ಶಿಮ್ಲಾ: ದೇಶದೆಲ್ಲೆಡೆ ಈಗಾಗಲೆ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಕಾರಣದಿಂದ ಎಲ್ಲೆಂದರಲ್ಲಿ ಉಗಿಯುವುದರಿಂದ ಕೊರೊನಾ ಮತ್ತಷ್ಟು ಜನರಿಗೆ ಹರಡಬಹುದೆಂಬ ಆತಂಕದಿಂದ ಹಿಮಾಚಲ ಪ್ರದೇಶ ಸರ್ಕಾರ ಮುಂದಿನ ಮೂರು ತಿಂಗಳವರೆಗೆ ಚ್ಯುಯಿಂಗ್ ಗಮ್ಗಳನ್ನು ಮಾರಾಟ ಮಾಡುವುದು ಹಾಗೂ ಉಪಯೋಗಿಸುವುದನ್ನು ನಿಷೇಧಿಸಿದೆ.
ಚ್ಯುಯಿಂಗ್ ಗಮ್ ಜಗಿದು ಎಲ್ಲೆಂದರಲ್ಲಿ ಉಗಿಯುವುದರಿಂದ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಬಹುದು ಎಂಬ ಉದ್ದೇಶದಿಂದ ರಾಜ್ಯದಲ್ಲಿ ಮುಂದಿನ ಮೂರು ತಿಂಗಳವರೆಗೆ ಚ್ಯುಯಿಂಗ್ ಗಮ್ಗಳನ್ನು ಮಾರಾಟ ಹಾಗೂ ಉಪಯೋಗಿಸುವುದನ್ನು ಸಂಪೂರ್ಣ ನಿಷೇಧಿಸಿ ಆರೋಗ್ಯ ಮುಖ್ಯ ಕಾರ್ಯದರ್ಶಿ ಆರ್.ಡಿ. ಧಿಮಾನ್ ಆದೇಶ ಹೊರಡಿಸಿದ್ದಾರೆ.
ಚ್ಯುಯಿಂಗ್ ಗಮ್, ಬಬಲ್ ಗಮ್ ಮತ್ತು ಸಂಬಂಧಿತ ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಜೂನ್ 30 ರವರೆಗೆ ನಿಷೇಧಿಸಲಾಗಿದೆ ಎಂದು ಧಿಮಾನ್ ಹೇಳಿದ್ದಾರೆ.