ಚಂಡೀಗಢ (ಪಂಜಾಬ್): ಹರಿಯಾಣ ಮತ್ತು ಪಂಜಾಬ್ ರಾಜ್ಯದ ವಿವಿಧ ಪ್ರದೇಶಗಳಲ್ಲಿ ವರುಣ ತನ್ನ ಆರ್ಭಟ ಮೆರೆದಿದ್ದು, ಎರಡೂ ರಾಜ್ಯಗಳಲ್ಲಿ 1.8 ಮಿ.ಮಿ ನಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎರಡು ರಾಜ್ಯದ ರಾಜಧಾನಿ ಚಂಡೀಗಢದಲ್ಲಿ 1.8ನಷ್ಟು ಮಳೆಯಾಗಿದ್ದು, ಉಳಿದಂತೆ ಬಟಿಂಡಾ ಪ್ರದೇಶದಲ್ಲಿ 27.5, ಫರ್ಡಿಕಾಟ್ನಲ್ಲಿ 19.4, ಹಾಗೂ ಪಂಜಾಬ್ನ ಪಟಾನ್ಕೋಟ್ನಲ್ಲಿ 17 ಮಿ.ಮಿ ಮಳೆಯಾಗಿದೆ.
ಇನ್ನು ಹರಿಯಾಣದ ಅಂಬಾಲ, ಹಿಸ್ಸಾರ್, ಕರ್ನಾಲ್, ರೊಹತಕ್, ಭಿವಾನಿ, ಅಮೃತ್ಸರ್ ಸೇರಿದಂತೆ ಲುದಿಯಾನ ಪ್ರದೇಶಗಳಲ್ಲಿಯೂ 14 ರಿಂದ 16 ಮಿ.ಮಿ ನಷ್ಟು ಮಳೆಯಾಗಿದೆ ಎಂದು ಹವಮಾನ ಇಲಾಖೆ ವರದಿ ಮಾಡಿದೆ.
ಇನ್ನು ಈ ಅಕಾಲಿಕ ಮಳೆಗೆ ಪಂಜಾಬ್ ರೈತರು ತಮ್ಮ ಗೋಧಿ ಬೆಳೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಈ ಮಳೆಯಿಂದಾಗಿ ಗೋಧಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ಪಂಜಾಬ್ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಪಂಜಾಬ್ ಕೃಷಿ ಇಲಾಖೆಯ ನಿರ್ದೇಶಕ ಸುತಂತರ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಪ್ರಸ್ತುತ ದಿನದಲ್ಲಿ ಮಳೆಯಿಂದ ಗೋಧಿ ಬೆಳೆಗೆ ಯಾವುದೇ ಹಾನಿ ಆಗುವುದಿಲ್ಲ, ಆದರೆ ಮಳೆಯೊಂದಿಗೆ ಜೋರಾದ ಗಾಳಿ ಬೀಸತೊಡಗಿದರೆ, ಬೆಳೆ ಇಳುವರಿಯಲ್ಲಿ ಕುಂಟಿತವಾಗುತ್ತದೆ ಎಂದಿದ್ದಾರೆ.