ETV Bharat / bharat

ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಬಿಡುಗಡೆಗೂ ಮುನ್ನವೇ 'ದಬಾಂಗ್​ 3' ವಿರುದ್ಧ ಪ್ರತಿಭಟನೆ - protest against Salman Khan's movie 'Dabangg 3'

'ದಬಾಂಗ್​ 3' ಸಿನಿಮಾದಲ್ಲಿ ಹಿಂದೂ ಸಾಧುಗಳು ಗಿಟಾರ್ ಹಿಡಿದುಕೊಂಡು ಕನ್ನಡಕಗಳನ್ನು ಧರಿಸಿ ನೃತ್ಯ ಮಾಡುತ್ತಿರುವಂತೆ ಅಸಭ್ಯ ಚಿತ್ರಣವನ್ನು ಚಿತ್ರಿಸಿರುವ ದೃಶ್ಯ ಈ ಸಿನಿಮಾದಲ್ಲಿದೆ ಎನ್ನಲಾಗ್ತಿದೆ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತದೆ. ಈ ದೃಶ್ಯವನ್ನು ಸಿನಿಮಾದಿಂದ ತೆಗೆದು ಹಾಕುವವರೆಗೂ ದೇಶಾದ್ಯಂತ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಮಹಾರಾಷ್ಟ್ರದ ಹಿಂದೂ ಜನಜಾಗೃತಿ ಸಮಿತಿ ಎಚ್ಚರಿಕೆ ರವಾನಿಸಿದೆ.

protest against Salman Khan's movie 'Dabangg 3'
'ದಬಾಂಗ್​ 3' ವಿರುದ್ಧ ಪ್ರತಿಭಟನೆ
author img

By

Published : Dec 8, 2019, 4:36 PM IST

ಮುಂಬೈ(ಮಹಾರಾಷ್ಟ್ರ): ಸಲ್ಮಾನ್ ಖಾನ್​ ಅಭಿನಯದ ಬಹುನಿರೀಕ್ಷಿತ ಚಿತ್ರ ದಬಾಂಗ್​ 3 ಬಿಡುಗಡೆಗೂ ಮುನ್ನವೇ ಸಿನಿಮಾ ವಿರುದ್ಧ ಮಹಾರಾಷ್ಟ್ರದ ಹಿಂದೂ ಜನಜಾಗೃತಿ ಸಮಿತಿ ಪ್ರತಿಭಟನೆ ನಡೆಸಿದೆ. ಹಿಂದೂ ಸಾಧುಗಳ (ಸನ್ಯಾಸಿಗಳು) ಕುರಿತು ಅಸಭ್ಯವಾಗಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ದೃಶ್ಯವನ್ನು ತೆಗೆದುಹಾಕುವಂತೆ ಒತ್ತಾಯಿಸಲಾಗಿದೆ.

ಈ ಸಂಬಂಧ ಪ್ರತಿಕ್ರಯಿಸಿರುವ ಹಿಂದೂ ಜನಜಾಗೃತಿ ಸಮಿತಿಯ ಅರವಿಂದ್​ ಪನ್ಸಾರೆ, ದಬಾಂಗ್​ 3 ಸಿನಿಮಾದಲ್ಲಿ ಹಿಂದೂ ಸಾಧುಗಳು ಗಿಟಾರ್ ಹಿಡಿದುಕೊಂಡು ಕನ್ನಡಕಗಳನ್ನು ಧರಿಸಿ ನೃತ್ಯ ಮಾಡುತ್ತಿರುವಂತೆ ಅಸಭ್ಯ ಚಿತ್ರಣವನ್ನು ಚಿತ್ರಿಸಿರುವ ದೃಶ್ಯ ಈ ಸಿನಿಮಾದಲ್ಲಿದೆ ಎನ್ನಲಾಗ್ತಿದೆ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ. ಸಾಧುಗಳನ್ನು ಹಿಂದೂ ಧರ್ಮದಲ್ಲಿ ಗೌರವದಿಂದ ನೋಡಲಾಗುತ್ತದೆ. ಹೀಗಾಗಿ ಈ ರೀತಿಯ ಚಿತ್ರಣಗಳನ್ನು ನಾವು ಸಹಿಸುವುದಿಲ್ಲ. ಈ ದೃಶ್ಯವನ್ನು ಸಿನಿಮಾದಿಂದ ತೆಗೆದುಹಾಕುವವರೆಗೂ ದೇಶಾದ್ಯಂತ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಕಿಡಿಕಾರಿದ್ದಾರೆ.

ಅಲ್ಲದೇ ಸಲ್ಮಾನ್​ ಖಾನ್ ನಮ್ಮ ಪ್ರತಿಭಟನೆಯನ್ನು 'ಪ್ರಚಾರದ ಗಿಮಿಕ್​' ಎಂದು ಕರೆದು ಧಾರ್ಮಿಕ ಭಾವನೆಗಳಿಗೆ ಅನುಮಾನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ನವೆಂಬರ್ 27 ರಂದು ಮಹಾರಾಷ್ಟ್ರ ಹಾಗೂ ಛತ್ತೀಸ್​ಗಢದ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಚಿತ್ರದಲ್ಲಿನ ದೃಶ್ಯದ ಬಗ್ಗೆ ಕಳವಳ ವ್ಯಕ್ತವಾಗಿದೆ. ಅಲ್ಲದೆ, ದೃಶ್ಯವನ್ನು ತೆಗೆದು ಹಾಕುವಂತೆ ಸೆನ್ಸಾರ್ ಮಂಡಳಿಗೆ ಒತ್ತಾಯಿಸಿತ್ತು.

ಇನ್ನು, ಪ್ರಭುದೇವ ನಿರ್ದೇಶನದ ದಬಾಂಗ್​ 3 ಚಿತ್ರವನ್ನು ಸಲ್ಮಾನ್, ಅರ್ಬಾಜ್ ಖಾನ್ ಮತ್ತು ನಿಖಿಲ್ ದ್ವಿವೇದಿ ನಿರ್ಮಾಣ ಮಾಡಿದ್ದು, ಡಿಸೆಂಬರ್ 20 ರಂದು ತೆರೆ ಮೇಲೆ ಬರಲಿದೆ.

Intro:Body:

national

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.