ನವದೆಹಲಿ: ನಿಮ್ಮ ಐಫೋನ್ನಲ್ಲಿ ಶೌಚಾಲಯದ ಸೀಟಿಗಿಂತ ಕೊಳಕಾಗಿದ್ದು, ಹೆಚ್ಚಿನ ಬ್ಯಾಕ್ಟೀರಿಯಾಗಳು ಇರುತ್ತವೆ ಎಂದು ಸಂಶೋಧನೆಯೊಂದು ಹೇಳುತ್ತದೆ. ಸರಿಯಾದ ರೀತಿಯಲ್ಲಿ ಆ್ಯಪಲ್ ಐಫೋನ್ ಸ್ವಚ್ಛಗೊಳಿಸೋದಕ್ಕೆ ಅಂದ್ರೆ ಸೋಂಕು ನಿವಾರಕವಾನ್ನಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈಗ ಆ್ಯಪಲ್ ಕಂಪನಿಯೇ ಐಫೋನ್ ಅನ್ನು ಯಾವ ರೀತಿ ಸ್ವಚ್ಛಗೊಳಿಸಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಿದೆ.
ಐಫೋನ್ ಮಾತ್ರವಲ್ಲದೇ ಆ್ಯಪಲ್ ಕಂಪನಿಯ ಉತ್ಪನ್ನಗಳನ್ನು ಯಾವ ರೀತಿ ಸುಸ್ಥಿತಿಯಲ್ಲಿಟ್ಟಿಕೊಳ್ಳಬೇಕು ಎಂಬುದರ ಬಗ್ಗೆ ತನ್ನ ವೆಬ್ಸೈಟ್ನಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದೆ. ಆ್ಯಪಲ್ ಉತ್ಪನ್ನಗಳನ್ನು ಸ್ವಚ್ಛಗೊಳಿಸುವಾಗ ಐಸೋಪ್ರೋಪಿಲ್ ಆಲ್ಕೋಹಾಲ್ ಅಥವಾ ಕ್ಲೋರೋಕ್ಸ್ ಸೋಂಕುರಹಿತ ಕಾಗದಗಳನ್ನು ಬಳಸುವಂತೆ ಅದು ಸೂಚಿಸಿದೆ. ಆ್ಯಪಲ್ ಉತ್ಪನ್ನಗಳನ್ನು ಸ್ವಚ್ಛಗೊಳಿಸುವಾಗ ಯಾವುದೇ ಡಿಟರ್ಜೆಂಟ್ ಬಳಕೆ ಮಾಡಬಾರದೆಂದು ಸಲಹೆ ನೀಡಿದೆ.