ETV Bharat / bharat

ಚಳಿಗೆ ಉತ್ತರ ಭಾರತ ತತ್ತರ : ದೆಹಲಿಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಶೀತಗಾಳಿ ಸಾಧ್ಯತೆ

author img

By

Published : Dec 22, 2020, 12:04 PM IST

ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಕನಿಷ್ಠ ತಾಪಮಾನ 1-2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಗೋರಖ್‌ಪುರದಲ್ಲಿ ಮಂಜಿನ ಹೊದಿಕೆ ಸೃಷ್ಟಿಯಾಗಿದ್ದು, ನವದೆಹಲಿಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಶೀತಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.

ಚಳಿಗೆ ನಡುಗಿದ ಉತ್ತರ ಭಾರತ
ಚಳಿಗೆ ನಡುಗಿದ ಉತ್ತರ ಭಾರತ

ನವದೆಹಲಿ: ಉತ್ತರ ಭಾರತದಲ್ಲಿ ಕನಿಷ್ಠ ತಾಪಮಾನ 1-2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡ, ಗ್ಯಾಂಗ್ಟಕ್​, ​ಪಶ್ಚಿಮ ಬಂಗಾಳ ಮತ್ತು ವಿದರ್ಭದ ಹೆಚ್ಚಿನ ಭಾಗಗಳಲ್ಲಿ ಕನಿಷ್ಠ 1-2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಚಳಿ ಮಧ್ಯೆಯೂ ಮುಂದುವರೆದ ರೈತರ ಪ್ರತಿಭಟನೆ: ದೆಹಲಿಯಲ್ಲಿ ಶೀತ ಹವಾಮಾನ ಪರಿಸ್ಥಿತಿ ಮುಂದುವರಿದಿದ್ದು, ಕೊರೆಯುವ ಚಳಿಯ ನಡುವೆಯೂ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ. ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಸಿಂಘು ಗಡಿಯಲ್ಲಿ (ದೆಹಲಿ-ಹರಿಯಾಣ ಗಡಿ) 27 ನೇ ದಿನವೂ ಮುಂದುವರೆದಿದೆ.

ಇದನ್ನೂ ಓದಿ:ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ಕೊಟ್ಟಾಯಂ ಪುರಸಭೆ ನೂತನ ಸದಸ್ಯ

ಗೋರಖ್‌ಪುರದಲ್ಲಿ ಮಂಜಿನ ಹೊದಿಕೆ: ನಗರದಲ್ಲಿ ದಟ್ಟ ಮಂಜು ಆವರಿಸಿದ್ದು, ಶೀತ ವಾತಾವರಣವಿದೆ. ಇದರಿಂದ ಜನ-ಜೀವನ ಅಸ್ತವ್ಯಸ್ತವಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ.

ದೆಹಲಿಯಲ್ಲಿ ನಾಲ್ಕು ದಿನ ಶೀತಗಾಳಿ: ನವದೆಹಲಿಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಕನಿಷ್ಠ ತಾಪಮಾನ 3-4 ಡಿಗ್ರಿ ಸೆಲ್ಸಿಯಸ್​ಗೆ ಕುಸಿಯುವ ಸಾಧ್ಯತೆಯಿದೆ. ದಟ್ಟವಾದ ಮಂಜು ಕವಿದ ವಾತಾವರಣವಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.