ETV Bharat / bharat

Editorial: ಬಿಜೆಪಿ ಕೈ ಜಾರಿದ ಜಾರ್ಖಂಡ್, ಅಧಿಕಾರದಲ್ಲಿದ್ದ ಕಮಲ ಪಕ್ಷಕ್ಕೆ ಮುಖಭಂಗವಾಗಲು ಕಾರಣಗಳು ಹಲವು! - ಜಾರ್ಖಂಡ್​​ನಲ್ಲಿ ಬಿಜೆಪಿ ಸೋಲು

ಕುತೂಹಲ ಕೆರಳಿಸಿದ್ದ ಜಾರ್ಖಂಡ್‌ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗೆ ಮುಖಭಂಗವಾಗಿದ್ದು, ಎರಡನೇ ಅವಧಿಗೆ ಸರ್ಕಾರ ರಚನೆ ಮಾಡುವ ಕನಸು ಕಾಣುತ್ತಿದ್ದ ರಘುಬರ್ ​ದಾಸ್​ ಆಸೆ ಮುದುಡಿದೆ.

how the BJP lost jharkhand polls, inside story
ಬಿಜೆಪಿ ಕೈ ಜಾರಿದ ಜಾರ್ಖಂಡ್
author img

By

Published : Dec 27, 2019, 9:18 AM IST

ಜಾರ್ಖಂಡ್ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಫಲಿತಾಂಶಗಳನ್ನು ನೋಡಿದಾಗ ದೇಶದ ಈ ಭಾಗದಲ್ಲಿ ಬಿಜೆಪಿಯ ನೆಲೆ ದುರ್ಬಲಗೊಂಡಿರುವುದು ಕಾಣುತ್ತಿದೆ. ಹೆಚ್ಚು ಸೀಟುಗಳ ನಿರೀಕ್ಷೆ ಇಟ್ಟುಕೊಳ್ಳದಿರುವುದೇ ಅಪರಾಧ ಎಂದೆಣಿಸಿದ್ದ ಬಿಜೆಪಿ ಕಾರ್ಯಕರ್ತರು ಜಾರ್ಖಂಡ್ ವಿಧಾನಸಭೆಯ ಒಟ್ಟು 81 ಸೀಟುಗಳ ಪೈಕಿ ಕನಿಷ್ಟ 65 ಸೀಟುಗಳನ್ನಾದರೂ ಗೆಲ್ಲುತ್ತದೆ ಎಂದು ತಮ್ಮ ಗುರಿಯನ್ನು ಹೊಂದಿದ್ದರು. ಆದರೆ ಬಿಜೆಪಿ ಕೊನೆಯಲ್ಲಿ ಕೇವಲ 25 ಸೀಟುಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

2014ರಲ್ಲಿ ನಡದ ಚುನಾವಣೆಗೆ ಹೋಲಿಸಿದಾಗ ಮತದಾನದಲ್ಲಿ ಈ ಬಾರಿ2.4%ರಷ್ಟು ಹೆಚ್ಚಳ ಕಂಡುಬಂದಿತ್ತು. ಆದರೆ ಈ ಬಾರಿ ತಾವು ಹಿಂದೆ ಪಡೆದ ಸೀಟುಗಳ ಒಂದು ಡಜನ್ ಸೀಟುಗಳನ್ನು ಕಳೆದುಕೊಂಡಿದ್ದು ಬಿಜೆಪಿಯ ಉನ್ನತ ನಾಯಕರನ್ನು ನಿರಾಸೆಗೊಳಿಸಿದೆ. ಕಾಂಗ್ರೆಸ್ ಪಕ್ಷವು ಹಿಂದೆ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ನೊಂದಿಗೆ ತನ್ನ ಸಂಬಂಧವನ್ನು ಕಡಿದುಕೊಂಡಿತ್ತು. ಆದರೆ, ಈಗ ಬಂದಿರುವ ಚುನಾವಣಾ ಫಲಿತಾಂಶಗಳನ್ನು ನೋಡಿ ತಾನು ಜೆಎಂಎಂನ್ನು ದೂರ ತಳ್ಳಿದ್ದು ಎಂತಹ ದೊಡ್ಡ ಪ್ರಮಾದ ಎಂದು ಕಾಂಗ್ರೆಸ್ ಪಕ್ಷಕ್ಕೆ ಅರಿವಾಗಿರುವಂತಿದೆ. ಈಗ ಫಲಿತಾಂಶಗಳು ಕಾಂಗ್ರೆಸ್, ಜೆಎಂಎಂ ಮತ್ತು ಆರ್ ಜೆ ಡಿಗಳ ಮೈತ್ರಿಕೂಟದ ಪರವಾಗಿ ಬಂದಿವೆ. ಜೆಎಂಎಂ 30, ಕಾಂಗ್ರೆಸ್‍ 16, ಮತ್ತು ಆರ್ ಜೆ ಡಿ 1 ಸೀಟುಗಳನ್ನು ಪಡೆದಿವೆ. ಎಲ್ಲವನ್ನೂ ಸೇರಿಸಿದಾಗ ಬಹುಮತಕ್ಕೆ ಅಗತ್ಯವಿದ್ದ 41 ಸೀಟುಗಳಿಗಿಂತಲೂ 6 ಸೀಟುಗಳು ಹೆಚ್ಚಿನ ಸೀಟುಗಳು ಈ ಮೈತ್ರಿಕೂಟಕ್ಕೆ ಲಭ್ಯವಾಗಿವೆ. ಅಧಿಕಾರ ಕಳೆದುಕೊಂಡಿರುವ ಮುಖ್ಯಮಂತ್ರಿ ರಘುವರ್ ದಾಸ್ ಮಾತಾಡುತ್ತಾ ಬಿಜೆಪಿಯು ಕೇಂದ್ರ ಮತ್ತು ರಾಜ್ಯಗಳೆರಡಲ್ಲೂ ಸುಸ್ಥಿರ ಸರ್ಕಾರ ರಚಿಸುವ ಮೂಲಕ ದೇಶದ ಅಭಿವೃದ್ಧಿಯ ರೈಲಿಗೆ ಡಬಲ್ ಎಂಜಿನ್ ಆಗಿ ಕೆಲಸ ಮಾಡಲಿದೆ ಎಂದು ಹೇಳಿದ್ದು ಉತ್ಪ್ರೇಕ್ಷೆಯಿಂದ ಕೂಡಿತ್ತು ಎಂಬ ಅಭಿಪ್ರಾಯ ಇದೀಗ ಬಿಜೆಪಿ ಪಕ್ಷದಲ್ಲಿ ಗಟ್ಟಿಯಾಗತೊಡಗಿದೆ. ಜನರು ವಿಶ್ವಾಸ ಕಳೆದುಕೊಳ್ಳಲು ಸಹ ಮುಖ್ಯಮಂತ್ರಿಯ ಈ ಮಾತು ಕಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದರೊಂದಿಗೆ, ಬುಡಕಟ್ಟು ಆದಿವಾಸಿ ನಾಯಕರಾದ ಅರ್ಜುನ್ ಮುಂಡಾರಂತವರನ್ನು ಪಕ್ಷದ ಕಾರ್ಯಕಲಾಪಗಳಿಂದ ದೂರವಿರಿಸಿದ್ದು ಸಹ ಬಿಜೆಪಿ ಈ ಸಲದ ಚುನಾವಣೆಯಲ್ಲಿ ನಷ್ಟ ಅನುಭವಿಸಲು ಕಾರಣ ಎಂಬ ಭಾವನೆ ಈಗ ಬೆಜೆಪಿಯ ವಲಯದಲ್ಲೇ ದಟ್ಟವಾಗಿ ಕೇಳಿಬರುತ್ತಿದೆ. 2014ರಲ್ಲಿ, ಅಖಿಲ ಜಾರ್ಖಂಡ್ ವಿದ್ಯಾರ್ಥಿ ಸಂಘಟನೆ (AJSU) ಮತ್ತು ಬಿಜೆಪಿಯ ಮೈತ್ರಿಕೂಟಕ್ಕೆ ಕ್ರಮವಾಗಿ 5 ಮತ್ತು 37 ಸೀಟುಗಳು ಲಭಿಸಿ ಸರ್ಕಾರ ರಚಿಸಲು ಸ್ಪಷ್ಟ ಬಹುಮತ ದೊರೆತಿತ್ತು. ಆದರೆ ಸರ್ಕಾರ ರಚಿಸಿದ ಮೇಲೆ AJSU ತೀರಾ ಅಸಂಬದ್ಧ ಬೇಡಿಕೆಗಳನ್ನು ಮುಂದಿಟ್ಟ ಕಾರಣ ಬಿಜೆಪಿ ಮೈತ್ರಿಯಿಂದ ಹೊರಕ್ಕೆ ನಡೆಯಿತು ಎಂದು ಕೆಲವರ ಅನಿಸಿಕೆಯಾಗಿದೆ. ಆದರೆ ಇದೀಗ ಮುಖ್ಯಮಂತ್ರಿ ರಘುವರ ದಾಸ್ ಒಳಗೊಂಡಂತೆ 6 ಮಂದಿ ಹಾಲಿ ಸಚಿವರೇ ಹೀನಾಯ ಸೋಲನುಭವಿಸಿ ಬಿಜೆಪಿಗೆ ಆಗಿರುವ ಅನಾಹುತಕಾರಿ ನಷ್ಟವನ್ನು ನೋಡಿದಾಗ BJP ಮೈತ್ರಿ ಮುರಿದುಕೊಂಡಿದ್ದು ಅದರ ಲೆಕ್ಕದಲ್ಲಿ ಎಲ್ಲೋ ತಪ್ಪಿರುವುದನ್ನು ಸೂಚಿಸುತ್ತದೆ.

2014ರಲ್ಲಿ ಸುಮಾರು 70 ಸಾವಿರ ಮತಗಳ ಮುನ್ನಡೆಯೊಂದಿಗೆ ಗೆಲುವು ಸಾಧಿಸಿದ್ದ ರಘುವರ ದಾಸ್ ಈ ಬಾರಿ ಬಂಡಾಯ ಅಭ್ಯರ್ಥಿ ಸರಯು ರಾಯ್ ಎದುರು ಸೋಲನುಭವಿಸಿದ್ದಾರೆ. ಪಕ್ಷವು ತಳಮಟ್ಟದ ವಾಸ್ತವತೆಯನ್ನು ಗ್ರಹಿಸುವಲ್ಲಿ ಸಂಪೂರ್ಣ ಅಸಮರ್ಥವಾಗಿದೆ ಎನ್ನುವುದಕ್ಕೆ ಇದೇ ಉದಾಹರಣೆ. ಆದರೆ, ರಾಜ್ಯದಲ್ಲಿ ಮತ್ತೆ ರಾಜಕೀಯ ಸ್ಥಿರತೆ ಸ್ಥಾಪನೆಯಾಗಿರುವುದು ಉತ್ತಮ ಬೆಳವಣಿಗೆ ಎನ್ನಬಹುದು. ಕಳೆದ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸೀಟು ಗಳಿಸಿದ್ದಾಗ ಸಹ ಹೀಗೇ ಇತ್ತು.

ಹೊಸ ಸಹಸ್ರಮಾನದ ಶುರುವಿನಲ್ಲಿ ರಚನೆಯಾದ ದೇಶದ ಮೊದಲ ಆದಿವಾಸಿ ರಾಜ್ಯವಾದ ಜಾರ್ಖಂಡ್ ನಲ್ಲಿ ಆರಂಭಿಕ ಹದಿನಾಲ್ಕು ವರ್ಷಗಳ ಅಳ್ವಿಕೆಯ ಅವಧಿ ರಾಜಕೀಯ ಡೋಲಾಯಮಾನದ ಅವಧಿಯಾಗಿತ್ತು. ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ 288 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಸಿದ್ದ ಚುನಾವಣಾ ಆಯೋಗವು ಜಾರ್ಖಂಡಿನ 81 ಕ್ಷೇತ್ರಗಳಿಗೆ 5 ಹಂತದಲ್ಲಿ ಚುನಾವಣೆ ನಡೆಸಿತ್ತು. ಜಾರ್ಖಂಡ್ ರಾಜ್ಯದಲ್ಲಿ ಇರುವ ಪರಿಸ್ಥಿತಿ ಎಷ್ಟು ಅಸ್ಥಿರತೆಯಿಂದ ಕೂಡಿದೆಯೆನ್ನಲು ಇದೇ ಉದಾಹರಣೆ. 2014ರಲ್ಲಿದ್ದಂತೆಯೇ ಈ ಸಲವೂ ರಾಜ್ಯದ ಐದರಲ್ಲಿ ನಾಲ್ಕು ಅಸೆಂಬ್ಲಿ ಸೀಟುಗಳು ಮಿಲಿಟಂಟ್ ಪಡೆಗಳ ಪ್ರಭಾವದಲ್ಲಿದ್ದವು. ಹೀಗಾಗಿ ಚುನಾವಣಾ ಆಯೋಗವು 5 ಹಂತಗಳಲ್ಲಿ ಚುನಾವಣೆ ನಡೆಸಿತು. ಪ್ರಧಾನ ಮಂತ್ರಿ ಮೋದಿ ಹಿಂದಿನ ಚುನಾವಣೆಯ ಸಂದರ್ಭದಲ್ಲಿ ತಮ್ಮ ಪ್ರಚಾರ ಭಾಷಣದಲ್ಲಿ ಮಾತನಾಡುತ್ತಾ, “ಆಸ್ಟ್ರೇಲಿಯಾದಲ್ಲಿ ಇಷ್ಟೇ ಸಂಪನ್ಮೂಲಗಳಿಂದ ಉತ್ತಮ ಪ್ರಗತಿ ಸಾಧ್ಯವಾಗುತ್ತಿದ್ದರೆ ಇಲ್ಲೇಕೆ ಸಾಧ್ಯವಾಗುತ್ತಿಲ್ಲ? ಜಾರ್ಖಂಡ್ ಇನ್ನೂ ಎಷ್ಟು ವರ್ಷ ಅಂತ ಬಿಕ್ಕಟ್ಟುಗಳ ಸುಳಿಯಲ್ಲಿ ನರಳುತ್ತದೆ?” ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು. ಪ್ರಧಾನಿ ಮೋದಿಯ “ಸಬ್ಕಾ ಸಾಥ್ ಸಬ್ಕಾ ವಿಕಾಸ್” ಘೋಷಣೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಜಾರ್ಖಂಡಿನ ಜನತೆ ಅಂದಿನ ಮುಖ್ಯಮಂತ್ರಿ ರಘುವರ್ ದಾಸ್ ಅವರಿಗೆ ಸುಸ್ಥಿರ ಸರ್ಕಾರವೊಂದನ್ನು ರಚಿಸಲು ಅನುವು ಮಾಡಿಕೊಟ್ಟರು. ಆದರೆ ರಘುವರ್ ದಾಸ್ ತಾನು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಜಾರಿಗೆ ತಂದ ವಿವಾದಾತ್ಮಕ ಭೂಸ್ವಾಧಿನ ಕಾಯಿದೆಯ ಕಾರಣದಿಂದಾಗಿ ಜನರ ವಿಶ್ವಾಸ ಕಳೆದುಕೊಂಡರು. ತಾವು ಚುನಾವಣೆಗೆ ಮೊದಲು ಅಭಿವೃದ್ಧಿಯ ರಾಜಕಾರಣ ಮಾಡುವುದಾಗಿ ಮಾತು ಕೊಟ್ಟಿದ್ದನ್ನು ಮರೆತೇಬಿಟ್ಟಿದ್ದರು.. ಬಿಜೆಪಿಯು ಹೆಚ್ಚಾಗಿ ಒಬಿಸಿ ಮತ್ತು ಮೇಲ್ಜಾತಿಗಳ ಮತಬ್ಯಾಂಕಿನ ಮೇಲೆ ಒತ್ತು ನೀಡಿತು. ಈ ವರ್ಗಗಳನ್ನು ಪ್ರಭಾವಿಸಲು ನೋಡಿತು. ಇದಕ್ಕಾಗಿ ಮುಸ್ಲಿಮೇತರ ಧರ್ಮೀಯರ ವಿರುದ್ಧದ ಕಾನೂನುಗಳನ್ನು ‘ಗೋರಕ್ಷಕರು’ ಎಂಬ ಹೆಸರಿನಲ್ಲಿ ತಂದಿದ್ದು 22 ಜನರ ಸಾವಿನಲ್ಲಿ ಪರಿಣಮಿಸಿತು. ಇವೆಲ್ಲವೂ ಕೊನೆಯಲ್ಲಿ ಬಿಜೆಪಿಗೆ ಉಲ್ಟಾ ಹೊಡೆದವು.

ಚುನಾವಣಾ ಪ್ರಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಒಬ್ಬಬ್ಬರೂ ಕನಿಷ್ಟ 9 ಸಲ ಭಾಗವಹಿಸಿದ್ದರ ಹೊರತಾಗಿಯೂ, ಪೌರತ್ವ ಕಾಯ್ದೆಯ ಕುರಿತು ಸ್ಪಷ್ಟನೆ ನೀಡಲು ಪ್ರಯತ್ನಿಸಿದ್ದರ ಹೊರತಾಗಿಯೂ ಜಾರ್ಖಂರಿನ ಜನರು 5 ವರ್ಷ ಆಡಳಿತ ನಡೆಸಿದ ಸರ್ಕಾರವನ್ನು ತಮ್ಮ ಓಟಿನ ಬಲದಿಂದ ಕೆಳಕ್ಕಿಳಿಸುವ ಮೂಲಕ ತಮ್ಮ ಆಕ್ರೋಶವನ್ನು ತೋರಿಸಿದರು.

ಹಲವಾರು ವರ್ಷಗಳಿಂದ ಬಿಜೆಪಿಯು ರಾಜ್ಯ ಚಿಕ್ಕದಿರಲಿ ದೊಡ್ಡದಿರಲಿ ಅಲ್ಲಿ ಹಲವಾರು ಬಗೆಯಲ್ಲಿ ತನ್ನ ಶಕ್ತಿ ಯುಕ್ತಿಗಳ ಮೂಲಕ, ತಂತ್ರಗಾರಿಕೆಯನ್ನು ವಿಸ್ತರಿಸುವ ಮೂಲಕ ಜಯಭೇರಿ ಬಾರಿಸುತ್ತಲೇ ಹೋಗುವ ನವ-ರಾಜಕಾರಣದ ಪಯಣವನ್ನು ಸಾಗಿಸುತ್ತಿದೆ. ಡಿಸೆಂಬರ್ 2017ರ ಹೊತ್ತಿಗೆ ಪಕ್ಷವು ದೇಶದ ಒಟ್ಟಾರೆ ಸೀಟುಗಳ ಪೈಕಿ 71%ರಷ್ಟು ಸೀಟುಗಳನ್ನು ಗೆದ್ದುಕೊಂಡಿತ್ತು. ‘ಕಾಂಗ್ರೆಸ್ ಮುಕ್ತ ಭಾರತ” ಘೋಷಣೆ ಬಿಜೆಪಿಗೆ ಸಾಕಷ್ಟು ಸಹಕಾರಿಯಾಗಿತ್ತು. ಬಿಜೆಪಿಯ ಈ ರಾಷ್ಟ್ರವ್ಯಾಪಿ ಜಯಭೇರಿಯು ಇಡೀ ದೇಶವನ್ನು ಅಚ್ಚರಿಗೊಳಿಸಿದ್ದಷ್ಟೇ ಅಲ್ಲದೇ ವಿರೋಧಪಕ್ಷಗಳನ್ನು ಮೂಕವಿಸ್ಮಿತಗೊಳಿಸಿತ್ತು.

ಒಂದೇ ವರ್ಷದಲ್ಲಿ ಮಧ್ಯಪ್ರದೇಶ, ರಾಜಾಸ್ತಾನ, ಛತ್ತೀಸ್​ಘಡ, ಮಹಾರಾಷ್ಟ್ರ ಮತ್ತು ಜಾರ್ಖಂಡ್​ ಬಿಜೆಪಿ ಕೈಯಿಂದ ದೂರ ಸರಿದಿವೆ. ಕರ್ನಾಟಕದಲ್ಲಿ ಆಡಳಿತಾರೂಢ ಮೈತ್ರಿಕೂಟದಲ್ಲಿ ಬೆಜೆಪಿ ಭಿನ್ನಮತ ಹುಟ್ಟಿಸಿ ತಾನು ಅಧಿಕಾರಕ್ಕೆ ಬಂತು. ಹರ್ಯಾಣದಲ್ಲಿಯೂ ಅದು ಮೈತ್ರಿಕೂಟದಲ್ಲಿ ಆಂತರಿಕ ಭಿನ್ನಮತದಿಂದಾಗಿ ದೂರವಾಗಿದ್ದ ದುಶ್ಯಂತ್ ಚೌತಾಲನೊಂದಿಗೆ ಕೈಜೋಡಿಸಿಕೊಂಡು ಅಧಿಕಾರಕ್ಕೆ ಬಂತು. ಎರಡು ವರ್ಷಗಳ ಹಿಂದೆ ಬಿಜೆಪಿ ಸಾಧಿಸಿದ್ದ ಅಭೂತಪೂರ್ವ ಗೆಲುವುಗಳು ವಿರೋಧ ಪಕ್ಷಗಳು ಪ್ರಜಾತಾಂತ್ರಿಕ ಮಟ್ಟದಲ್ಲಿ ಉಳಿಯಲೂ ಕಷ್ಟಸಾಧ್ಯವೆನ್ನುವ ಪರಿಸ್ಥಿತಿಗೆ ನೂಕಿದ್ದವು. ಮೌಲ್ಯಗಳ ವಿಷಯದಲ್ಲಿ ಕಾಂಗ್ರೆಸ್ ಎಷ್ಟೊಂದು ಭ್ರಷ್ಟಗೊಂಡು ಸಮಕಾಲೀನ ಕಾಂಗ್ರೆಸ್ ರಾಜಕಾರಣವೇ ಮುಗಿಯಿತು ಎನ್ನುವ ಮಟ್ಟಕ್ಕೆ ತಲುಪಿತ್ತು. ಬಿಜೆಪಿಯ ಆಕ್ರಮಣಕಾರಿ ನಡೆಯು ಅನೇಕ ಪ್ರಾದೇಶಿಕ ಪಕ್ಷಗಳ ಅಸ್ತಿತ್ವಕ್ಕೇ ಧಕ್ಕೆ ತಂದಿತ್ತು. ಹಾಗೆಯೇ ಪಕ್ಷದ ಅಜೆಂಡಾ ಏನೇ ಇರಲಿ, ಬಿಜೆಪಿಯ ರಾಷ್ಟ್ರೀಯ ಆಶೋತ್ತರಗಳು ಸ್ಥಳೀಯ ಜನರಿಗೆ ಲಾಭ ತರುವ ರೀತಿಯಲ್ಲಿ ಇರುವಂತೆಯೂ ಅದು ನಡೆದುಕೊಂಡಿತ್ತು. ಹೀಗಲ್ಲದೇ ಹೋದರೆ ಜನರು ಮೇಜುಗಳನ್ನು ಬದಲಿಸಲಬಲ್ಲರು ಎಂಬುದು ಜಾರ್ಖಂಡ್ ಚುನಾವಣೆಗಳ ಮೂಲಕ ಮತ್ತೆ ಸಾಬೀತಾಗಿದೆ. ಪಕ್ಷದ ಮುಖಂಡರು ಈ ಸತ್ಯವನ್ನು ಒಪ್ಪಿಕೊಳ್ಳದೇ ಹೋದರೆ ಬಿಜೆಪಿಯ ವಿರೋಧಿ ಜೆಎಂಎಂಗೆ 30 ಸೀಟುಗಳನ್ನು ನೀಡಿದ ಜಾರ್ಖಂಡ್ ಚುನಾವಣೆ ಮತ್ತು ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಮಹಾರಾಷ್ಟ್ರದಲ್ಲಿ ಸಿಕ್ಕಿದ ಅಧಿಕಾರವು ಇಡೀ ದೇಶದಲ್ಲಿ ವಿರೋಧ ಪಕ್ಷಗಳಿಗೆ ಮುಂದಿನ ಚುನಾವಣೆಗಳಿಗೆ ಸಿಕ್ಕಿದ ಟಾನಿಕ್‍ ಆಗಿ ಪರಿಣಮಿಸಲಿದೆಯಲ್ಲದೇ ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ಚುನಾವಣೆಗಳ ಮೇಲೂ ಪರಿಣಾಮ ಬೀರಲಿದೆ.

---------- Forwarded message ---------
From: Harshakumar Kugwe <mailharsha09@gmail.com>
Date: Fri, Dec 27, 2019, 01:40
Subject: Re: Please translate it ASAP
To: Ravi S <ravi.s@etvbharat.com>

Original title:BJP gets Jhalak in Jharkhand Polls
WordCount: 703

On Thu, Dec 26, 2019 at 7:44 PM Ravi S <ravi.s@etvbharat.com> wrote:
 Dear Harsha ji,
Please translate this copy ASAP. send one copy to me & oneCC to englishdesk@etvbharat    

--
Regards,

Harshakumar Kugwe
http://hasirele.blogspot.in/
Cell: 9008401873
ETV Bharat Logo

Copyright © 2024 Ushodaya Enterprises Pvt. Ltd., All Rights Reserved.