ಶಿಮ್ಲಾ(ಹಿಮಾಚಲ್ ಪ್ರದೇಶ): ದಟ್ಟ ಮಂಜಿನ ಹೊದಿಕೆ ಹೊದ್ದಿರುವ ಶಿಮ್ಲಾ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ. ಎಲ್ಲೆಡೆ ಶುಭ್ರ ಬಿಳುಪಿನ ಮಂಜು ಹಸಿರೆಲೆ ಮೇಲೆ ಮೊಸರು ಚಲ್ಲಿದಂತೆ ಭಾಸವಾಗುತ್ತಿದೆ.


ಶಿಮ್ಲಾದ ಪ್ರಮುಖ ಪ್ರವಾಸಿ ತಾಣಗಳಾಗಿರುವ ನರ್ಕಂದ, ಕುಫ್ರಿ, ಖರಪಥರ್ ಪ್ರದೇಶಗಳಂತು ಮಂಜಿನಿಂದ ಆವೃತವಾಗಿರುವ ಪರಿ ಶ್ವೇತಾಂಬರಿಗೆ ಶರಣಾದಂತೆ ತೋರುತ್ತದೆ. ಇಲ್ಲಿ ಭೂಮಿ, ಬಾನು, ಮರಗಿಡ, ಕಟ್ಟಡ ಎಲ್ಲವೂ ಒಂದೇ ಪರದೆ ಹೊದ್ದು ಬಂದವರನ್ನು ಇಣುಕಿನೋಡುತ್ತಿವೆಯೇನೋ ಎನಿಸುತ್ತದೆ.


ಇವೆಲ್ಲಾ ಒಂದೆಡೆಯಾದರೆ ಮಂಜಿನ ದಟ್ಟಣೆಯಿಂದ ದಾರಿಗಳೇ ಬಂದ್ ಆಗಿ ಪ್ರಯಾಣ ಕಷ್ಟಸಾಧ್ಯವಾಗಿದ್ದು, ಪ್ರವಾಸಿಗಳು ಮಾತ್ರವಲ್ಲದೇ ಮೂಲ ನಿವಾಸಿಗಳೇ ಪರದಾಡುವಂತಾಗಿದೆ.