಾಪಟ್ಟಿ ಇಂತಿದೆ:
- 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 30ರಿಂದ 45 ನಿಮಿಷ
- 9-12ನೇ ತರಗತಿ ವಿದ್ಯಾರ್ಥಿಗಳಿಗೆ 30ರಿಂದ 45 ನಿಮಿಷದ ತರಗತಿ
ಕರ್ನಾಟಕದಲ್ಲೂ ಆನ್ಲೈನ್ ವಿಚಾರವಾಗಿ ತಜ್ಞರ ಸಮಿತಿ ಈಗಾಗಲೇ ವರದಿ ನೀಡಿದೆ. 1ರಿಂದ 2ನೇ ತರಗತಿಯ ವಿದ್ಯಾರ್ಥಿಗಳಿಗೆ ಆಟ, ಕಥೆ ರೂಪದ ಚಟುವಟಿಕೆಗಳಿಂದ ವಾರಕ್ಕೆ 3 ದಿನ, 3ರಿಂದ 5ನೇ ತರಗತಿಗಳಿಗೆ ವಾರಕ್ಕೆ 5 ದಿನ ಪ್ರತಿದಿನ 30 ನಿಮಿಷದ 2 ಅವಧಿ ಕ್ಲಾಸ್, 6ರಿಂದ 8ನೇ ತರಗತಿಗೆ 30ರಿಂದ 45 ನಿಮಿಷಗಳ ಗರಿಷ್ಠ 3 ಅವಧಿ ಹಾಗೂ 9-10ನೇ ತರಗತಿಗೆ 30-45 ನಿಮಿಷಗಳ ಪ್ರತಿದಿನದ ಗರಿಷ್ಠ 4 ಅವಧಿಗೆ ಕ್ಲಾಸ್ ತೆಗೆದುಕೊಳ್ಳುವಂತೆ ವರದಿಯಲ್ಲಿ ತಿಳಿಸಲಾಗಿದೆ.