ಹಿಮಾಚಲ ಪ್ರದೇಶ : ಭಾರೀ ಹಿಮಪಾತದಿಂದಾಗಿ 12 ಜನರ ಗುಂಪು ಸಿಲುಕಿಕೊಂಡಿರು ಘಟನೆ ಇಲ್ಲಿನ ಲಹೌಲ್- ಸ್ಪಿತಿ ಜಿಲ್ಲೆಯ ಸಿಸ್ಸು ಪ್ರದೇಶದಲ್ಲಿ ನಡೆದಿದೆ.
ವಿಶ್ವಬ್ಯಾಂಕ್ ಅನುದಾನಿತ ಸರ್ಕಾರಿ ಯೋಜನೆ ಅಭ್ಯಾಸಕ್ಕೆಂದು 10 ಪದವೀದರರು ಸಿಸ್ಸು ಪ್ರದೇಶಕ್ಕೆ ತೆರಳಿದ್ದರು. ಆ ಪ್ರದೇಶದಲ್ಲಿ ಭಾರೀ ಹಿಮ ಸುರಿಯುತ್ತಿದ್ದು, ಪದವೀಧರರು ಸೇರಿ 12 ಜನ ಸಿಲುಕಿಕೊಂಡಿದ್ದಾರೆ.
- " class="align-text-top noRightClick twitterSection" data="">
ಹಿಮಾಚಲ ಪ್ರದೇಶದಲ್ಲಿ ಹಲಾವಾರು ದಿನಗಳಿಂದ ಭಾರಿ ಹಿಮ ಬೀಳುತ್ತಿದೆ. ಮೂರು-ನಾಲ್ಕು ದಿನಗಳಿಂದ ಸುರಿಯುತ್ತಿರುವ ಹಿಮಮಳೆಯಿಂದಾಗಿ ಪ್ರಾಣಿಗಳಿಗೆ ನೀರು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೇ ರಸ್ತೆಗಳು ಹಿಮದಿಂದ ಸಂಪೂರ್ಣ ಮುಚ್ಚಿ ಹೋಗಿದ್ದು, ಸವಾರರು ಪರದಾಡುವಂತಾಗಿದೆ. ಇನ್ನು ಜನರು ಮನೆಯಿಂದ ಹೊರಗೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.
.