ETV Bharat / bharat

ಹನಿ ಟ್ರ್ಯಾಪ್​ ಜಾಲಕ್ಕೆ ಬಿದ್ದ ಸೈನಿಕರು... ಪಾಕ್​ಗೆ ಗೌಪ್ಯ ಮಾಹಿತಿ ಸೋರಿಕೆ..! - ಐಎಸ್​ಐ

ಜೈಸಲ್ಮೇರ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಸೇನೆಯ ಇಬ್ಬರು ಸಿಬ್ಬಂದಿ ಪಾಕಿಸ್ತಾನ ಮೂಲದ ಐಎಸ್ಐ ಬೀಸಿದ್ದ ಹನಿ ಟ್ರ್ಯಾಪ್ ಜಾಲದಲ್ಲಿ ಸಿಲುಕಿದ್ದಾರೆ. ಈ ವೇಳೆ ಭಾರತದ ಸೈನ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಶತ್ರು ರಾಷ್ಟ್ರಕ್ಕೆ ಬಿಟ್ಟುಕೊಟ್ಟಿದ್ದಾರೆ. ಪೋಖ್ರಾನ್​ ಪ್ರದೇಶದಲ್ಲಿ ಹನಿಟ್ರ್ಯಾಪ್ ಮೂಲಕ ಮಾಹಿತಿ ಸೋರಿಕೆಯಾಗಿದ್ದು ಇದೇ ಮೊದಲಲ್ಲ. ಈ ಹಿಂದೆ ನಾಲ್ಕು ಬಾರಿ ಸೈನಿಕರು ಕೂಡ ಇಂತಹ ಬಲೆಯಲ್ಲಿ ಸಿಲುಕಿದ್ದರು.

ಸಾಂದರ್ಭಿಕ ಚಿತ್ರ
author img

By

Published : Nov 5, 2019, 11:49 PM IST

ಜೋಧ್ಪುರ್​: ಸೇನೆಯ ಆಯಕಟ್ಟಿನ ಹುದ್ದೆಯಲ್ಲಿದ್ದ ಇಬ್ಬರು ಸೇನಾ ಸಿಬ್ಬಂದಿ ಹನಿ ಟ್ರ್ಯಾಪ್​ ಬಲೆಗೆ ಬಿದ್ದು, ಸೇನೆಯ ಗೌಪ್ಯ ಮಾಹಿತಿಯನ್ನು ಶತ್ರು ರಾಷ್ಟ್ರಕ್ಕೆ ಬಿಟ್ಟುಕೊಟ್ಟ ಆಪಾದನೆ ಮೇಲೆ ಗಡಿ ರಕ್ಷಣಾ ಭದ್ರತಾ ಪಡೆಯಿಂದ ಬಂಧಿಸಲ್ಪಟ್ಟಿದ್ದಾರೆ.

ಜೈಸಲ್ಮೇರ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಸೇನಾ ಸಿಬ್ಬಂದಿಯು ಪಾಕಿಸ್ತಾನ ಮೂಲದ ಐಎಸ್ಐ ಬೀಸಿದ್ದ ಹನಿ ಟ್ರ್ಯಾಪ್ ಜಾಲಕ್ಕೆ ಸಿಲುಕಿದ್ದರು ಎಂಬ ಮಾಹಿತಿ ಸಿಕ್ಕಿದೆ. ಪಾಕಿಸ್ತಾನದ ಯುವತಿಯರಿಬ್ಬರೊಂದಿಗೆ ಸ್ನೇಹ ಸಂಬಂಧದಲ್ಲಿ ಸಿಲುಕಿ ಹನಿ ಟ್ರ್ಯಾಪ್​ಗೆ ಒಳಗಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗ್ತಿದೆ.

ಹನಿಟ್ರ್ಯಾಪ್ ನಂತರ ಅವರು ಕೆಲವು ಪ್ರಮುಖ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳಿಗೆ ತಿಳಿದು ಬಂದಿದೆ. ಇದರಿಂದಾಗಿ 12ನೇ ಸಶಸ್ತ್ರ ಪಡೆಗಳ ಸೈನಿಕರಾದ ರವಿ ಮತ್ತು ವಿಚಿತಾ ಅವರನ್ನು ಮಂಗಳವಾರ ಬಂಧಿಸಿ ಹೆಚ್ಚಿನ ವಿಚಾರಣೆಗೆ ಜೈಪುರಕ್ಕೆ ಕರೆದೊಯ್ಯಲಾಗಿದೆ.

ಅಧಿಕೃತ ರಹಸ್ಯ ಕಾಯ್ದೆಯಡಿ ಇಬ್ಬರು ಸೈನಿಕರ ವಿರುದ್ಧ ಮೊಕದ್ದಮೆ ದಾಖಲಾಗಲಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಸೇನೆ ಸೇರಿದಂತೆ ಜಂಟಿ ಗುಪ್ತಚರ ಸಂಸ್ಥೆಗಳು ಜಂಟಿ ವಿಚಾರಣೆ ನಡೆಸಲಿವೆ. ಪೋಖ್ರಾನ್​ ಪ್ರದೇಶದಲ್ಲಿ ಹನಿಟ್ರ್ಯಾಪ್​ ಮೂಲಕ ಮಾಹಿತಿ ಸೋರಿಕೆಯಾಗಿದ್ದು ಇದೇ ಮೊದಲಲ್ಲ. ಈ ಹಿಂದೆ ನಾಲ್ಕು ಬಾರಿ ಸೈನಿಕರು ಇಂತಹ ಮೋಸದ ಜಾಲಕ್ಕೆ ಸಿಲುಕಿರುವ ಉದಾಹರಣೆಗಳಿವೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.