ಮುಂಬೈ: ಟ್ರಾಫಿಕ್ ಸಮಸ್ಯೆ ದೇಶದ ಮಹಾನಗರಗಳಲ್ಲಿ ಕಾಮನ್. ಈ ಸಂದರ್ಭದಲ್ಲಿ ಉಂಟಾಗುವ ಶಬ್ದ ಮಾಲಿನ್ಯ ಎಲ್ಲರಿಗೂ ಕಿರಿಕಿರಿ ಉಂಟು ಮಾಡುತ್ತಿತ್ತು. ರೆಡ್ ಲೈಟ್ ಬಿದ್ದಿದ್ರೂ ಸಹಿತ ವಾಹನ ಸವಾರರು ಹಾರ್ನ್ ಮಾಡಿ ಶಬ್ದ ಮಾಲಿನ್ಯಕ್ಕೆ ಎಡೆಮಾಡಿಕೊಡ್ತಿದ್ರು. ಇದಕ್ಕೆ ಕಡಿವಾಣ ಹಾಕಲು ಮುಂಬೈ ಪೊಲೀಸರು ಹೊಸ ಐಡಿಯಾ ಪ್ರಯೋಗಿಸಿದ್ದಾರೆ.
-
To change your tomorrow, we must change our habits today!
— CP Mumbai Police (@CPMumbaiPolice) January 31, 2020 " class="align-text-top noRightClick twitterSection" data="
We have taken the 1st step to end the menace of excessive honking in #Mumbai. Watch it and #HonkResponsibly. pic.twitter.com/aGP6SlQdUl
">To change your tomorrow, we must change our habits today!
— CP Mumbai Police (@CPMumbaiPolice) January 31, 2020
We have taken the 1st step to end the menace of excessive honking in #Mumbai. Watch it and #HonkResponsibly. pic.twitter.com/aGP6SlQdUlTo change your tomorrow, we must change our habits today!
— CP Mumbai Police (@CPMumbaiPolice) January 31, 2020
We have taken the 1st step to end the menace of excessive honking in #Mumbai. Watch it and #HonkResponsibly. pic.twitter.com/aGP6SlQdUl
ಕೆಂಪು ದೀಪ ಬಿದ್ದಿದ್ರೂ ಸಹ ಹಾರ್ನ್ ಬಾರಿಸುತ್ತಿದ್ದ ಸವಾರರಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿ ಆಗುತ್ತಿತ್ತು. ಈ ಸಮಸ್ಯೆಯನ್ನು ಹೇಗೆ ನಿವಾರಿಸಬೇಕೆಂಬ ಸವಾಲು ಅಲ್ಲಿನ ಟ್ರಾಫಿಕ್ ಪೊಲೀಸರದ್ದಾಗಿತ್ತು. ಕೊನೆಗೂ ಇದಕ್ಕೊಂದು ಹಾದಿಯನ್ನು ಮುಂಬೈ ಪೊಲೀಸರು ಕಂಡುಕೊಂಡಿದ್ದಾರೆ.
ಇಷ್ಟಕ್ಕೂ ಆ ಐಡಿಯಾ ಏನು?: ಸಂಚಾರ ದಟ್ಟಣೆ ಇರುವ ಹಾಗೂ ಅತಿಯಾಗಿ ಹಾರ್ನ್ ಮಾಡುವ ಟ್ರಾಫಿಕ್ ಸಿಗ್ನಲ್ಗಳನ್ನು ಗುರುತಿಸಿಕೊಂಡು ಅಲ್ಲಿ ಡೆಸಿಬೆಲ್ ಮೀಟರ್ ಅಳವಡಿಸಿದರು. ಬಳಿಕ ರೆಡ್ ಸಿಗ್ನಲ್ ಬಿದ್ದಾಗ ವಾಹನ ಸವಾರರು ಅತಿಯಾಗಿ ಹಾರ್ನ್ ಮಾಡುತ್ತಾ ಹೋದ್ರೆ, ಶಬ್ದದ ತೀವ್ರತೆ 85 ಡೆಸಿಬಲ್ ಗಿಂತ ಹೆಚ್ಚಿದ್ದಲ್ಲಿ ಮತ್ತೆ 90 ಸೆಕೆಂಡ್ಗಳ ಕಾಲ ಸಿಗ್ನಲ್ ಬೀಳುತ್ತೆ. ಇದರಿಂದಾಗಿ ವಾಹನ ಸವಾರರು ಅದೇ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ.
ಡೆಸಿಬೆಲ್ ಮೀಟರ್ ಅಳವಡಿಸಿದ ಟ್ರಾಫಿಕ್ ಸಿಗ್ನಲ್ಗಳ ಮೇಲ್ಭಾಗದಲ್ಲಿ ಒಂದು ನಾಮಫಲಕ ಹಾಕಲಾಗಿದೆ. ಅದರಲ್ಲಿ ‘ಹಾಂಕ್ ಮೋರ್, ವೇಯ್ಟ್ ಮೋರ್’ ಅಂತಾ ಬರೆಯಲಾಗಿದೆ. ಅಂದರೆ ಹೆಚ್ಚು ಹೆಚ್ಚು ಹಾರ್ನ್ ಮಾಡಿ, ಹೆಚ್ಚು ಹೆಚ್ಚು ಕಾಯಿರಿ ಎಂದರ್ಥ.
ಈ ಬೋರ್ಡ್ ನೋಡಿದ ಮುಂಬೈ ಸವಾರರು ಸಿಗ್ನಲ್ನಲ್ಲಿ ರೆಡ್ ಲೈಟ್ ಹೋಗಿ ಹಸಿರು ದೀಪ ಬರುವವರೆಗೂ ನಿಶ್ಯಬ್ದ ಕಾಯ್ದುಕೊಳ್ಳುತ್ತಿದ್ದಾರೆ. ಈ ಹೊಸ ಐಡಿಯಾದ ಶಾರ್ಟ್ ಫಿಲ್ಮ್ ಮಾಡಲಾಗಿದ್ದು, ಅದರ ವಿಡಿಯೋವನ್ನು ಮುಂಬೈ ಪೊಲೀಸರು ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಈಗ ಈ ವಿಡಿಯೋ ಸಖತ್ ವೈರಲ್ ಆಗ್ತಿದ್ದು, ನೆಟ್ಟಿಗರ ಜೊತೆ ಪಕ್ಕದ ರಾಜ್ಯಗಳ ಸಚಿವರು ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.