ETV Bharat / bharat

ಚಂಡಮಾರುತಕ್ಕೆ ಮುಳುಗಿದ ಮನೆ: 5 ವರ್ಷದಿಂದ ಶೌಚಾಲಯದಲ್ಲೇ ವೃದ್ಧ ದಂಪತಿ ಜೀವನ! - ಒಡಿಶಾ ಮಯೂರ್​ಭಂಜ್​​ ಸುದ್ದಿ

ವೃದ್ದ ದಂಪತಿ ಕಳೆದ ಐದು ವರ್ಷಗಳಿಂದ ಶೌಚಾಲಯದಲ್ಲೇ ಜೀವನ ಸಾಗಿಸುತ್ತಿದ್ದು, ಇವರಿಗೆ ಸರ್ಕಾರದ ಯಾವುದೇ ಸೌಲಭ್ಯ ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ.

Homeless elderly couple
Homeless elderly couple
author img

By

Published : Sep 24, 2020, 9:37 PM IST

ಮಯೂರ್​ಭಂಜ್ (ಒಡಿಶಾ): ಭೀಕರ ಚಂಡಮಾರುತಕ್ಕೆ ಮನೆ ಕಳೆದುಕೊಂಡಿರುವ ವೃದ್ಧ ದಂಪತಿ ಶೌಚಾಲಯದಲ್ಲೇ ಜೀವನ ನಡೆಸುತ್ತಿದ್ದಾರೆ. ಒಡಿಶಾದ ಮಯೂರ್​ಭಂಜ್​​​ ಜಿಲ್ಲೆಯಲ್ಲಿ ಗಿರಿ ದೇಹರಿ ಹಾಗೂ ಅವರ ವಿಶೇಷಚೇತನ ಪತ್ನಿ ಜಾತಿ ದೇಹುರಿ ಕಳೆದ ಐದು ವರ್ಷಗಳಿಂದ ಇದರಲ್ಲೇ ವಾಸವಾಗಿದ್ದಾರೆ.

ಐದು ವರ್ಷಗಳ ಹಿಂದೆ ಬೀಸಿದ ಚಂಡಮಾರುತಕ್ಕೆ ಮನೆ ಕಳೆದುಕೊಂಡ ದಂಪತಿಗೆ ಇಲ್ಲಿಯವರೆಗೆ ಯಾವುದೇ ಸರ್ಕಾರದ ಸೌಲಭ್ಯ ಸಿಕ್ಕಿಲ್ಲ. ಹೀಗಾಗಿ ಅವರು ಇದರಲ್ಲಿ ಜೀವನ ನಡೆಸುವ ಸ್ಥಿತಿ ನಿರ್ಮಾಣಗೊಂಡಿದೆ.

ಐದು ವರ್ಷದಿಂದ ಶೌಚಾಲಯದಲ್ಲೇ ವೃದ್ಧ ದಂಪತಿ ಜೀವನ!

ಸರ್ಕಾರದ ಯಾವುದೇ ಸಹಾಯ ಸಿಗದ ಕಾರಣ ದಂಪತಿ ಬೀದಿಗಳಲ್ಲಿ ವಾಸ ಮಾಡುವಂತಹ ಸ್ಥಿತಿ ನಿರ್ಮಾಣಗೊಳ್ಳಬಹುದು ಎಂಬ ಭಯದಲ್ಲಿದ್ದು, ಇವರಿಗೆ ಯಾವುದೇ ಆಸ್ತಿ ಇಲ್ಲ. ಈಗಾಗಲೇ ವಯಸ್ಸಾಗಿರುವ ಕಾರಣ ದುಡಿದು ತಿನ್ನುವ ಶಕ್ತಿ ಕೂಡ ಇಲ್ಲ ಎಂದಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಗಿರಿ ದೇಹರಿ ಚಂಡಮಾರುತದಿಂದ ಮನೆ ನಾಶವಾಗಿದೆ. ಆದರೆ, ಅದರ ಪಕ್ಕದಲ್ಲಿದ್ದ ಶೌಚಾಲಯ ಹಾಗೇ ಇದೆ. ಹೀಗಾಗಿ ಅದರಲ್ಲಿ ವಾಸ ಮಾಡುತ್ತಿದ್ದೇವೆ. ಆದರೆ, ಇದರಲ್ಲಿ ಎಷ್ಟು ದಿನ ಜೀವನ ನಡೆಸುತ್ತೇವೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.

ಪ್ರಧಾನ್​ ಮಂತ್ರಿ ಆವಾಸ್​ ಯೋಜನೆಯಡಿ ವಸತಿ ಅನುದಾನಕ್ಕಾಗಿ ಅರ್ಜಿ ಸಲ್ಲಿಸಿದ್ದೆ. ಆದರೆ, ವಸತಿ ಅನುದಾನ ನನಗೆ ಸಿಕ್ಕಿತ್ತು. ಆದರೆ ಮನೆ ನಿರ್ಮಾಣ ಮಾಡಲು ನನ್ನ ಬಳಿ ಹಣವಿರಲಿಲ್ಲ ಎಂದಿದ್ದಾರೆ. ಇವರಿಗೆ ಸರ್ಕಾರದಿಂದ ಪಂಚಣಿ ಹಣ ಕೂಡ ಬರುತ್ತಿಲ್ಲ. ಹೆಂಡತಿ ವಿಶೇಷಚೇತನವಾಗಿದ್ದು, ಸರ್ಕಾರಿ ಅಧಿಕಾರಿಗಳು ಯಾವುದೇ ಸಹಾಯ ಮಾಡಿಲ್ಲ ಎಂದು ತಮ್ಮ ಗೋಳು ಹೇಳಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.