ಇಸ್ಲಾಮಾಬಾದ್: ನೆರೆಯ ಪಾಕಿಸ್ತಾನದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸ್ ಆಗುವ ಮೂಲಕ ಅಲ್ಲಿನ ಇತಿಹಾಸದಲ್ಲೇ ಇದೇ ಮೊದಲ ಬಾರಿ ಎಂಬ ರೀತಿಯಲ್ಲಿ ಹಿಂದೂ ಯುವತಿಯೋರ್ವಳು ಪೊಲೀಸ್ ಆಫೀಸರ್ ಆಗಿ ಆಯ್ಕೆಯಾಗಿದ್ದಾಳೆ.
ಪಾಕ್ನ ಸಿಂಧ್ ಪ್ರಾಂತ್ಯದ ಹಿಂದೂ ಯುವತಿಯಾಗಿರುವ ಪುಷ್ಪಾ ಕೊಲ್ಹಿ ಪೊಲೀಸ್ ಅಧಿಕಾರಿಯಾಗಿ ಈಗಾಗಲೇ ಆಯ್ಕೆಗೊಂಡಿದ್ದು, ಅಧಿಕಾರ ಸಹ ಸ್ವೀಕಾರ ಮಾಡಿದ್ದಾಗಿ ತಿಳಿದು ಬಂದಿದೆ. ಇದೇ ವಿಷಯವಾಗಿ ಈ ಮಾನವ ಹಕ್ಕುಗಳ ಕಾರ್ಯಕರ್ತ ಕಪಿಲ್ ದೇವ್ ತಮ್ಮ ಟ್ವಿಟ್ಟರ್ನಲ್ಲಿ ಮಾಹಿತಿ ಖಚಿತ ಪಡಿಸಿದ್ದಾರೆ.
ಸಿಂಧ್ ಪ್ರಾಂತ್ಯದಲ್ಲಿ ಸಹಾಯಕ ಸಬ್ಇನ್ಸ್ಪೆಕ್ಟರ್ ಆಗಿ ನೇಮಕಗೊಂಡಿರುವುದಕ್ಕೆ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಸಮುದಾಯ ಸಂಭ್ರಮಾಚರಣೆ ಮಾಡಿದೆ. ಇನ್ನು ಪಾಕ್ನ ಸಿಂಧ್ ಪ್ರಾಂತ್ಯದಲ್ಲಿ ಹೆಚ್ಚಿನ ಹಿಂದೂಗಳು ವಾಸವಾಗಿದ್ದಾರೆ.
ಈ ಹಿಂದೆ ಪಾಕಿಸ್ತಾನದ ಸಂಸತ್ತಿನ ಮೇಲ್ಮನೆಗೆ ಹಿಂದೂ ದಲಿತ ಸಮುದಾಯದ ಹಿಂದೂ ಮಹಿಳೆ ಕೃಷ್ಣ ಕುಮಾರಿ ಆಯ್ಕೆಯಾಗಿದ್ದರು.