ETV Bharat / bharat

ನೀಲಗಿರಿಯಲ್ಲಿ ಭೂಕುಸಿತ, ಸ್ಥಳೀಯರ ಸ್ಥಳಾಂತರ - ಸ್ಥಳೀಯರ ಸ್ಥಳಾಂತರ

ಕಳೆದ ನಾಲ್ಕು ದಿನಗಳಿಂದ ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಪಚ್ಚೆ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.

landslide
landslide
author img

By

Published : Aug 7, 2020, 11:43 AM IST

Updated : Aug 7, 2020, 12:19 PM IST

ಉದಕಮಂಡಲಂ (ತಮಿಳುನಾಡು): ಸತತ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ತಮಿಳುನಾಡಿನ ನೀಲಗಿರಿ ಜಿಲ್ಲೆಯ ಪಚ್ಚೆ ಪ್ರದೇಶದ ಸ್ಥಳೀಯರನ್ನು ಸ್ಥಳಾಂತರಿಸಲಾಗಿದೆ.

ವರದಿಗಳ ಪ್ರಕಾರ, ಆಗಸ್ಟ್ 6ರ ಬೆಳಗ್ಗೆ ಎಮರಾಲ್ಡ್ ಪ್ರದೇಶದ ಸತ್ಯ ನಗರದಲ್ಲಿ ದೊಡ್ಡ ಭೂಕುಸಿತ ಸಂಭವಿಸಿದೆ, ನಂತರ ಭಯಭೀತರಾದ ಸ್ಥಳೀಯರು ತಮ್ಮ ಮನೆಗಳಿಂದ ಹೊರ ಬಂದಿದ್ದಾರೆ. ಘಟನೆಯ ನಂತರ, ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.

ಭೂಕುಸಿತ: ಸ್ಥಳೀಯರ ಸ್ಥಳಾಂತರ

"ಮುಂಜಾನೆ ಇದ್ದಕ್ಕಿದ್ದಂತೆ ಭೂಕುಸಿತದಿಂದಾಗಿ ನಾವು ಈ ಸ್ಥಳದಿಂದ ಪರ್ಯಾಯ ಪ್ರದೇಶಕ್ಕೆ ಹೋಗಬೇಕಾಯಿತು. ಹಾನಿಗೊಳಗಾದ ಪ್ರದೇಶಗಳನ್ನು ಸರ್ಕಾರ ಮತ್ತು ಜಿಲ್ಲಾಡಳಿತ ತೆರವುಗೊಳಿಸಬೇಕು" ಎಂದು ಸ್ಥಳೀಯರು ತಿಳಿಸಿದ್ದಾರೆ.

ನೈಋತ್ಯ ಮಾನ್ಸೂನ್ ಮಳೆಯಿಂದ ನೀಲಗಿರಿ ಜಿಲ್ಲೆಯ ಉದಕಮಂಡಲಂ ಮತ್ತು ಗುಡಲೂರು ಪ್ರದೇಶಗಳಲ್ಲಿ ತೀವ್ರ ಹಾನಿಯಾಗಿದೆ. ಇಟಾಲಾರ್, ಪಚ್ಚೆ ಮತ್ತು ಅವಲಾಂಚೆ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಮಳೆಯಿಂದಾಗಿ, ಈ ಪ್ರದೇಶದಲ್ಲಿ ಹಲವೆಡೆ ಅನೇಕ ಭೂಕುಸಿತಗಳಾಗಿದ್ದು, ಅನೇಕ ಮನೆಗಳು ಹಾನಿಗೀಡಾಗಿವೆ.

Last Updated : Aug 7, 2020, 12:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.